ಅಕ್ಷರ ಲೋಕದ ಮಾಂತ್ರಿಕ ರವಿ ಬೆಳಗೆರೆ ಅವರ ಬಾಲ್ಯದ ಜೀವನ ಹಾಗೂ ವಿದ್ಯಾಭ್ಯಾಸದ ಬಗ್ಗೆ ಅವರು ಹೇಳಿಕೊಂಡಿರುವ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ.
ಚಿಕ್ಕವರಿದ್ದಾಗ ರವಿ ಬೆಳಗೆರೆ ಅವರು ದೊಡ್ಡಪನನ್ನು ಅಪ್ಪ ಎಂದೇ ಭಾವಿಸಿದ್ದರು ಅಪ್ಪ ಎಂದೇ ಕರೆಯುತ್ತಿದ್ದರು. ಅಮ್ಮ ಸಿನಿಮಾಕ್ಕೆ ಹೋಗುತ್ತಿದ್ದರು ನಾನು ಅವರ ಜೊತೆ ಹೋಗುತ್ತಿದ್ದೆ ನಾನು ಅವರಿಗೆ ಕಿರಿ ಕಿರಿ ಮಾಡುತ್ತಿದ್ದೆ ಆಗ ಅಮ್ಮ ಬೈಯ್ಯುತ್ತಿದ್ದರು ಅಮ್ಮ ಒಬ್ಬಳೇ ಹೋಗುತ್ತಿದ್ದರು ಸಿನಿಮಾ ಮುಗಿಯುವ ಹೊತ್ತಿಗೆ ನಾನು ದೊಡ್ಡಪ್ಪ ಹೋಗಿ ಅಮ್ಮನನ್ನು ಮನೆಗೆ ಕರೆದುಕೊಂಡು ಬರುತ್ತಿದ್ದೆವು ದಾರಿಯಲ್ಲಿ ಬರುವಾಗ ಅಪ್ಪ ಅಮ್ಮನ ಹತ್ತಿರ ಮಾತನಾಡಿಕೊಂಡು ಬರುತ್ತಿದ್ದೆ ಒಮ್ಮೆ ನನ್ನ ತಾಯಿ ನೋಡಪ್ಪ ರವಿ ನೀನು ದೊಡ್ಡ ಧ್ವನಿಯಲ್ಲಿ ನಮ್ಮನ್ನು ಅಪ್ಪ-ಅಮ್ಮ ಎಂದು ಕರೆದರೆ ಜನರು ನಮ್ಮನ್ನು ಗಂಡ-ಹೆಂಡತಿ ಎಂದು ತಿಳಿದುಕೊಳ್ಳುತ್ತಾರೆ ಇವರು ನಿನ್ನ ಅಪ್ಪ ಅಲ್ಲ ಎಂದು ಹೇಳಿದಳು ಆವತ್ತು ನಾನು ದೊಡ್ಡಪನ ಹತ್ತಿರ ನೀವು ನನ್ನ ಅಪ್ಪ ಅಲ್ಲವಾ ಎಂದು ಅಳುತ್ತಿದ್ದೆ ಅವರು ಆಳುತ್ತಿದ್ದರು. ದೊಡ್ಡಪ್ಪ ಬಹಳ ಒಳ್ಳೆಯ ಮನುಷ್ಯರಾಗಿದ್ದರು ಅವರು ನನ್ನ ಹತ್ತಿರ ನಾನು ಕಣೋ, ನನ್ನ ಕಂದ ನಾನಿದಿನಿ ಎಂದು ಹೇಳುತ್ತಿದ್ದರು. ಅವರ ಮಕ್ಕಳಿಗಿಂತ ಹೆಚ್ಚು ನನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಅವರ ಇಬ್ಬರು ಮಕ್ಕಳನ್ನು ನನ್ನ ತಾಯಿ ಬೆಳೆಸಿದರು ಎಂದು ರವಿ ಅವರು ತಮ್ಮ ನೋವನ್ನು ಹೇಳಿಕೊಂಡರು.
ನನ್ನನ್ನು ದಾರಿಯಲ್ಲಿ ನಿಲ್ಲಿಸಿ ನೀನು ಯಾರ ಮಗ ಎಂದು ಕೇಳುತ್ತಿದ್ದರು ನನಗೆ ಉತ್ತರ ಗೊತ್ತಿರಲಿಲ್ಲ. ನಾನು ಯಾವತ್ತೂ ಅಮ್ಮನ ಹತ್ತಿರ ಅಪ್ಪ ಯಾರು ಎಂದು ಕೇಳುತ್ತಿರಲಿಲ್ಲ ಎಂದು ರವಿ ಬೆಳಗೆರೆ ಅವರು ಹೇಳಿದರು. ಒಮ್ಮೆ ನಾನು ಸಿಗರೇಟ್ ಸೇದುವುದನ್ನು ನೋಡಿದ್ದ ಅಮ್ಮ ನನಗೆ ಬಾರಿಸಿ ನಾನೊಬ್ಬ ವಿಧವೆ ನಾನು ದುಡಿದ ದುಡ್ಡಲ್ಲಿ ಸಿಗರೇಟ್ ಸೇದುತ್ತಿರುವೆ ನಾಚಿಕೆಯಾಗಲ್ಲವಾ ಎಂದು ಕೇಳಿದಳು ಆವತ್ತಿಂದ ನಾನು ಅವರ ದುಡ್ಡನ್ನು ತೆಗೆದುಕೊಳ್ಳಲಿಲ್ಲ ಎಂದು ರವಿ ಅವರು ಹೇಳಿಕೊಂಡರು. ಸ್ಕಾಲರ್ಶಿಪ್ ಹಣದಿಂದ ಬಿಎ ಓದಿದರು, ಧಾರವಾಡದಲ್ಲಿ ಎಮ್ ಎ ಮಾಡಿದರು. ಅವರು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ದೊರೆಯಿತು ಆದರೆ ಮನೆಯಲ್ಲಿ ಒಪ್ಪಿಗೆ ಕೊಡಲಿಲ್ಲ. ಪಾರ್ಟ್ ಟೈಮ್ ಆಗಿ ಕಾಲೇಜ್ ನಲ್ಲಿ ಹಿಸ್ಟರಿ ಲೆಕ್ಚರರ್ ಕೆಲಸ ದೊರೆಯಿತು ಅವರ ಮೊದಲ ಸಂಬಳ 120 ರೂ. ಅವರು ಬಹಳ ಅದ್ಭುತವಾಗಿ ಪಾಠ ಮಾಡುತ್ತಾರೆ. ವಿದ್ಯಾರ್ಥಿಗಳು ನನ್ನ ಬಹಳ ಪ್ರೀತಿಸುತ್ತಿದ್ದರು ಎಂದು ರವಿ ಅವರು ತಮ್ಮ ಮನದಾಳದ ಮಾತನ್ನು ಹೇಳಿಕೊಂಡರು.