ಬಹಳಷ್ಟು ಜನರಿಗೆ ಆಗಾಗ ಹಲ್ಲುನೋವು ಕಾಣಿಸಿಕೊಳ್ಳುತ್ತದೆ. ಹಲ್ಲು ನೋವನ್ನು ತಡೆದು ಕೊಳ್ಳುವುದು ಅಸಾಧ್ಯ. ಹಲ್ಲು ನೋವು ಬರಲು ಮುಖ್ಯ ಕಾರಣ ದವಡೆ ಸವಕಳಿ ಬರುವುದು. ದವಡೆಯನ್ನು ಗಟ್ಟಿ ಮಾಡಬೇಕಾದರೆ ಮನೆಯಲ್ಲೇ ಸಿಗುವ ದಿನನಿತ್ಯ ಬಳಸುವ ಸಾಮಗ್ರಿಗಳನ್ನು ಬಳಸಿ ದವಡೆಯನ್ನು ಮಸಾಜ್ ಮಾಡುವುದರಿಂದ ಹಲ್ಲು ನೋವು ನಿವಾರಣೆಯಾಗುತ್ತದೆ. ಹಾಗಾದರೆ ಹಲ್ಲು ನೋವಿನ ಮನೆ ಮದ್ದಿನ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ದವಡೆ ನೋವಿಗೆ ಕಾರಣವೆಂದರೆ ದವಡೆ ಸವಕಳಿ ಬರುವುದು. ದವಡೆ ಸವಕಳಿ ಬರಲು ಸ್ವಚ್ಛತೆ ಇಲ್ಲದೆ ಬ್ಯಾಕ್ಟೀರಿಯಾದಿಂದ ದವಡೆ ಬೇಗನೆ ಸವಕಳಿ ಬರುತ್ತದೆ. ಹಾರ್ಡ್ ಇರುವ ಬ್ರಷ್ ಗಳನ್ನು ಬಳಸಿ ಹಲ್ಲನ್ನು ಗಟ್ಟಿಯಾಗಿ ತಿಕ್ಕುವುದರಿಂದ ದವಡೆ ನೋವು ಬರುತ್ತದೆ. ಮತ್ತು ಕಡ್ಡಿಗಳನ್ನು ಹಾಕುವುದರಿಂದ ಹಲ್ಲು ನೋವು ಬರುತ್ತದೆ. ನಾನ್ ವೆಜ್ ತಿನ್ನುವವರು ಹಲ್ಲಿನಲ್ಲಿ ಸಿಕ್ಕಿಹಾಕಿಕೊಂಡ ಆಹಾರವನ್ನು ಕಡ್ಡಿಗಳನ್ನು ಉಪಯೋಗಿಸಿ ತೆಗೆಯುವುದರಿಂದ ದವಡೆ ನೋವು ಬರುತ್ತದೆ. ದವಡೆ ಗಟ್ಟಿಯಾಗಿದ್ದರೆ ಮಾತ್ರ ಹಲ್ಲು ಗಟ್ಟಿಯಾಗಿರುತ್ತದೆ. ಜಾಲಿ ಮರದ ತೊಗಟೆಯನ್ನು ನೆರಳಿನಲ್ಲಿ ಒಣಗಿಸಿ ಅದರ ಚೂರ್ಣವನ್ನು ಮಾಡಿಟ್ಟುಕೊಂಡು ಆ ಚೂರ್ಣದ ಜೊತೆಗೆ ಸ್ವಲ್ಪ ಉಪ್ಪು, ಅರಿಶಿಣ, ಲವಂಗದ ಪುಡಿ ಸೇರಿಸಿ ಇಟ್ಟುಕೊಳ್ಳಬೇಕು ಅದನ್ನು ಪ್ರತಿದಿನ ಬ್ರಷ್ ಮಾಡಿದ ನಂತರ ಮಿಶ್ರಣ ಮಾಡಿದ ಪುಡಿಯಿಂದ ವಸಡನ್ನು ಮೃದುವಾಗಿ ಮಸಾಜ್ ಮಾಡಬೇಕು.
ಹೀಗೆ ಮಾಡಿದರೆ ವಸಡಿನ ನೋವು, ಇನಫೆಕ್ಷನ್, ವಸಡಿನಲ್ಲಿ ಆಗುವ ಕೀವು, ರಕ್ತಸ್ರಾವ ನಿವಾರಣೆ ಆಗುತ್ತದೆ. ಹಳ್ಳಿಗಳಲ್ಲಿ ಜಾಲಿ ಗಿಡಗಳು ಸಿಗುತ್ತದೆ, ಜಾಲಿ ಗಿಡವು ಮಹತ್ವ ಪಡೆದಿದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಜಾಲಿ ತೊಗಟೆಯನ್ನು ಪೇಸ್ಟ್ ಗಳಲ್ಲಿ ಬಳಸುತ್ತಿದ್ದಾರೆ. ಉಪ್ಪು, ಅರಿಶಿಣ ಇವುಗಳು ಹಲ್ಲನ್ನು ಸ್ವಚ್ಛಗೊಳಿಸಿ ಹಲ್ಲಿನ ಆರೋಗ್ಯವನ್ನು ಕಾಪಾಡುತ್ತದೆ. ಹೀಗೆ ಮಾಡಲು ಯಾವುದೇ ಖರ್ಚು ಮಾಡಬೇಕಾಗಿಲ್ಲ ಅಲ್ಲದೇ ನೈಸರ್ಗಿಕವಾಗಿ ಸಿಗುವ ಸಾಮಗ್ರಿಗಳು ಆರೋಗ್ಯಕ್ಕೆ ಉತ್ತಮವಾಗಿದೆ. ಹೀಗೆ ಮಾಡುವುದರಿಂದಲೂ ಹಲ್ಲು ನೋವು ಕಾಣಿಸಿಕೊಂಡರೆ ಇದಕ್ಕೆ ಸಂಬಂಧಪಟ್ಟ ವೈದ್ಯರನ್ನು ಸಂಪರ್ಕಿಸಬೇಕು. ಜಾಲಿ ತೊಗಟೆಯ ಉಪಯೋಗ ಬಹಳ ಮಹತ್ವವಾಗಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಮನೆಯಲ್ಲೇ ಸುಲಭವಾಗಿ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.