ಚಾಣಕ್ಯರು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಅದರಲ್ಲಿ ಚಾಣಕ್ಯನೀತಿ ಕೂಡ ಒಂದು. ಇದು ಅತ್ಯಂತ ಅದ್ಭುತವಾಗಿದೆ. ಜೀವನವನ್ನು ನಡೆಸಲು ಇದು ಬಹಳ ಸಹಕಾರಿಯಾಗಿದೆ. ಇದರಿಂದ ಜೀವನವನ್ನು ಸುಖಮಯವಾಗಿಸಿಕೊಳ್ಳಬಹುದು. ಹಾಗೆಯೇ ಇವರು ಕೆಲವು ಶಾಸ್ತ್ರಗಳ ಬಗ್ಗೆ ಹೇಳಿದ್ದಾರೆ. ಅದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಒಂದೇ ಕೈಯಿಂದ ಕೆಲವು ಕೆಲಸಗಳನ್ನು ಮಾಡಬಾರದು ಎಂದು ಹಿರಿಯರು ಹೇಳುತ್ತಾರೆ. ಹಾಗೆಯೇ ಚಾಣಕ್ಯ ಕೂಡ ಹೇಳಿದ್ದಾರೆ.ಮೊದಲನೆಯದು ಚಂದನವನ್ನು ಒಂದೇ ಕೈಯಲ್ಲಿ ತೇಯಬಾರದು. ಏಕೆಂದರೆ ಚಂದನವನ್ನು ಭಕ್ತಿಯಿಂದ ದೇವರಿಗೆ ಹಚ್ಚಲಾಗುತ್ತದೆ. ತಿಳಿಯದೇ ಹೀಗೆ ಮಾಡುತ್ತಿದ್ದರೆ ತಿದ್ದಿಕೊಳ್ಳಬೇಕು. ಏಕೆಂದರೆ ಹೀಗೆ ಮಾಡಿದರೆ ಮನೆಯಲ್ಲಿ ಧಾನ್ಯದ ಕೊರತೆ ಉಂಟಾಗುತ್ತದೆ.
ಎರಡನೆಯದಾಗಿ ಪೂಜೆಯ ಕಾರ್ಯಗಳನ್ನು ಮಾಡುವಾಗ ಬಲಭಾಗದಲ್ಲಿನ ಅಂಗದ ಸಂಯೋಗವು ಬಹಳ ಮುಖ್ಯವಾಗಿರುತ್ತದೆ. ದೇವರಿಗೆ ಎತ್ತುವ ಆರತಿಯನ್ನು ಒಂದೇ ಕೈಯಿಂದ ಮಾಡಬಾರದು. ಇದರಿಂದ ದಾಂಪತ್ಯ ಜೀವನ ಸುಂದರವಾಗಿರುತ್ತದೆ. ಪೂರ್ತಿಫಲವು ದಂಪತಿಗಳಿಗೆ ದೊರೆಯುತ್ತದೆ.
ಮೂರನೆಯದಾಗಿ ಪೂಜೆಯಲ್ಲಿ ನೀರು ಅಥವಾ ಹಾಲನ್ನು ಅರ್ಪಿಸುವಾಗ ಒಂದೇ ಕೈಯಿಂದ ಯಾವಾಗಲೂ ಮಾಡಬಾರದು. ಮದುವೆ ಆದವರು ಗಂಡ ಹೆಂಡತಿ ಕೈ ಜೋಡಿಸಬೇಕು. ಮದುವೆ ಆಗದೇ ಇರುವವರು ತಮ್ಮ ಎರಡೂ ಕೈಗಳನ್ನು ಜೋಡಿಸಬೇಕು.
ನಾಲ್ಕನೆಯದಾಗಿ ದಾನ ಮತ್ತು ಧರ್ಮವನ್ನು ಮಾಡುವ ಮೊದಲು ಒಂದು ವಿಷಯವನ್ನು ಸರಿಯಾಗಿ ನೆನಪಿಟ್ಟುಕೊಳ್ಳಬೇಕು. ಅದು ಏನೆಂದರೆ ಯಾವುದೇ ವ್ಯಕ್ತಿಗೆ ವಸ್ತುವನ್ನು ದಾನ ಮಾಡುವ ಮೊದಲು ಎರಡು ಕೈಗಳನ್ನು ಸೇರಿಸಿ ದಾನ ಮಾಡಬೇಕು. ಏಕೆಂದರೆ ಒಂದು ಕೈಯಿಂದ ನೀಡಿದ ದಾನ ಯಾವುದೇ ರೀತಿಯ ಫಲವನ್ನು ನೀಡುವುದಿಲ್ಲ. ಹೀಗೆ ಹಲವಾರು ಶಾಸ್ತ್ರಗಳು ಇವೆ. ಇದನ್ನು ಅನುಸರಿಸಿ ನಡೆದರೆ ಜೀವನ ಸುಂದರವಾಗಿ ಇರುತ್ತದೆ.