ಮುಟ್ಟಿದರೆ ಮುನಿ ಗಿಡವು ಗ್ರಾಮೀಣ ಭಾಗದ ಜನರಿಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಖಂಡಿತವಾಗಿಯೂ ಎಲ್ಲರಿಗೂ ತಿಳಿದಿರಲೆಬಹುದಾದಂತಹ ಒಂದು ಗಿಡವೆಂದರೆ ತಪ್ಪಾಗಲಾರದು, ಯಾಕಂದ್ರೆ ಇದೊಂದು ಬಹಳ ವಿಶಿಷ್ಟವಾದ ಸಂತತಿಯಾಗಿದೆ ನಾವು ಈ ಗಿಡದ ಹತ್ತಿರ ಹೋಗಿ ಅದನ್ನು ಮುಟ್ಟಿದರೆ ಸಾಕು ಅದು ತನ್ನ ಎಲೆಗಳನ್ನು ಮುಚ್ಚಿಕೊಳ್ಳುತ್ತದೆ. ಹಾಗಂದ್ರೆ ಇದು ಯಾವುದೇ ನಾಚಿಕೆಯಿಂದ ಹಾಗೆ ಮಾಡುವುದಿಲ್ಲ ಇದೊಂದು ನಮ್ಮ ಪ್ರಕೃತಿಯ ವೈಶಿಷ್ಟ್ಯ ಆ ಗಿಡವು ತನ್ನನ್ನು ತಾನು ಹಲವಾರು ತೊಂದರೆಗಳಿಂದ ರಕ್ಷಣೆ ಮಾಡಿಕೊಳ್ಳಲು ಮತ್ತು ಕೀಟಗಳಿಂದ ರಕ್ಷಣೆ ಮಾಡಿಕೊಳ್ಳಲು ಪ್ರಕೃತಿಯೇ ಆ ಗಿಡಕ್ಕೆ ನೀಡಿರುವಂತಹ ವರ ಎಂದರೂ ತಪ್ಪಾಗಲಾರದು.
ಗ್ರಾಮೀಣ ಪ್ರದೇಶಗಳಲ್ಲಿ ಇದನ್ನು ಕಳೆ ಗಿಡ ಅಂತಲೂ ಕರೆಯುವವರಿದ್ದಾರೆ ಯಾಕಂದ್ರೆ ಈ ಗಿಡವನ್ನು ನಾವು ನೆಟ್ಟು ಪೋಷಣೆ ಮಾಡಿ ಬೆಳೆಸಬೇಕಾಗಿಲ್ಲ, ಯಾವುದೇ ಜಾಗಗಳಲ್ಲಾಗಲಿ ಈ ಗಿಡವು ಸಮೃದ್ದವಾಗಿ ಬೆಳೆಯುತ್ತದೆ. ಇಂತಹ ಗಿಡವು ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಸಹ ಬಹಳ ಉಪಯೋಗಕಾರಿಯಾಗಿದೆ ಅಂದರೆ ತಪ್ಪಾಗಲಾರದು, ಹೌದು ಈ ಗಿಡದಲ್ಲಿ ಹಲವಾರು ಬೇನೆಗಳನ್ನು ಕಾಯಿಲೆಗಳನ್ನು ವಾಸಿ ಮಾಡುವಂತಹ ಗುಣಗಳು ಅಡಗಿಕೊಂಡಿವೆ ಹಾಗಾದ್ರೆ ಈ ಮುಟ್ಟಿದರೆ ಮುನಿ ಗಿಡದ ಆರೋಗ್ಯಕಾರಿ ಉಪಯೋಗಗಳ ಬಗ್ಗೆ ಕಣ್ಣಾಯಿಸೋಣ ಬನ್ನಿ.
ಮುಟ್ಟಿದರೆ ಮುನಿ ಗಿಡದಲ್ಲಿ ಅದರ ಬೇರು ಎಲೆ ಹೂವು ಎಲ್ಲವೂ ಕೂಡ ಪ್ರಯೋಜನಕಾರಿಯಾಗಿದೆ ಊತವಿರುವ ದೇಹದ ಭಾಗಕ್ಕೆ ಈ ಸಸ್ಯದ ಎಲೆಗಳನ್ನು ಅರೆದು ಹಚ್ಚಿ ಕಾಟನ್ ಬಟ್ಟೆಯಿಂದ ಕಟ್ಟಿದರೆ ಆದಷ್ಟು ಬೇಗ ಊತವು ಕಡಿಮೆಯಾಗಿ ನೋವು ನಿವಾರಣೆಯಾಗುತ್ತದೆ, ಇನ್ನೂ ಮುಟ್ಟಿದರೆ ಮುನಿ ಗಿಡದ ಎಲೆ ಮತ್ತು ಬೇರುಗಳನ್ನು ಅರೆದು ಅದರ ಎರಡರಿಂದ ಮೂರು ಚಮಚ ರಸವನ್ನು ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿನಲ್ಲಿ ಸೇರಿಸಿ ಕುಡಿಯುವುದರಿಂದ ಮಲಬದ್ದತೆ ಸಮಸ್ಯೆ ನಿವಾರಣೆಯಾಗುತ್ತದೆ.
ಅಲ್ಲದೆ ಬಾಣಂತಿಯರು ಮುಟ್ಟಿದರೆ ಮುನಿ ಸೊಪ್ಪಿನ ಗಿಡದ ಎಲೆಗಳನ್ನು ಅರೆದು ಅದರ ರಸವನ್ನು ತೆಗೆದುಕೊಂಡು ಮೊದಲು ಅದನ್ನು ತಮ್ಮ ಅಂಗೈಗಳಿಗೆ ಹಚ್ಚಿಕೊಂಡು ನಂತರ ಅದನ್ನು ತಮ್ಮ ಹೊಟ್ಟೆಯ ಭಾಗಕ್ಕೆ ಲೇಪಿಸಿಕೊಂಡು ಮಸಾಜ್ ಮಾಡುವುದರಿಂದ ಮತ್ತೆ ಅವರು ಮೊದಲಿನಂತೆ ದೇಹವನ್ನು ಫಿಟ್ ಆಗಿಡಲು ಇದು ಸಹಾಯ ಮಾಡುತ್ತದೆ, ಇನ್ನೂ ಮುಟ್ಟಿದರೆ ಮುನಿ ಸೊಪ್ಪಿನ ರಸವನ್ನು ಮೊಡವೆಗಳು ಇರುವ ಜಾಗಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆಗಳು ಕ್ರಮೇಣ ವಾಸಿಯಾಗಿ ಅದರ ಕಲೆಗಳೂ ಸಹ ಶೀಘ್ರ ಗತಿಯಲ್ಲಿ ಮಾಯವಾಗುತ್ತವೆ.
ಮುಟ್ಟಿದರೆ ಮುನಿ ಸೊಪ್ಪಿನ ಎಲೆಗಳನ್ನು ಒಣಗಿಸಿಕೊಂಡು ಅದನ್ನು ಪುಡಿ ಮಾಡಿ ಇಟ್ಟುಕೊಂಡು ಅದನ್ನು ಒಂದು ಗ್ಲಾಸ್ ನೀರಿನಲ್ಲಿ ಸೇರಿಸಿ ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮೂಲವ್ಯಾದಿ ಸಮಸ್ಯೆಯು ನಿವಾರಿಸುತ್ತದೆ, ಗಾಯವಾಗಿ ರಕ್ತಸ್ರಾವವಾಗುತ್ತಿರುವ ದೇಹದ ಭಾಗಗಳಿಗೆ ಮುಟ್ಟಿದರೆ ಮುನಿ ಸೊಪ್ಪಿನ ರಸವನ್ನು ಹಚ್ಚುವುದರಿಂದ ರಕ್ತಸ್ರಾವ ಕಡಿಮೆಯಾಗುವುದಲ್ಲದೆ ಗಾಯವು ಆದಷ್ಟು ಬೇಗ ವಾಸಿಯಾಗುತ್ತದೆ ಮತ್ತು ಇದರ ರಸವನ್ನು ದೇಹಕ್ಕೆ ಹಚ್ಚಿಕೊಂಡು ನಂತರ ಸ್ನಾನ ಮಾಡುವುದರಿಂದ ದೇಹದಲ್ಲಿನ ತುರಿಕೆ ಮತ್ತು ಅಲರ್ಜಿ ಸಮಸ್ಯೆಗಳು ವಾಸಿಯಾಗುತ್ತವೆ