ಡ್ರೈ ಫ್ರೂಟ್ಸ್ ತಿನ್ನುವುದರಿಂದ ನಮ್ಮ ದೇಹಕ್ಕೆ ಹೆಚ್ಚುವರಿ ಶಕ್ತಿ ದೊರೆಯುತ್ತದೆ. ಎಲ್ಲ ಡ್ರೈ ಫ್ರೂಟ್ಸ್ ಕೂಡ ಆರೋಗ್ಯಕ್ಕೆ ಒಳ್ಳೆಯದು. ಹೀಗಿರುವಾಗ ಯಾವ ಡ್ರೈ ಫ್ರೂಟ್ ಸೇವಿಸಿದರೆ ಯಾವ ಖಾಯಿಲೆಗೆ ರಾಮಬಾಣ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಬಹಳ ಉತ್ತಮ. ಡ್ರೈ ಫ್ರೂಟ್ಸ್ ತಿನ್ನುವುದರಿಂದ ಹಲವು ಖಾಯಿಲೆಗಳಿಂದ ದೂರವಿರಬಹುದು. ಪ್ರಮುಖ ಡ್ರೈ ಫ್ರೂಟ್ಸ್ ಗಳೆಂದರೆ ಒಣದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ, ಖರ್ಜೂರ. ಒಣದ್ರಾಕ್ಷಿಯಲ್ಲಿ ಕಬ್ಬಿಣದ ಅಂಶ, ಕ್ಯಾಲ್ಶಿಯಂ, ಸತು, ಮ್ಯಾಗ್ನಿಷಿಯಂ, ತಾಮ್ರದಂತಹ ಅಂಶಗಳಿವೆ. ಒಣದ್ರಾಕ್ಷಿಯನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಖರ್ಜೂರ ಇದು ಒಂದು ಉತ್ತಮ ಡ್ರೈಫ್ರೂಟ್ ಆಗಿದ್ದು ಇದರಲ್ಲಿ ನಾರಿನ ಅಂಶ, ಕಬ್ಬಿಣದ ಅಂಶ ಹೆಚ್ಚಾಗಿದ್ದು ಇದನ್ನು ಸೇವಿಸಿದಾಗ ಹೊಟ್ಟೆಯಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಉತ್ಪತ್ತಿ ಮಾಡುತ್ತದೆ.

ಅಂಜೂರ ಇದು ಕೂಡ ಒಂದು ಉತ್ತಮ ಡ್ರೈಫ್ರೂಟ್ ಆಗಿದೆ. ಅಂಜೂರದಲ್ಲಿ ವಿಟಮಿನ್-ಸಿ, ಬಿ ಸಿಕ್ಸ್, ಖನಿಜಾಂಶಗಳು ಹೆಚ್ಚಿನ ಪ್ರಮಾಣದಲ್ಲಿದೆ. ಅಂಜೂರವನ್ನು ಸೇವಿಸುವುದರಿಂದ ಕ್ಯಾನ್ಸರ್, ಮಧುಮೇಹವನ್ನು ಬರದಂತೆ ತಡೆಯುತ್ತದೆ ಹಾಗೂ ಕ್ಯಾನ್ಸರ್, ಮಧುಮೇಹಿ ರೋಗಿಗಳು ಅಂಜೂರವನ್ನು ತಿನ್ನುತ್ತಿದ್ದರೆ ಅವರ ಆರೋಗ್ಯಕ್ಕೆ ಒಳ್ಳೆಯದು. ಪಿಸ್ತಾ ಇದು ಒಂದು ಆರೋಗ್ಯಕರ ಡ್ರೈ ಫ್ರೂಟ್ ಆಗಿದೆ. ಪಿಸ್ತಾ ಅಧಿಕ ರಕ್ತದೊತ್ತಡ ಇರುವವರಿಗೆ ಉತ್ತಮವಾಗಿದೆ, ಪಿಸ್ತಾ ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುತ್ತದೆ.

ಗೋಡಂಬಿ ಇದು ಆರೋಗ್ಯಕ್ಕೆ ಒಳ್ಳೆಯ ಡ್ರೈ ಫ್ರೂಟ್ ಆಗಿದೆ. ಪ್ರತಿದಿನ ಗೋಡಂಬಿಯ ಸೇವನೆಯನ್ನು ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಪ್ರತಿದಿನ 5-6 ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಅದರ ಸಿಪ್ಪೆ ತೆಗೆದು ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು ಹೀಗೆ ಮಾಡುವುದರಿಂದ ಸುಸ್ತು, ಆಯಾಸ ನಿವಾರಣೆಯಾಗುತ್ತದೆ ಅಲ್ಲದೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿದಿನದ ಆಹಾರದಲ್ಲಿ ಡ್ರೈಫ್ರೂಟ್ಸ್ ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ರೀತಿಯಲ್ಲಿ ಒಳ್ಳೆಯದು. ಚಿಕ್ಕಮಕ್ಕಳಿಗೆ, ಗರ್ಭಿಣಿಯರಿಗೆ ತಪ್ಪದೆ ಡ್ರೈ ಫ್ರೂಟ್ಸ್ ಕೊಡುವುದರಿಂದ ಅವರ ಆರೋಗ್ಯಕ್ಕೆ ಒಳ್ಳೆಯದು. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.

Leave a Reply

Your email address will not be published. Required fields are marked *