ಭಾರತೀಯ ರಿಸರ್ವ್ ಬ್ಯಾಂಕ್ (RBI) ಇದು ಸಾಲಗಾರರಿಗೆ ಒಂದು ಸಿಹಿ ಸುದ್ಧಿಯನ್ನು ನೀಡಿದೆ. ಸ್ಟಾಕ್ ಮಾರ್ಕೆಟಿನಲ್ಲಿ RBI ಒಂದು ದೊಡ್ಡ ಮಟ್ಟದ ಉತ್ಸಾಹ ತುಂಬುವಂತಹ ಒಂದು ಸುದ್ಧಿಯನ್ನು ಹೊರಡಿಸಿ ಈ ಮೂಲಕ RBI ಜನರಿಗೆ ಒಂದು ಸಿಹಿ ಸುದ್ಧಿಯನ್ನು ನೀಡಿದೆ ಎಂದು ಹೇಳಬಹುದು. ಆದರೆ ಇದು ಯಾತಕ್ಕಾಗಿ ಸಾಲಗಾರರಿಗೆ ಸಿಹಿ ಸುದ್ಧಿ? ಸ್ಟಾಕ್ ಮಾರ್ಕೆಟ್ ಇದರ ಬಗ್ಗೆ ನಮಗೆ ಏನೂ ತಿಳಿದೇ ಇಲ್ಲ ಎನ್ನುವವರು ಇದರ ಕುರಿತು ಮುಖ್ಯವಾಗಿ ತಿಳಿಯಲೇ ಬೇಕಾದ ಅಂಶ ಇದು. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ರೆಪೊ ರೇಟ್ ಅನ್ನು RBI ಮೂರನೇ ಬಾರಿಗೆ ಯಾವುದೇ ಬದಲಾವಣೆ ಇಲ್ಲದೆಯೇ ಶೇಕಡಾ 4 ರಲ್ಲಿಯೆ ಮುಂದುವರೆಸಿಕೊಂಡು ಹೋಗುತ್ತಿದೆ. ಅಂದರೆ ಇದರ ಅರ್ಥ RBI ಬೇರೆ ಬೇರೆ ಬ್ಯಾಂಕ್ ಗಳಿಗೆ ನೀಡುವ ಸಾಲ ಇದು ಇನ್ನೂ ಸಹ ಶೇಕಡಾ 4 ರಲ್ಲಿಯೆ ಸಾಗುತ್ತಿದೆ ಇದರಲ್ಲಿ ಯಾವುದೇ ಹೆಚ್ಚು ಕಡಿಮೆ ಆಗಿರುವುದಿಲ್ಲ. ಅಂದರೆ ಸಾಲಗಾರರಿಗೆ ಬ್ಯಾಂಕುಗಳು ಹೆಚ್ಚಿನ ಬಡ್ಡಿಯನ್ನು ವಿಧಿಸಲು ಅಥವಾ ಹೆಚ್ಚಿನ ಬಡ್ಡಿಯನ್ನು ಹೇರಲು ಸಾಧ್ಯವಿಲ್ಲ. ಹಾಗೂ ಜಿಡಿಪಿ ಯ ಬೆಳವಣಿಗೆಯ ಬಗ್ಗೆ RBI ಒಂದು ಆಶಾದಾಯಕ ಭಾವನೆಯನ್ನು ವ್ಯಕ್ತಪಡಿಸಿದೆ.
2021 ರ ಜಿಡಿಪಿ ಯ ಬೆಳವಣಿಗೆಯ ದರವನ್ನು -7.5 ಎಂದು ಘೋಷಿಸಲಾಗಿದೆ. ಇದರ ಕುರಿತಾಗಿ ಒಂದು ಪ್ರಾಜೆಕ್ಟ್ ಕೂಡಾ ತಯಾರಿಸಲಾಗಿದೆ. ಇನ್ನು ಇದನ್ನು ಒಂದು ಆಶಾದಾಯಕ ವಿಚಾರ ಎನ್ನಲು ಕಾರಣ ಏನು ಎಂದು ನೋಡುವುದಾದರೆ , ಮೊದಲು ಜಿಡಿಪಿ ಯ ಬೆಳವಣಿಗೆಯ ದರ -9.5 ಇದ್ದಿತ್ತು ಈಗ ಇದರ ದರ -7.5 ಎಂದು ಘೋಷಿಸಲಾಗಿದ್ದು , ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಈ ಅಂಶಗಳಿಂದಾಗಿ ಸ್ಟಾಕ್ ಮಾರ್ಕೆಟ್ ನಲ್ಲಿ ದೊಡ್ಡ ಮಟ್ಟದ ಬದಲಾವಣೆ ಉಂಟಾಗುತ್ತಿದ್ದು , ಇದನ್ನು ಖುಷಿಯ ವಿಚಾರ ಎಂದೇ ಹೇಳಬಹುದು.
ಈಗ ಸ್ಟಾಕ್ ಮಾರ್ಕೆಟ್ 45,000 ದ ಆಸು ಪಾಸಿನಲ್ಲಿ ಕಾಣಿಸಿಕೊಳ್ಳುತ್ತಿದೆ ಹಾಗೂ ಮುನ್ನೂರಕ್ಕೂ ಅಧಿಕ ಅಂಶಗಳಲ್ಲಿ ಏರಿಕೆ ಕಂಡು ಬರುತ್ತಿದ್ದು , ಬಿಸ್ನೆಸ್ ಕಾರ್ಯಗಳು ಹೆಚ್ಚೆಚ್ಚು ಆಗುತ್ತಿವೆ. GST ಕಲೆಕ್ಷನ್ ಕೂಡಾ ಒಂದು ಲಕ್ಷ ಕೋಟಿಯ ಸಮೀಪ ಇದೆ. ಇದರ ಜೊತೆಗೆ ಅಮೆರಿಕಾದಲ್ಲಿ H1b ವೀಸಾ ಮೇಲೆ ಇದ್ದಂತಹ ನಿರ್ಬಂಧವನ್ನು ಸಹ ತೆರವು ಗೊಳಿಸಿದ ಕಾರಣಕ್ಕಾಗಿ ಸಹ ಈ ಸ್ಟಾಕ್ ಮಾರ್ಕೆಟ್ ನಲ್ಲಿ ಬಿಸ್ನೆಸ್ ಕಾರ್ಯಗಳು ಹೆಚ್ಚಾಗುವುದು ಮಾತ್ರವಲ್ಲದೆ 45,000 ರೂಪಾಯಿಯ ಗಡಿಗೆ ಬಂದು ನಿಂತಿದೆ. ಇದರಿಂದ ಹೆಚ್ಚು ಬಂಡವಾಳ ದೊರಕುವ ಸಾಧ್ಯತೆ ಇದ್ದು, ಸ್ಟಾಕ್ ಮಾರ್ಕೆಟ್ ನಲ್ಲಿ ಜನರು ತಮ್ಮ ಹೂಡಿಕೆಯನ್ನು ಹೆಚ್ಚು ಮಾಡುತ್ತಾ ಇದ್ದಾರೆ.
RBI ನೀಡಿರುವ ಈ ಸಿಹಿ ಹೇಳಿಕೆಯಿಂದ ಮುಂದಿನ ವರ್ಷ ಅಥವಾ ಮುಂಬರುವ ದಿನಗಳಲ್ಲಿ ದರದ ಬೆಳವಣಿಗೆ ಏರಿಕೆ ಆಗುತ್ತದೆ ಎಂದಾದರೆ , ಹೆಚ್ಚು ಹೆಚ್ಚು ಹೂಡಿಕೆ ಮಾಡುವ ಮೂಲಕ ಮುಂಬರುವ ದಿನಗಳಲ್ಲಿ ಹೆಚ್ಚಿನ ಲಾಭವನ್ನು ಗಳಿಸಲು ಸಾಧ್ಯ ಆಗುವುದು. ಈ ಕಾರಣಕ್ಕಾಗಿ ತಮಗೆ ಇಷ್ಟ ಬಂದ ಸ್ಟಾಕ್ ಗಳ ಮೇಲೆ ಹೂಡಿಕೆ ಮಾಡಲಾಗುತ್ತದೆ. ಇದು RBI ನೀಡಿದ ಹೇಳಿಕೆಗೆ ಉತ್ತಮ ಬೆಳವಣಿಗೆ ಎಂದು ಹೇಳಬಹುದು.
ಫೈನಾನ್ಶಿಯಲ್ ಫ್ರೀಡಂ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ. ಲಿಂಕ್ :- https://indianmoney.com/ffa/FmCwbYRO3e