ಹೋಟೆಲ್ ಅಥವಾ ಅಂಗಡಿಗಳಲ್ಲಿ ಚೆನ್ನಾಗಿರುವ ಗಟ್ಟಿ ಮೊಸರು ಸಿಗುತ್ತದೆ ಆದರೆ ಮನೆಯಲ್ಲೇ ಹಾಗೆ ಗಟ್ಟಿ ಮೊಸರು ಮಾಡಲು ಸಾಧ್ಯವಿದೆ. ಹಾಗಾದರೆ ಮನೆಯಲ್ಲೇ ಗಟ್ಟಿ ಮೊಸರು ಮಾಡುವುದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಮೊದಲು ಒಂದು ಪಾತ್ರೆಯಲ್ಲಿ ಕಾಲು ಕಪ್ ಗಟ್ಟಿ ಹಾಲನ್ನು ಹಾಕಬೇಕು ನೀರನ್ನು ಹಾಕಬಾರದು ಅದಕ್ಕೆ ಒಂದುವರೆ ಸ್ಪೂನ್ ಹಾಲಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು ಅದಕ್ಕೆ ಎರಡೂವರೆ ಕಪ್ ಹಾಲನ್ನು ಹಾಕಬೇಕು ಗಟ್ಟಿಮೊಸರು ಬೇಡ ಎಂದರೆ ಹಾಲಿನಪುಡಿ ಹಾಕುವ ಅವಶ್ಯಕತೆ ಇರುವುದಿಲ್ಲ. ಈ ಹಾಲನ್ನು ಕಾಯಿಸಲು ಇಡಬೇಕು ಹಾಲಿನಪುಡಿ ಹಾಕಿರುವುದರಿಂದ 1 ಸ್ಪೂನ್ ನಲ್ಲಿ ಕದಡುತ್ತಿರಬೇಕು. ಗಟ್ಟಿಮೊಸರು ಆಗಬೇಕೆಂದರೆ ಹಾಲನ್ನು ಚೆನ್ನಾಗಿ ಕಾಯಿಸಬೇಕು ಹಾಲು ಕುದಿದು ಗಟ್ಟಿಯಾಗುತ್ತಾ ಬರಬೇಕು ನಂತರ ತಣಿಯಲು ಬಿಡಬೇಕು ಸ್ವಲ್ಪ ಬಿಸಿಯಾಗಿರುವಾಗಲೇ ಹೆಪ್ಪು ಹಾಕಬೇಕು. ಮನೆಯಲ್ಲೇ ತಯಾರಿಸಿದ ಮೊಸರನ್ನು ಹೆಪ್ಪಿಗೆ ತೆಗೆದುಕೊಳ್ಳಬೇಕು ಮೂರು ಕಪ್ ಹಾಲಿಗೆ 3 ಸ್ಪೂನ್ ಮೊಸರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಅದಕ್ಕೆ ಸ್ವಲ್ಪ ಬಿಸಿ ಇರುವ ಕಾಯಿಸಿದ ಹಾಲನ್ನು ಹಾಕಿ ಒಂದು ಪ್ಲೇಟ್ ನಿಂದ ಮುಚ್ಚಿ 6-8 ಗಂಟೆ ಬೆಚ್ಚಗಿನ ಸ್ಥಳದಲ್ಲಿ ಇಡಬೇಕು.
ನಂತರ ಎರಡರಿಂದ ಮೂರು ಗಂಟೆ ಫ್ರಿಜ್ ನಲ್ಲಿ ಇಡಬೇಕು 2-3 ಗಂಟೆ ನಂತರ ತೆಗೆದರೆ ಗಟ್ಟಿಮೊಸರು ಆಗಿರುತ್ತದೆ. ಇನ್ನೊಂದು ರೀತಿಯಲ್ಲಿ ಕುಕ್ಕರ್ ನಲ್ಲಿ ಸ್ವಲ್ಪ ನೀರನ್ನು ಬೋಯ್ಲ ಮಾಡಿ ನೀರು ಬಿಸಿ ಇರುವಾಗಲೇ ಹೆಪ್ಪು ಹಾಕಿದ ಪಾತ್ರೆಯನ್ನು ಇಟ್ಟು ಕುಕ್ಕರಿನ ಮುಚ್ಚಳವನ್ನು ಮುಚ್ಚಿ 2-3 ಗಂಟೆ ಹಾಗೆಯೇ ಬಿಡಬೇಕು ಆಗ ಗಟ್ಟಿಮೊಸರು ಆಗುತ್ತದೆ. ಚಳಿಗಾಲದಲ್ಲಿ ಮೊಸರು ಆಗುವುದು ಸ್ವಲ್ಪ ಕಷ್ಟ ಹಾಗಾಗಿ ಬೆಚ್ಚನೆಯ ಸ್ಥಳದಲ್ಲಿ ಇಡಲೆ ಬೇಕು. ಯಾರಿಗೆಲ್ಲ ಗಟ್ಟಿ ಮೊಸರು ಮನೆಯಲ್ಲೇ ಮಾಡಿ ತಿನ್ನಬೇಕು ಅಂತ ಇದಿಯೋ ಅವರು ಈ ರೀತಿ ಮಾಡಿದರೆ ಗಟ್ಟಿ ಮೊಸರು ಸಿಗುತ್ತದೆ.