ನಾಲಿಗೆಯ ಮೇಲಿನ ವೈಟ್ ಕೋಟೆಡ್ ನ್ನು ಮನೆಯಲ್ಲೆ ಸಿಗುವ ಸಾಮಗ್ರಿಗಳನ್ನು ಬಳಸಿ ಹೋಗಿಸುವುದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ನಾಲಿಗೆಯ ಮೇಲೆ ವೈಟ್ ಕೋಟೆಡ್ ಆಗಲು ಕಾರಣ ಫಂಗಸ್, ಬ್ಯಾಕ್ಟೀರಿಯಾ, ಈಸ್ಟ್. ಇದರಿಂದ ಬಾಯಿ ಫ್ರೆಶ್ ಆಗಿರದೆ ದುರ್ವಾಸನೆ ಬರುತ್ತದೆ. ಈ ವೈಟ್ ಕೋಟೆಡ್ ಹೋಗಿಸಲು ಮನೆ ಮದ್ದು ಇದೆ ಅದೇನೆಂದರೆ ವಾರಕ್ಕೆ ಒಂದು ಸಲ ಆದರೂ ಸಾಲ್ಟ್ ಬಳಸಿ ಬ್ರಶ್ ಮಾಡಿ. ಕೆಲವು ಬ್ರಶ್ ನ ಹಿಂದೆ ಟಂಕ್ಲೀನರ್ ಇರುತ್ತದೆ ಅದರ ಮೂಲಕ ನಾಲಿಗೆಯನ್ನು ಉಜ್ಜಿ ಕ್ಲೀನ್ ಮಾಡಿಕೊಳ್ಳಿ. ಸಾಲ್ಟ್ ಇಂದ ಗಾರ್ಗ್ಲಿನ ಮಾಡಬೇಕು ಆಗಲೂ ನಾಲಿಗೆ ಕ್ಲೀನ್ ಆಗುತ್ತದೆ. ಲೆಮನ್ ರಸ ಮತ್ತು ಬೇಕಿಂಗ್ ಸೋಡಾ ಇವೆರಡನ್ನು ಪೇಸ್ಟ್ ಮಾಡಿ ಬ್ರಶ್ ಹೊಂದಿರುವ ಟಂಕ್ಲೀನರ್ ಬಳಸಿ ನಾಲಿಗೆಯನ್ನು ಕ್ಲೀನ್ ಮಾಡಿಕೊಳ್ಳಬಹುದು ನಿಂಬೆಯಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಪ್ರಾಪರ್ಟೀಸ್ ನಾಲಿಗೆಯ ಮೇಲೆ ಫಂಗಸ್ ಮತ್ತು ಬ್ಯಾಕ್ಟೀರಿಯಾವನ್ನು ಹೋಗಿಸಲು ಸಹಾಯ ಮಾಡುತ್ತದೆ.
ಕಹಿ ಬೇವಿನ ಎಲೆ ಮತ್ತು ಒಂದು ಲೋಟ ನೀರನ್ನು ಮಿಕ್ಸ್ ಮಾಡಿ ಒಂದು ಲೋಟ ಅರ್ಧ ಲೋಟ ಆಗುವಷ್ಟು ಕಾಯಿಸಿ ಕಷಾಯದ ರೀತಿ ಮಾಡಿ ಈ ನೀರಿನಿಂದ ವಾರಕ್ಕೆ ಎರಡು ಬಾರಿ ಗಾರ್ಗ್ಲಿಲ್ ಮಾಡುವುದರಿಂದಲೂ ವೈಟ್ ಕೋಟೆಡ್ ಸುಲಭವಾಗಿ ಹೋಗುತ್ತದೆ. ಗಟ್ಟಿಯಾದ ಮೊಸರನ್ನು ಟೂತ್ ಪೇಸ್ಟ್ ರೀತಿಯಲ್ಲಿ ಬಳಸಿ ಬ್ರಶ್ ಹಿಂದಿನ ಟಂಕ್ಲೀನರ್ ಬಳಸಿಕೊಂಡು ನಾಲಿಗೆಯನ್ನು ಉಜ್ಜಿ ನಂತರ ಸ್ಪಿಟ್ ಔಟ್ ಮಾಡಿ ಇದರಿಂದ ವೈಟ್ ಕೋಟೆಡ್ ಹೋಗುತ್ತದೆ. ಅರಿಶಿಣ ಮತ್ತು ಲೆಮನ್ ಜ್ಯೂಸ್ ಮಿಕ್ಸ್ ಮಾಡಿಕೊಂಡು ಟೂತ್ ಪೇಸ್ಟ್ ರೀತಿ ತಯಾರಿಸಿ ಇದರಿಂದ ನಾಲಿಗೆಯನ್ನು ಕ್ಲೀನ್ ಮಾಡಿಕೊಳ್ಳಬಹುದು. ಈ ಯಾವುದೇ ಮನೆ ಮದ್ದು ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ ಈ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.