ದೊಡ್ಡಪತ್ರೆ ಹೆಚ್ಚಾಗಿ ಹಳ್ಳಿಯ ಕಡೆ ಕಂಡುಬರುತ್ತದೆ. ಇದನ್ನು ಸಣ್ಣ ಮಕ್ಕಳಿಗೆ ಔಷಧಿಗೆ ಹೆಚ್ಚಾಗಿ ಬಳಸುತ್ತಾರೆ. ಇದನ್ನು ಕರ್ಪೂರವಲ್ಲಿ ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ಕರ್ಪೂರದ ಪರಿಮಳವನ್ನು ಹೊಂದಿರುತ್ತದೆ. ಇದು ಸುಮಾರು ನೋಡಲು ಸಾಂಬಾರ್ ಸೊಪ್ಪಿನ ತರಹವೇ ಇರುತ್ತದೆ. ನಾವು ಇಲ್ಲಿ ದೊಡ್ಡಪತ್ರೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಈ ಭೂಮಿಯಲ್ಲಿ ಹಲವಾರು ಸಸ್ಯಗಳು ಅಥವಾ ಗಿಡಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿವೆ. ಹಾಗೆಯೇ ಔಷಧೀಯ ಗುಣ ಹೊಂದಿರುವ ಸಸ್ಯಗಳಲ್ಲಿ ದೊಡ್ಡಪತ್ರೆ ಕೂಡ ಒಂದು. ದೊಡ್ಡಪತ್ರೆ ನೆಗಡಿ ಆದವರಿಗೆ ಒಳ್ಳೆಯ ಫಲಿತಾಂಶ ನೀಡುತ್ತದೆ. ಏಕೆಂದರೆ ನೆಗಡಿ ಅಥವಾ ಶೀತದ ದೇಹ ಪ್ರಕೃತಿಯವರು ದಿನಕ್ಕೆ ಒಂದು ಎಲೆಯನ್ನು ತಿನ್ನಬೇಕು. ಇದರಿಂದ ಕೆಮ್ಮು, ಶೀತ ಯಾವುದೇ ಕಾರಣಕ್ಕೂ ಆಗುವುದಿಲ್ಲ. ಹಾಗೆಯೇ ಚಿಕ್ಕ ಮಕ್ಕಳಿಗೆ ಅರ್ಧ ಎಲೆಯನ್ನು ತಿನ್ನಲು ನೀಡಿದರೆ ಸಾಕಾಗುತ್ತದೆ.

ಕೆಲವು ಕೀಟಗಳು ಮನುಷ್ಯನಿಗೆ ಕಚ್ಚುವುದು ಸಹಜ. ಹೆಚ್ಚಾಗಿ ಜೇನುಹುಳಗಳು ಕಚ್ಚುತ್ತವೆ. ಆಗ ಇದರ ಎಲೆಯ ಪೇಸ್ಟ್ ಮಾಡಿ ಆ ಜಾಗಕ್ಕೆ ಹಚ್ಚಬೇಕು. ಇದರಿಂದ ಬೇಗ ನೋವು ಕಡಿಮೆಯಾಗುತ್ತದೆ. ತಲೆನೋವು ಬಂದಾಗ ಈ ಪೇಸ್ಟ್ ಹಚ್ಚಿದರೆ ತಲೆನೋವು ಕಡಿಮೆ ಆಗುತ್ತದೆ. ಗಂಟಲಿನಲ್ಲಿ ಕಿರಿಕಿರಿ ಎನಿಸಿದರೆ ಎಲೆಗೆ ಜೇನುತುಪ್ಪ ಸೇರಿಸಿ ತಿನ್ನಬೇಕು. ಶೀತ ಆದಾಗ ಮೂಗು ಕಟ್ಟಿದಾಗ ಈ ಎಲೆಯ ವಾಸನೆಯನ್ನು ತೆಗೆದುಕೊಂಡರೆ ಸಾಕು ಮೂಗು ಕ್ಲಿಯರ್ ಆಗುತ್ತದೆ. ಹಾಗೆಯೇ ಇದರ ಪೇಸ್ಟ್ ನ್ನು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ತಲೆಯ ಹೊಟ್ಟು ಸಂಪೂರ್ಣವಾಗಿ ದೂರ ಆಗುತ್ತದೆ.

ಶ್ವಾಸಕೋಶಕ್ಕೆ ಸಂಬಂಧಿಸಿದ ಯಾವುದೇ ಖಾಯಿಲೆ ಇದ್ದರೂ ಸಹ ಇದು ಕಡಿಮೆ ಮಾಡುತ್ತದೆ. ಇದರ ಜ್ಯೂಸ್ ಮಾಡಿ ಕುಡಿಯಬೇಕು. ಇದರಿಂದ ದೇಹದ ಅಲರ್ಜಿ, ಇನ್ಫೆಕ್ಷನ್ ಎಲ್ಲವನ್ನೂ ದೂರ ಮಾಡಿಕೊಳ್ಳಬಹುದು. ಹಾಗೆಯೇ ಗರ್ಭಾಶಯ ಸಮಸ್ಯೆ ಇರುವವರು ದಿನವೂ ಒಂದು ಎಲೆಯನ್ನು ತಿನ್ನುವುದರಿಂದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹಾಗೆಯೇ ಜೀರ್ಣದ ಶಕ್ತಿ ಕೂಡ ಹೆಚ್ಚುತ್ತದೆ. ಅಜೀರ್ಣದ ಸಮಸ್ಯೆ ದೂರವಾಗುತ್ತದೆ. ಇದು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬಹಳ ಒಳ್ಳೆಯದು. ಆದ್ದರಿಂದ ನೀವೂ ಸಹ ಇದನ್ನು ಬಳಸಿ ಪ್ರಯೋಜನ ಪಡೆದುಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!