ಉತ್ತರ ಕರ್ನಾಟಕ ಭಾಷೆಯಲ್ಲಿ ಮೂಡಿಬರುತ್ತಿರುವ ಗಿಣಿರಾಮ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ನಯನಾ ಅವರು ಎಲ್ಲರಿಗೂ ಇಷ್ಟವಾಗಿದ್ದಾರೆ. ಅವರು ಮೂಲತಃ ಎಲ್ಲಿಯವರು, ಇದಕ್ಕೂ ಮೊದಲು ಯಾವ ಧಾರಾವಾಹಿಯಲ್ಲಿ ನಟಿಸಿದ್ದರು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ನಯನಾ ಪನ್ಯಮಾ ಇವರು ಗಿಣಿರಾಮ ಸೀರಿಯಲ್ ನಲ್ಲಿ ನಾಯಕಿ ಮಹತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರ ತಂದೆಯ ಹೆಸರು ನಾಗರಾಜ್ ಸತ್ಯನಾರಾಯಣ. ಇವರು ಮೂಲತಃ ಬೆಂಗಳೂರಿನವರು. ಇವರು ಅಕ್ಟೋಬರ್ 30, 1995 ರಂದು ಬೆಂಗಳೂರಿನಲ್ಲಿ ಜನಿಸಿದರು ಇವರಿಗೆ ಈಗ 25 ವರ್ಷ ವಯಸ್ಸು. ಇವರು ಬಿಎಸಸಿ ಡಿಗ್ರಿ ಮಾಡಿಕೊಂಡಿದ್ದಾರೆ. ಇವರು ಇದಕ್ಕೂ ಮೊದಲು ಪಾಪಾ ಪಾಂಡು ಸೀರಿಯಲ್ ನಲ್ಲಿ ಚಾರು ಪಾತ್ರಧಾರಿಯಾಗಿ ಕಾಮೆಡಿ ರೋಲನ್ನು ನಟಿಸುತ್ತಿದ್ದರು. ಮಂಗಳೂರು ಹುಡುಗಿ ಹುಬ್ಬಳ್ಳಿ ಹುಡುಗ ಎಂಬ ಸೀರಿಯಲ್ ನಲ್ಲಿ ವೀಣಾ ಪಾತ್ರವನ್ನು ಇವರು ಮಾಡಿದರು. ಈಗ ಗಿಣಿರಾಮ ಸೀರಿಯಲ್ ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರು ಯಾವುದೇ ಪಾತ್ರ ಕೊಟ್ಟರೂ ನಿರ್ವಹಿಸುತ್ತಾರೆ ಎಂದು ಹೇಳಬಹುದು. ಇವರು ಸೀರಿಯಲ್ ಗಳಲ್ಲಿ ನಟಿಸುವ ಜೊತೆಗೆ ನಿರೋಪಣೆ ಮಾಡುತ್ತಾರೆ, ಸಾಂಗ್ ಹಾಡುತ್ತಾರೆ. ಇವರು ಅನೇಕ ಪ್ರೋಗ್ರಾಂಗಳನ್ನು ಮಾಡುತ್ತಾರೆ.
ಇವರು ಉತ್ತಮ ನಟನೆಯ ಕೌಶಲ್ಯವನ್ನು ಹೊಂದಿದ್ದು ಉತ್ತರ ಕರ್ನಾಟಕದ ಭಾಷೆಯನ್ನು ಚೆನ್ನಾಗಿ ಮಾತನಾಡುತ್ತಾರೆ. ಗಿಣಿರಾಮ ಧಾರಾವಾಹಿಯಲ್ಲಿ ನಟಿಸಿದ ನಂತರ ನಯನಾ ಅವರು ಬಹಳ ಜನಪ್ರಿಯರಾಗುತ್ತಿದ್ದಾರೆ. ಅವರು ಉತ್ತಮವಾಗಿ ನಟಿಸುವ ಮೂಲಕ ಜನರ ಮನಸನ್ನು ಗೆಲ್ಲುತ್ತಿದ್ದಾರೆ. ಇಷ್ಟವಿಲ್ಲದಿದ್ದರೂ ಒಂದು ಮನೆಗೆ ಸೊಸೆಯಾಗಿ ಹೋಗಿ ಆ ಮನೆಯವರೊಂದಿಗೆ ಜೀವನ ನಡೆಸುವ ಸಾಮಾನ್ಯ ಕುಟುಂಬದ ಹೆಣ್ಣು ಮಗಳ ಕಥೆಯನ್ನು ಬಹಳ ಸ್ವಾರಸ್ಯವಾಗಿ ಹಾಗೂ ನಯನಾ ಅವರು ಅದ್ಭುತವಾಗಿ ನಟಿಸಿದ್ದಾರೆ. ಒಟ್ಟಿನಲ್ಲಿ ಗಿಣಿರಾಮ ಸೀರಿಯಲ್ ಸೊಗಸಾಗಿ ಮೂಡಿಬರುತ್ತಿದೆ. ನಯನಾ ಅವರು ಹೆಚ್ಚಿನ ಧಾರಾವಾಹಿಗಳಲ್ಲಿ ನಟಿಸಲಿ ಅವರಿಗೆ ಒಳ್ಳೆಯದಾಗಲಿ ಎಂದು ಆಶಿಸೋಣ.