ಸೌಮ್ಯ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಉಳ್ಳಾಲದವರು. 2014 ಮತ್ತು 15 ರ ಸಬ್ ಇನ್ಸ್ಪೆಕ್ಟರ್ ಬ್ಯಾಚ್ ನವರು ಇವರು. ಇವರ ಹುದ್ದೆಯ ಬಗ್ಗೆ ಇವರ ಅಭಿಪ್ರಾಯದ ಮಾತುಗಳನ್ನು ನಾವು ಇಲ್ಲಿ ನೋಡೋಣ.
“ಕರಾವಳಿ ಭಾಗದಲ್ಲಿ ಸರ್ಕಾರಿ ಕೆಲಸಕ್ಕೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಅದರಲ್ಲೂ ಪೊಲೀಸ್ ಇಲಾಖೆಗೆ ಸೇರುವವರ ಸಂಖ್ಯೆ ಬಹಳ ಕಡಿಮೆ. ದುಡ್ಡಿರುವವರು ಡಾಕ್ಟರ್, ಇಂಜಿನಿಯರ್ ಅಥವಾ ವಿದೇಶಕ್ಕಾದರೂ ಹೋಗುತ್ತಾರೆ. ಬ್ಯಾಂಕಿಂಗ್ ಎಕ್ಸಾಮ್ ಬರೆದು ಬ್ಯಾಂಕಿಂಗ್ ಕ್ಷೇತ್ರಕ್ಕೆ ಹೋಗುತ್ತಾರೆ. ವಿಡಿಯೋ ಕೃಪೆ: ಪಿಕ್ಸೆಲ್ ಕ್ರಿಯೇಷನ್
ಪೊಲೀಸ್ ಹುದ್ದೆಗೆ ಬರುವವರು ಬಹಳ ಕಡಿಮೆ. ಕೆಲವರಿಗೆ ಆಸಕ್ತಿ ಇರುತ್ತದೆ. ಆದರೆ ಯಾವ ರೀತಿಯ ಎಕ್ಸಾಮ್ ಇರುತ್ತದೆ?ಯಾವ ರೀತಿಯಲ್ಲಿ ತಯಾರಿ ಆಗಬೇಕು ಎನ್ನುವುದು ತಿಳಿದಿರುವುದಿಲ್ಲ. ಪೊಲೀಸ್ ಇಲಾಖೆ ಅಂದರೆ ದಿನದ 24ಗಂಟೆ ಕೂಡ ಕೆಲಸ ಮಾಡಬೇಕು.ಕುಟುಂಬದ ಜೊತೆ ಯಾವುದೇ ಕಾರ್ಯಕ್ರಮದ ಜೊತೆ ಭಾಗಿಯಾಗಲು ಆಗುವುದಿಲ್ಲ. ಸರ್ಕಾರಿ ಕೆಲಸಕ್ಕೆ ಸೇರಬೇಕಾದರೆ ಇನ್ಫ್ಲುಯೆನ್ಸ್ ಮಾಡಿಸಬೇಕು ಅಥವಾ ದುಡ್ಡು ಕೊಡಬೇಕು ಎಂದು ಕೆಲವರು ಅಭಿಪ್ರಾಯ ಹೊಂದಿರುತ್ತಾರೆ.
ಆದರೆ ಈ ಅಭಿಪ್ರಾಯಗಳು ಸು ಳ್ಳು ಪ್ರಾಮಾಣಿಕವಾಗಿ, ನಿಷ್ಠೆಯಿಂದ ಪ್ರಯತ್ನ ಪಟ್ಟರೆ ಸರ್ಕಾರಿ ಕೆಲಸವನ್ನು ಖಂಡಿತ ಪಡೆಯಬಹುದು.ಇಂತಹ ಹುದ್ದೆಗೆ ಬರಬೇಕು ಎಂದಾದರೆ ಮೊದಲು ಆನ್ ಲೈನ್ ನಲ್ಲಿ ಅಪ್ಲಿಕೇಶನ್ ಕರೆಯುತ್ತಾರೆ.ಆಗ ಅದನ್ನು ತುಂಬಬೇಕು.ನಂತರ ಫಿಸಿಕಲ್ ಎಕ್ಸಾಮ್ ಅಂದರೆ ದೈಹಿಕ ಪರೀಕ್ಷೆ ಇರುತ್ತದೆ.ನಂತರ ಬರೆಯುವ ಎಕ್ಸಾಮ್ ಇರುತ್ತದೆ.