ಜೀವನ ಎಂದಮೇಲೆ ಸೋಲು ಗೆಲುವು ಸಹಜ. ಕೆಲವರ ಜೀವನದಲ್ಲಿ ಸೋಲನ್ನು ಹೆಚ್ಚು ಅನುಭವಿಸಬೇಕಾಗುತ್ತದೆ. ಕೆಲವೇ ಸಿನಿಮಾದಲ್ಲಿ ನಟಿಸಿ ಜನರ ಮನಸ್ಸನ್ನು ಗೆದ್ದ ಎಸ್. ನಾರಾಯಣ್ ಅವರು ಜೀವನದಲ್ಲಿ ಸತತವಾಗಿ ಸೋಲನ್ನು ಕಾಣುತ್ತಾರೆ. ಒಬ್ಬ ರೈಟರ್ ಸಹಾಯದಿಂದ ಒಂದು ಸಿನಿಮಾವನ್ನು ಮಾಡಿ ಯಶಸ್ಸನ್ನು ಪಡೆಯುತ್ತಾರೆ. ಹಾಗಾದರೆ ಅದು ಯಾವ ಸಿನಿಮಾ ಹಾಗೂ ರೈಟರ್ ಯಾರು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತೆಗೆಯೋಣ.

ಎಸ್. ನಾರಾಯಣ್ ಅವರು ಸಿನಿಮಾದಲ್ಲಿ ನಟನಾಗಿ, ಸಣ್ಣ ಪಾತ್ರಧಾರಿಯಾಗಿ ನಟಿಸಿರುವ ಜೊತೆಗೆ ನಿರ್ದೇಶನ ಮಾಡಿದರು. ಅವರು ಚೈತ್ರದ ಪ್ರೇಮಾಂಜಲಿ, ಕ್ಯಾಪ್ಟನ್ ಮುಂತಾದ ಸಿನಿಮಾಗಳನ್ನು ಮಾಡಿದರೂ ಅವರಿಗೆ ಯಶಸ್ಸು ಸಿಗದೇ ಬಹಳ ತೊಂದರೆಯನ್ನು ಎದುರಿಸಿದರು. ಅವರು ಬೇಸರದಲ್ಲಿದ್ದರು ಆ ಸಮಯದಲ್ಲಿ ರೈಟರ್ ವಿಜಯಕುಮಾರ್ ಅವರ ಸಹಾಯದಿಂದ ಶ್ರುತಿ ಹಾಗೂ ರಾಮ್ ಕುಮಾರ್, ಚರಣರಾಜ್ ನಟನೆಯಲ್ಲಿ ಸಿನಿಮಾ ಮಾಡಬೇಕೆಂದು ನಿರ್ಧಾರವಾಯಿತು ಎಸ್. ನಾರಾಯಣ್ ಅವರು ಸಾಂಗ್ ರೆಕಾರ್ಡ್ ಮಾಡಿದ ನಂತರ ಲಿರಿಕ್ ಬರೆಯಬೇಕಿತ್ತು ಅವರು ತವರಿನ ತೊಟ್ಟಿಲು ಎಂಬ ಸಾಲನ್ನು ಬರೆದರು ಅದೇ ನಂತರ ಸಿನಿಮಾದ ಟೈಟಲ್ ಆಯಿತು. ಈ ಟೈಟಲ್ ನಾರಾಯಣ್ ಅವರಿಗೆ ಇಷ್ಟವಿರಲಿಲ್ಲ ಆದರೂ ಸಿನಿಮಾ ಶೂಟಿಂಗ್ ಪ್ರಾರಂಭ ಮಾಡಿದರು. ಸಿನಿಮಾ ರಿಲೀಸ್ ಆಗುವವರೆಗೆ ಬಹಳ ಸಮಸ್ಯೆಯನ್ನು ಎದುರಿಸಿ ಸಿನಿಮಾ ರಿಲೀಸ್ ಆಯಿತು. ಸಿನಿಮಾ ಹಿಟ್ ಆಯಿತು 100 ದಿನಗಳ ಕಾಲ ಸಿನಿಮಾ ನಡೆಯಿತು. ಈ ಸಿನಿಮಾದ ನಂತರ ಎಸ್. ನಾರಾಯಣ್ ಅವರು ಯಶಸ್ಸನ್ನು ಗಳಿಸಿದರು.

ತವರಿನ ತೊಟ್ಟಿಲು ಸಿನಿಮಾದ ರೈಟರ್ ವಿಜಯ ಕುಮಾರ್ ಅವರು ತವರು ಅನ್ನುವುದನ್ನು ಇಟ್ಟುಕೊಂಡು 3 ಸಿನೆಮಾವನ್ನು ಮಾಡಿ ಹಿಟ್ ಮಾಡುತ್ತಾರೆ. ತವರಿನ ತೊಟ್ಟಿಲು ಸಿನಿಮಾದ ನಂತರ ವಿಜಯ್ ಕುಮಾರ್ ಅವರಿಗೂ ಕೂಡ ಭಾರಿ ಬೇಡಿಕೆ ಬಂದಿತು. ಎಸ್. ನಾರಾಯಣ್ ಅವರ ನಿರ್ದೇಶನದಲ್ಲಿ ತಾಯಿ ಕೊಟ್ಟ ಸೀರೆ ಎಂಬ ಸಿನಿಮಾವನ್ನು ಮಾಡಬೇಕಾದರೆ ಶ್ರುತಿ ಅವರನ್ನು ಹೀರೋಯಿನ್ನಾಗಿ ಮಾಡಲು ಶೂಟಿಂಗ್ ನಲ್ಲಿ ಎಸ್ ನಾರಾಯಣ್ ಹಾಗೂ ಶ್ರುತಿಯ ನಡುವೆ ಜಗಳವಾಗಿತ್ತು ಆದರೂ ವಿಜಯಕುಮಾರ್ ಅವರು ಶ್ರುತಿ ಅವರನ್ನು ಒಪ್ಪಿಸಿ ತಾಯಿ ಕೊಟ್ಟ ಸೀರೆ ಸಿನಿಮಾವನ್ನು ಮಾಡಿದರು. ಅಜಯ್ ಕುಮಾರ್ ಅವರ ಕಥೆ ಇದ್ದರೆ ಸಿನಿಮಾ ಹಿಟ್ ಆಗುವ ಹಾಗಾಯಿತು. ತವರಿನ ತೊಟ್ಟಿಲು ಸಿನಿಮಾದಿಂದ ಶ್ರುತಿ ಅವರು ಸಹ ಫೇಮಸ್ ನಟಿಯಾದರು ಅವರು ಬೇಡಿಕೆಯ ನಟಿಯಾದರು. ಒಟ್ಟಿನಲ್ಲಿ ಸತತವಾಗಿ ಸೋಲನ್ನೇ ಕಂಡ ಎಸ್.ನಾರಾಯಣ್ ಅವರ ಬದುಕಿನಲ್ಲಿ ಗೆಲುವನ್ನು ತೋರಿಸಿದ್ದು ತವರಿನ ತೊಟ್ಟಿಲು ಸಿನಿಮಾ. ಈ ಮಾಹಿತಿಯನ್ನು ಸಿನಿ ಪ್ರೇಕ್ಷಕರಿಗೆ ತಪ್ಪದೇ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!