ಒಬ್ಬ ವ್ಯಕ್ತಿ ತನ್ನ ಗಾಡಿಯನ್ನು ನೋಡುವವರು ಯಾರೂ ಇಲ್ಲ. ನಾನು ಬೇಕಾಬಿಟ್ಟಿಯಾಗಿ ಓಡಾಡಬಹುದು ಎಂದು ತನ್ನ ಗಾಡಿಯನ್ನು ಓಡಾಡಿಸುತ್ತಿದ್ದ. ಆದರೆ ಎಲ್ಲಾ ದಿನವೂ ಒಂದೇ ಆಗಿರುವುದಿಲ್ಲ. ಹಾಗಾಗಿ ಒಂದು ದಿನ ಆತ ಸಿಕ್ಕಿಕೊಂಡ. ಒಬ್ಬ ಸಬ್ ಇನ್ಸ್ಪೆಕ್ಟರ್ ಅವನ ವಾಹನದ ಬಿಲ್ ಪ್ರಿಂಟ್ ತೆಗೆದಿದ್ದರು. ಈ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕಳೆದ ಎರಡು ದಿನಗಳ ಹಿಂದೆ ಮಡಿವಾಳದ ಸಬ್ ಇನ್ಸ್ಪೆಕ್ಟರ್ ಶಿವರಾಜ್ ಅವರು ತಮ್ಮ ಡ್ಯೂಟಿಯಲ್ಲಿ ನಿರತರಾಗಿದ್ದರು. ನಂಬರ್ ಪ್ಲೇಟ್ ಇರುವ ಡುಯೋ ಬೈಕ್ ಕಣ್ಣಿಗೆ ಬಿದ್ದಿತು. ಇದನ್ನು ನೋಡಿ ಫೈನ್ ಹಾಕಲು ನಿರ್ಧಾರ ಮಾಡಿದರು. ಆದರೆ ಇದಕ್ಕೆ 72 ಕೇಸ್ ಇತ್ತು. ಕಳೆದ ವರ್ಷದಲ್ಲಿ 77ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿತ್ತು. ಇದರಿಂದ ಇದೊಂದೇ ಬೈಕ್ ನ ಮೇಲೆ 42,000ರೂಪಾಯಿ ದಂಡ ಬಿದ್ದಿದೆ. ಈ ಬೈಕ್ 42ಬಾರಿ ಹೆಲ್ಮೆಟ್ ಇಲ್ಲದೆಯೇ ಓಡಿತ್ತು. 10ಬಾರಿ ತ್ರಿಬ್ಬಲ್ ರೈಡಿಂಗ್ ಮಾಡಿತ್ತು. ಸಿಗ್ನಲ್ ಜಂಪ್ 7 ಮತ್ತು ನೋ ಪಾರ್ಕಿಂಗ್ 2 ಮಾಡಿತ್ತು.
ಡಿಫೆಕ್ಟಿವ್ ನಂಬರ್ ಪ್ಲೇಟ್ ಗೆ ಎರಡು ಕೇಸ್ ಬಿದ್ದಿತ್ತು. ಈ ಗಾಡಿಯ ಮಾಲೀಕ ಮೂಲತಃ ಮಡಿವಾಳದವನೇ ಆಗಿದ್ದಾನೆ. ಈತ ತರಕಾರಿಗಳನ್ನು ಮಾರಿ ಜೀವನ ಮಾಡುತ್ತಿದ್ದ. ಕಳೆದ ಎರಡು ವರ್ಷಗಳ ಹಿಂದೆ 30,000 ರೂಪಾಯಿಗೆ ಈ ಗಾಡಿಯನ್ನು ಖರೀದಿ ಮಾಡಿದ್ದ. ಆದರೆ 2ವರ್ಷಕ್ಕೆ 42,000 ಬಿಲ್ ತೆರಬೇಕೆಂದು ಈ ಬೈಕ್ ಸಹವಾಸ ಬೇಡ ಎಂದು ಬಿಟ್ಟು ಹೋಗಿದ್ದಾನೆ. ಕೊನೆಯದಾಗಿ ಹೇಳುವುದೇನೆಂದರೆ ಯಾರು ಹೇಳುವವರು ಕೇಳುವವರು ಇಲ್ಲ ಎಂದು ಬೈಕ್ ಓಡಿಸಬಾರದು ಏಕೆಂದರೆ ಕೊನೆಯದಾಗಿ ಬೈಕ್ ಬೆಲೆಗಿಂತ ಅದರ ದಂಡದ ಮೊತ್ತವೇ ಹೆಚ್ಚಾಗುತ್ತದೆ.