ಬಹಳಷ್ಟು ಜನರಿಗೆ ಬೆಳಗ್ಗೆ ಎದ್ದ ತಕ್ಷಣ ಬೆಡ್ ಕಾಫಿ ಕುಡಿಯುವ ಹವ್ಯಾಸ ಇರುತ್ತದೆ. ಕೆಫಿನ್ ಅಂಶ ದೇಹ ಸೇರುವುದರಿಂದ ನಂತರದ ದಿನಗಳಲ್ಲಿ ಆರೋಗ್ಯಕ್ಕೆ ಸಾಕಷ್ಟು ಅನಾನುಕೂಲ ಉಂಟಾಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿಯಬೇಕು. ಬಿಸಿ ನೀರನ್ನು ಕುಡಿಯುವುದರಿಂದ ದೇಹಕ್ಕೆ ಆಗುವ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿಯೋಣ.
ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಅಚ್ಚುಕಟ್ಟಾಗಿ ಕೆಲಸ ಮಾಡುವುದರ ಜೊತೆಗೆ ವಿಷಪೂರಿತ ಆಹಾರ ನಮ್ಮ ದೇಹದಿಂದ ದೂರವಾಗುತ್ತದೆ. ಅನ್ನನಾಳ ಸ್ವಚ್ಛವಾಗುತ್ತದೆ ಆಹಾರ ಸೇವಿಸಿದ ಸಮಯದಲ್ಲಿ ಅನ್ನನಾಳದಲ್ಲಿ ಅಳಿದುಳಿದ ಆಹಾರಪದಾರ್ಥಗಳ ಶೇಖರಣೆಯಾಗುತ್ತದೆ ಬೆಳಗ್ಗೆ ಬಿಸಿ ನೀರು ಕುಡಿಯುವುದರಿಂದ ಅನ್ನನಾಳ ಸ್ವಚ್ಛವಾಗುತ್ತದೆ. ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಮಲಬದ್ಧತೆ ಸಮಸ್ಯೆಯಿಂದ ಬಳಲುವವರಿಗೆ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ಮಲಬದ್ಧತೆ ದೂರವಾಗುತ್ತದೆ. ಬಿಸಿ ನೀರನ್ನು ಕುಡಿಯುವುದರಿಂದ ಕರುಳನ್ನು ಸದೃಢಪಡಿಸಿಕೊಳ್ಳಬಹುದು. ಬಿಸಿ ನೀರಿನಿಂದ ಆಹಾರ ತ್ಯಾಜ್ಯ ದೇಹದಿಂದ ಸುಲಭವಾಗಿ ಹೊರಹೋಗಲು ಸಹಾಯವಾಗುತ್ತದೆ.
ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ. ವಿಪರೀತ ಕೊಬ್ಬಿನಂಶ ಮತ್ತು ಕೊಲೆಸ್ಟ್ರಾಲ್ ನಿಂದ ದೇಹದ ತೂಕ ಹೆಚ್ಚಾಗುತ್ತದೆ ಬಿಸಿ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹದ ತಾಪಮಾನ ಹೆಚ್ಚಾಗುತ್ತದೆ ಅಲ್ಲದೇ ದೇಹದಲ್ಲಿ ಮೆಟಪೋಲಿಸಂ ಪ್ರಕ್ರಿಯೆ ಚುರುಕುಗೊಳ್ಳುತ್ತದೆ ಇದರಿಂದ ದೇಹದಲ್ಲಿ ಕೆಟ್ಟ ಕೊಬ್ಬಿನಂಶ ಕರಗಿ ದೇಹದ ತೂಕ ಕಡಿಮೆಯಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ದೇಹದಲ್ಲಿ ಕೆಂಪು ರಕ್ತಕಣಗಳು ಉತ್ಪತ್ತಿ ಮಾಡಲು ನೆರವಾಗುತ್ತದೆ. ಹೆಚ್ಚು ಆಮ್ಲಯುಕ್ತ ರಕ್ತವಾಗಿರುವುದರಿಂದ ಹೆಚ್ಚು ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ. ಬಿಸಿ ನೀರನ್ನು ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹದಿಂದ ವಿಷಕಾರಿ ಅಂಶ ಹೊರಹೋಗಿ ಅಂಗಾಂಗಗಳು ಸ್ವಚ್ಛಗೊಳಿಸುತ್ತದೆ. ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಬಿಸಿ ನೀರನ್ನು ಕುಡಿಯುವುದು ಒಳ್ಳೆಯದು. ಬಿಸಿ ನೀರು ಕುಡಿಯುವುದರಿಂದ ಸೈನಸ್ ಸಮಸ್ಯೆ ದೂರವಾಗುತ್ತದೆ. ಸೈನಸ್ ಸಮಸ್ಯೆಯಿಂದ ಬರುವ ತಲೆನೋವನ್ನು ಬಿಸಿ ನೀರು ನಿವಾರಣೆ ಮಾಡುತ್ತದೆ. ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ದೇಹಕ್ಕೆ ಬಹಳಷ್ಟು ಲಾಭವಿದೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.