ಈಗಿನ ದಿನಗಳಲ್ಲಿ ಮಹಿಳೆಯರು ಹೊರಗಡೆ ಕೆಲಸ ಮಾಡುವುದರಿಂದ ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯಲು ಆಗುವುದಿಲ್ಲ. ಹೀಗಿರುವಾಗ ಅಡುಗೆ ಮನೆಯಲ್ಲಿನ ಸಣ್ಣ ಸಣ್ಣ ಸಮಸ್ಯೆಗೆ ಕೆಲವು ಟಿಪ್ ಗಳನ್ನು ಅನುಸರಿಸಬಹುದು. ಅಡುಗೆ ಮನೆಯ ಟಿಪ್ ಗಳನ್ನು ಈ ಲೇಖನದ ಮೂಲಕ ತಿಳಿಯೋಣ.
ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕಬ್ಬಿಣದ ತವಾ, ಪಾತ್ರೆ ಇರುತ್ತದೆ. ಅದು ಬಳಸುವ ಮೊದಲೇ ತುಕ್ಕು ಹಿಡಿಯುತ್ತದೆ. ಅದನ್ನು 5 ನಿಮಿಷದಲ್ಲಿ ಮನೆಯಲ್ಲೇ ಕ್ಲೀನ್ ಮಾಡಬಹುದು ಹೇಗೆಂದರೆ ಒಂದು ಬೌಲ್ ಗೆ ಅರ್ಧ ಸ್ಪೂನ್ ಬೇಕಿಂಗ್ ಸೋಡಾ ಹಾಕಿ ಮಿಕ್ಸ್ ಮಾಡಿ ಅದಕ್ಕೆ ಪಾತ್ರೆ ತೊಳೆಯುವ ಬ್ರಷ್ ನ್ನು ಅದ್ದಿ ಪಾತ್ರೆಯನ್ನು ಉಜ್ಜಬೇಕು ನಂತರ ನೀರಿನಿಂದ ತೊಳೆಯಬೇಕು. ಕಬ್ಬಿಣದ ಪಾತ್ರೆಗಳ ತುಕ್ಕನ್ನು ಬಿಡಿಸದೆ ಬಳಸಿದರೆ ಹಲವು ಖಾಯಿಲೆಗಳು ಬರುವ ಸಾಧ್ಯತೆಗಳಿವೆ.
ಉಜ್ಜಲು ಪಾತ್ರೆ ತೊಳೆಯುವ ಬ್ರಷ್ ಬದಲು ಹಳೆಯ ಟೂತ್ ಬ್ರಷ್ ಬಳಸಬಹುದು ಆದರೆ ಸ್ಟೀಲಿನ ಬ್ರಷ್ ಬಳಸಬಾರದು. ತವಾವನ್ನು ಒಲೆಯ ಮೇಲಿಟ್ಟು ಎರಡು ಸ್ಪೂನ್ ಎಣ್ಣೆ ಹಾಕಿ ವರೆಸಿ ಕಿಚನ್ ಟವೆಲ್ ನಿಂದ ಉಜ್ಜಿದರೆ ತುಕ್ಕು ಹಿಡಿದಿರುವುದು ಹೋಗುತ್ತದೆ. ಮಿಕ್ಸಿ ಜಾರ್ ನಲ್ಲಿ ರುಬ್ಬಿದ ನಂತರ ಸಂಧಿಗಳಲ್ಲಿ ಕ್ಲೀನ್ ಮಾಡಲು ಆಗುವುದಿಲ್ಲ ಅದಕ್ಕೆ ಜಾರ್ ಗೆ ಎರಡು ಡ್ರಾಪ್ ವಿಮ್ ಜಲ್, ಸ್ವಲ್ಪ ನೀರು ಹಾಕಿ 30 ಸೆಕೆಂಡ್ ಗ್ರೈಂಡ್ ಮಾಡಿ ನೀರನ್ನು ಚೆಲ್ಲಿ ವಾಷ್ ಮಾಡಿದರೆ ಕ್ಲೀನ್ ಆಗುತ್ತದೆ. ಮನೆಯಲ್ಲಿರುವ ಚಾಕು ಶಾರ್ಪ್ ಆಗಬೇಕು ಎಂದರೆ ಹಳೆಯ ಕಾಫಿ ಕಪ್ ನ ಹಿಂಭಾಗಕ್ಕೆ ಚಾಕುವನ್ನು ಕೆಳಗಿನಿಂದ ಮೇಲಕ್ಕೆ ಉಜ್ಜಬೇಕು ಆಗ ಚಾಕು ಶಾರ್ಪ್ ಆಗುತ್ತದೆ.
ಸಿಂಕನಲ್ಲಿ ನೀರು ಜಾಮ್ ಆಗುತ್ತದೆ ಆಗ ನೀರನ್ನು ತೆಗೆದು ನಂತರ ರಾತ್ರಿ ಸಿಂಕ್ ನ ಸಣ್ಣ ತೂತುಗಳಲ್ಲಿ ಬೇಕಿಂಗ್ ಸೋಡಾ ಹಾಕಿ ಅದಕ್ಕೆ ಸ್ವಲ್ಪ ವಿನೆಗರ್ ಹಾಕಿ ಬಿಡಬೇಕು ಬೆಳಗ್ಗೆ ಬಿಸಿನೀರಿನಿಂದ ತೊಳೆಯಬೇಕು ಆಗ ಪಾಚಿ, ಕಸ ಬಿಡುತ್ತದೆ. ಹೀಗೆ ವಾರಕ್ಕೆ 1-2 ಸಲ ಮಾಡಿದಾಗ ಸಿಂಕ್ ಕ್ಲೀನಾಗಿರುತ್ತದೆ. ಗೋಡಂಬಿ, ಬಾದಾಮಿ ಇವುಗಳನ್ನು ಜಾಸ್ತಿ ದಿನ ಇಟ್ಟರೆ ಹುಳ ಆಗುತ್ತದೆ ಹುಳ ಆಗದಂತೆ ಮಾಡುವುದು ಹೇಗೆಂದರೆ ಏರ್ ಟೈಟ್ ಕಂಟೇನರ್ ನಲ್ಲಿ ಹಾಕಿ ಮುಚ್ಚಳ ಹಾಕಿ ಫ್ರಿಜ್ ನಲ್ಲಿಟ್ಟರೆ ಹುಳ ಹಿಡಿಯುವುದಿಲ್ಲ. ತೊಗರಿ ಬೇಳೆ ಹುಳ ಹಿಡಿಯಬಾರದು ಎಂದರೆ ಒಂದು ಡಬ್ಬಿಯಲ್ಲಿ ತೊಗರಿ ಬೇಳೆ ಹಾಕಿ ಎರಡು ಒಣ ಮೆಣಸನ್ನು ಹಾಕಿ ಮುಚ್ಚಳ ಮುಚ್ಚಿದರೆ ಹುಳ ಹಿಡಿಯುವುದಿಲ್ಲ. ಸ್ವೀಟ್ ಮಾಡುವಾಗ ಪಾಕ ಗಟ್ಟಿಯಾಗಬಾರದೆಂದರೆ ಸಕ್ಕರೆ ಕರಗಿದ ನಂತರ ಒಂದು ಸ್ಪೂನ್ ನಿಂಬೆ ರಸ ಹಾಕಿದರೆ ಪಾಕ ಗಟ್ಟಿಯಾಗುವುದಿಲ್ಲ.
ರಾಗಿ ಹಿಟ್ಟು, ಗೋಧಿ ಹಿಟ್ಟು ಜಾಸ್ತಿ ದಿನ ಇದ್ದರೆ ಹುಳ ಹಿಡಿಯುತ್ತದೆ. ಯಾವುದೇ ಹಿಟ್ಟನ್ನು ವರೆಸಿದ ಡಬ್ಬಿಯಲ್ಲಿ ಹಾಕಿ ಎರಡು ಪಲಾವ್ ಎಲೆಯನ್ನು ಹಾಕಿ ಮುಚ್ಚಳ ಮುಚ್ಚಿ ಇಟ್ಟರೆ ಹುಳ ಹಿಡಿಯುವುದಿಲ್ಲ. ಕರಿಬೇವಿನ ಎಲೆಯನ್ನು ಒಂದು ಏರ್ ಟೈಟ್ ಕಂಟೇನರ್ ನಲ್ಲಿ ಹಾಕಿ ಫ್ರಿಜ್ ನಲ್ಲಿ ಇಟ್ಟರೆ ಬಹಳ ದಿನದವರೆಗೆ ಕರಿಬೇವು ಇರುತ್ತದೆ. ತಿಂಗಳಿಗೆ ಒಮ್ಮೆ ಮಿಕ್ಸಿ ಜಾರ್ ನಲ್ಲಿ ಸ್ವಲ್ಪ ಉಪ್ಪನ್ನು ಹಾಕಿ ಗ್ರೈಂಡ್ ಮಾಡಿದರೆ ಅದರ ಬ್ಲೇಡ್ ಮಂಡಾಗುವುದಿಲ್ಲ. ಈ ಎಲ್ಲ ಟಿಪ್ ನ್ನು ಅಡುಗೆ ಮನೆಯಲ್ಲಿ ಅನುಸರಿಸಿ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.