ದೇಹದಲ್ಲಿ ಕೆಲವೊಮ್ಮೆ ಅಧಿಕವಾಗಿ ಉಷ್ಣತೆ ಉಂಟಾಗುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ. ವಾತಾವರಣ ಆಗಿರಬಹುದು. ಆಹಾರ ಪದಾರ್ಥಗಳ ಸೇವನೆಯಿಂದ ಆಗಿರಬಹುದು. ಆದರೆ ಬೇಸಿಗೆಯಲ್ಲಿ ಸೂರ್ಯನ ತಾಪದ ಜೊತೆ ದೇಹದ ತಾಪವೂ ಹೆಚ್ಚಾಗಿರುತ್ತದೆ. ಆದ್ದರಿಂದ ನಾವು ಇಲ್ಲಿ ದೇಹದಲ್ಲಿ ಇರುವ ಉಷ್ಣವನ್ನು ತಕ್ಷಣವೇ ಕಡಿಮೆ ಮಾಡಲು ಸುಲಭವಾದ ಪರಿಹಾರಗಳನ್ನು ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಶರೀರದಲ್ಲಿ ಅಧಿಕವಾಗಿ ತಾಪ ಉಂಟಾದರೆ ಅನೇಕ ರೀತಿಯಲ್ಲಿ ತೊಂದರೆ ಉಂಟಾಗುತ್ತದೆ. ಮಲ ಮೂತ್ರಗಳನ್ನು ವಿಸರ್ಜನೆ ಮಾಡುವಾಗ ಉರಿ ಉಂಟಾಗುತ್ತದೆ. ಬೇಸಿಗೆಯಲ್ಲಿ ನೀರನ್ನು ಅಧಿಕವಾಗಿ ಕುಡಿಯಬೇಕು. ಕೆಲವರು ನೀರನ್ನು ಕುಡಿಯುವುದೇ ಇಲ್ಲ. ಆದರೆ ಪ್ರತಿಯೊಬ್ಬ ಮನುಷ್ಯ ದಿನಕ್ಕೆ ನಾಲ್ಕು ಲೀಟರ್ ಆದರೂ ನೀರನ್ನು ಕುಡಿಯಬೇಕು. ಹಾಗೆಯೇ ಆಹಾರದ ಶೈಲಿಯಿಂದ ಕೂಡ ಇದು ಉಂಟಾಗುತ್ತದೆ. ಅಧಿಕವಾಗಿ ಮಸಾಲೆಯ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಕೂಡ ಆಗುತ್ತದೆ. ಅತಿಯಾಗಿ ಕರಿದ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಉಷ್ಣತೆ ಉಂಟಾಗುತ್ತದೆ.

ದೇಹ ಉಷ್ಣವಾಗಿ ಇರುವುದರಿಂದ ಮುಕ್ತಿ ಹೊಂದಬೇಕಾದರೆ ಮನೆಯಲ್ಲಿ ಇರುವ ಮನೆಮದ್ದುಗಳನ್ನು ಬಳಸಬೇಕು. ಇದರಿಂದ ಯಾವುದೇ ರೀತಿಯ ಖರ್ಚು ಕೂಡ ಆಗುವುದಿಲ್ಲ. ಯಾವುದೇ ರೀತಿಯ ಸಮಯವೂ ವ್ಯರ್ಥ ಆಗುವುದಿಲ್ಲ. ಒಂದು ಲೋಟ ನೀರಿಗೆ ಬೆಲ್ಲವನ್ನು ಬೆರೆಸಿ ಕುಡಿಯುವುದರಿಂದ ದೇಹ ತಂಪಾಗಿರುತ್ತದೆ. ಇದನ್ನು ಅನಾದಿ ಕಾಲದಿಂದಲೂ ನಮ್ಮ ಹಿರಿಯರು ರೂಢಿಸಿಕೊಂಡು ಬಂದಿದ್ದಾರೆ. ಹಾಗೆಯೇ ನೀರನ್ನು ಒಂದು ಪಾತ್ರೆಯಲ್ಲಿ ಇಟ್ಟು ಚೆನ್ನಾಗಿ ಕುದಿಸಬೇಕು. ಅದಕ್ಕೆ ಪುದಿನಾ ಎಲೆಯನ್ನು ಹಾಕಬೇಕು. ಕುದ್ದಿದ ನಂತರ ಆ ನೀರನ್ನು ಕುಡಿಯಬೇಕು. ಇದರಿಂದ ದೇಹ ತಂಪಾಗುತ್ತದೆ.

ಕರಿಬೇವನ್ನು ಪುಡಿ ಮಾಡಿಕೊಂಡು ಮಜ್ಜಿಗೆಯಲ್ಲಿ ಹಾಕಿ ಸೇವಿಸುವುದರಿಂದ ಕೂಡ ದೇಹದಲ್ಲಿ ತಂಪು ಆಗುತ್ತದೆ. ಮಜ್ಜಿಗೆಯಿಂದ ದೇಹಕ್ಕೆ ನೀರಿನ ಅಂಶ ಕೂಡ ಆಗುತ್ತದೆ. ನಿಂಬೆಹಣ್ಣು ಮತ್ತು ಕಿತ್ತಳೆಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಹಣ್ಣುಗಳನ್ನು ಜ್ಯೂಸ್ ಮಾಡಿ ಕುಡಿಯಬೇಕು. ಹಾಗೆಯೇ ಹಾಲಿಗೆ ಒಂದು ಚಮಚ ಜೇನು ತುಪ್ಪವನ್ನು ಸೇರಿಸಿ ಕುಡಿಯಬೇಕು. ಕಬ್ಬಿನ ಹಾಲನ್ನು ಹೆಚ್ಚಾಗಿ ಕುಡಿಯುತ್ತಾ ಇರಬೇಕು. ಹಾಗೆಯೇ ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಸಿ ಅದನ್ನು ಪಾನಕ ಮಾಡಿ ಕುಡಿಯಬೇಕು. ಕಲ್ಲಂಗಡಿ ಹಣ್ಣನ್ನು ಅಧಿಕವಾಗಿ ಬೇಸಿಗೆಯಲ್ಲಿ ತಿನ್ನುತ್ತಿರಬೇಕು. ಇವೆಲ್ಲವುಗಳನ್ನು ಮಾಡಿ ಕುಡಿಯುವುದರಿಂದ ದೇಹವನ್ನು ತಂಪು ಮಾಡಿ ಇಟ್ಟುಕೊಳ್ಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!