ಸಾಮಾನ್ಯವಾಗಿ ಚಿಕ್ಕ ಮಕ್ಕಳು ಆಟ ಆಡುತ್ತಿರುವಂತ ಸಂದರ್ಭದಲ್ಲಿ ಯಾವುದಾದರು ವಸ್ತುವನ್ನು ಬಾಯಲ್ಲಿ ಹಾಕಿಕೊಂಡು ಗಾನತಾಲಿನಲ್ಲಿ ಸಿಕ್ಕಾಕಿ ಕೊಂಡಿರುತ್ತದೆ ಅನಂತ ವೇಳೆ ಏನು ಮಾಡಬೇಕು ಅನ್ನೋದು ತಿಳಿಯುವುದಿಲ್ಲ ಅನಂತಹ ಸಮಯದಲ್ಲಿ ಈ ಚಿಕ್ಕ ವಿಧಾನವನ್ನು ಅನುಸರಿಸಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಮಕ್ಕಳು ಆಟವಾಡುತ್ತಿರುವ ಸಂದರ್ಭದಲ್ಲಿ ಯಾವುದೇ ಚಿಕ್ಕ ಡಬ್ಬಿ ಅಥವಾ ರೂಪಾಯಿ ನಾಣ್ಯಗಳು ನುಂಗಿದ್ದರೆ ಅದು ಗಂಟಲಿನಲ್ಲಿ ಸಿಕ್ಕಾಕಿಕೊಂಡು ಮಕ್ಕಳಿಗೆ ಉಸಿರಾಟದ ಸಮಸ್ಯೆ ಎದುರಾಗುತ್ತದೆ ಹಾಗೂ ಒಂದುವೇಳೆ ನೋವು ಆಗಬಹುದು ಆಗಾಗಿ ಅಂತ ಸಂದರ್ಭದಲ್ಲಿ ಏನು ಮಾಡಬೇಕು ಅನ್ನೋದನ್ನ ಮುಂದೆ ನೋಡಿ.
ಹಳ್ಳಿಕಡೆ ಬಹಳಷ್ಟು ಜನ ಈ ವಿಧಾನವನ್ನು ಅನುಸರಿಸಿ ಹಿರಿಯರು ಹಿಂದಿನಕಾಲದಲ್ಲಿ ಪರಿಹಾರ ಕಂಡುಕೊಳ್ಳುತ್ತಿದ್ದರು ಮಕ್ಕಳು ಯಾವುದಾದರು ವಸ್ತುವನ್ನು ನುಂಗಿ ಗಂಟಲಿನಲ್ಲಿ ಸಿಕ್ಕಾಕಿಕೊಂಡಿದ್ದರೆ, ಆ ಮಗುವನ್ನು ಸಂಪೂರ್ಣವಾಗಿ ನೆಲಕ್ಕೆ ಬಗ್ಗಿ ತೆಲೆಕೆಳಗಾಗಿಸಿ ಕುತ್ತಿಗೆಯ ಮೇಲೆ ಒಂದೆರಡು ಬಾರಿ ಕೈಯಿಂದ ಹೆಚ್ಚು ಪೆಟ್ಟಾಗದಂತೆ ಹೊಡೆದರೆ ಗಂಟಲಿನಲ್ಲಿ ಸಿಕ್ಕಾಕಿಕೊಂಡಿರುವಂತ ವಸ್ತು ಬಾಯಿಯ ಮೂಲಕ ನೆಲಕ್ಕೆ ಉದುರುತ್ತದೆ.
ಒಂದು ವೇಳೆ ನಿಮ್ಮ ಮಕ್ಕಳು ನಾಣ್ಯವನ್ನು ನುಂಗಿದ್ದರೆ ಅದರ ಬಗ್ಗೆ ತಿಳಿಯೋಣ, ಮೊದಲನೆಯದಾಗಿ ನಿಮ್ಮ ಮಕ್ಕಳು ನಾಣ್ಯವನ್ನು ನುಂಗಿದ್ದಾರೆಯೇ ಅನ್ನೋದನ್ನ ಖಚಿತ ಪಡಿಸಿಕೊಳ್ಳಬೇಕು ಹೇಗೆ ಅನ್ನೋದಾದರೆ ಮಗುವು ನಿರಂತರವಾಗಿ ಜೊಲ್ಲು ಸುರಿಸುತ್ತಲೇ ಇರುತ್ತದೆ. ಬಹುಕಾಲದಿಂದ ಜೊಲ್ಲು ಸುರಿಸುತ್ತಲೇ ಇದ್ದರೆ, ಅಲ್ಲಿ ಏನೋ ಒಂದು ಸಮಸ್ಯೆ ಇದೆ ಎಂದರ್ಥ ಇನ್ನು ಎರಡನೆಯದಾಗಿ ಮಗುವಿಗೆ ಏನನ್ನು ನುಂಗಲು ಆಗುವುದಿಲ್ಲ. ಈ ಕಾರಣದಿಂದ ಅವರು ನೀರು, ಆಹಾರವನ್ನ ಹಸಿವು ಆಗಿದ್ದರೂ ತಿರಸ್ಕರಿಸಬಹುದು.
ಅತಿಯಾಗಿ ವಾಂತಿ ಮಾಡುವುದನ್ನ ಕಾಣಬಹುದು ಅಥವಾ ಮಗುವು ತನ್ನ ಕತ್ತು ಅಥವಾ ಎದೆಯಲ್ಲಿ ನೋವಾಗುತ್ತಿದೆ ಎಂದು ಗೋಳಿಡಬಹುದು, ಇದಕ್ಕಿದ್ದ ಹಾಗೆ ಜ್ವರ ಶುರು ಆಗುವುದು. ಮಕ್ಕಳು ನಾಣ್ಯವನ್ನು ನುಂಗಿದ್ದರೆ ಶೇಕಡಾ 85 % ಮಲದ ಮೂಲಕ ಹೊರಬರುತ್ತದೆ. ಮಕ್ಕಳು ನಾಣ್ಯ ಅಥವಾ ಯಾವುದೇ ಚಿಕ್ಕ ವಸ್ತುವನ್ನು ನುಂಗಿದ್ದರೆ ಬಾಳೆಹಣ್ಣು ತಿನ್ನಿಸಬೇಕು ಯಾಕೆಂದರೆ ನಾರಿನಂಶವುಳ್ಳ ಬಾಳೆಹಣ್ಣು ಜೀರ್ಣನಾಂಗ ಕ್ರಿಯೆಯ ಮೂಲಕ ಸರವಾಗಿ ಮಲದ ಮೂಲಕ ಹೊರ ಬರಲು ಸಹಕಾರಿ. ಅಷ್ಟೇ ಅಲ್ದೆ ಮಕ್ಕಳಿಗೆ ಆ ಸಮಯದಲ್ಲಿ ಹೆಚ್ಚು ನೀರು ಕುಡಿಸಬೇಕು, ದೇಹ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ಒಂದು ವೇಳೆ ಈ ವಿಧಾನದಿಂದ ವಸ್ತು ಹೊರಬಾರದಿದ್ದರೆ ನಿಮ್ಮ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗುತ್ತದೆ, ಅಲ್ಲಿ ವೈದ್ಯರ ಸಲಹೆಯನ್ನು ಪಡೆದು ಪರಿಹಾರ ಕಂಡುಕೊಳ್ಳಬಹುದಾಗಿದೆ.