ಸರ್ಕಾರದಿಂದ ನಡೆಸುವ ಕೆಲವು ಪರೀಕ್ಷೆಗಳು ಕೊರೋನದಿಂದ ನಡೆಯಲಿಲ್ಲ ಮುಂದಿನ ದಿನಗಳಲ್ಲಿ ಪರೀಕ್ಷೆಗಳು ನಡೆಯಲಿವೆ ಅವುಗಳ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಕೊರೋನ ಕಾರಣದಿಂದ ಬಹಳಷ್ಟು ಸಮಸ್ಯೆಗಳಾಗಿ ಯಾವುದೇ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗಲಿಲ್ಲ ಹೀಗಾಗಿ ನಂತರದ ದಿನಗಳಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಅದರಂತೆ ಕೆಲವು ಪರೀಕ್ಷೆಗಳು ಹಾಗೂ ಅವುಗಳು ನಡೆಯುವ ದಿನಾಂಕವು ಹೀಗಿವೆ. ಬಹಳಷ್ಟು ಜನರು ಪರೀಕ್ಷೆಗಾಗಿ ಕಾಯುತ್ತಿದ್ದು ಅವರಿಗೆ ಸಿಹಿಸುದ್ದಿ ಸಿಗಲಿದೆ. 300 ಸಿವಿಲ್ ಪಿಎಸ್ಐ ಹುದ್ದೆಗಳ ಮೆಡಿಕಲ್ ಎಕ್ಸಾಮ ಹಾಗೂ ಡೊಕ್ಯೂಮೆಂಟ್ ವೆರಿಫಿಕೇಷನ 20/10/2020 ರಿಂದ ಪ್ರಾರಂಭವಾಗುತ್ತದೆ. ಪೊಲೀಸ್ ಕಾನ್ಸಟೇಬಲ್ ಕೆಎಸಆರಪಿ ಮತ್ತು ಐಆರಬಿ ಲಿಖಿತ ಪರೀಕ್ಷೆ 22/11/2020 ರವಿವಾರದಂದು ನಡೆಯುತ್ತದೆ. ಬ್ಯಾಂಡ್ ಮ್ಯಾನ್ ಪರೀಕ್ಷೆ 29/11/2020 ರಂದು ರವಿವಾರ ನಡೆಯುತ್ತದೆ. ಪಿಎಸ್ಐ ವೈರಲೆಸ್ ಲಿಖಿತ ಪರೀಕ್ಷೆ 13/12/2020 ರಂದು ರವಿವಾರ ನಡೆಯುತ್ತದೆ.
ಪಿಎಸ್ಐ ಕೆಎಸ್ಐಎಸ್ಎಫ್ ಮತ್ತು ಪಿಎಸ್ಐ ಕೆಎಸ್ಆರ್ ಪಿ ಲಿಖಿತ ಪರೀಕ್ಷೆ 20/12/2020 ರಂದು ರವಿವಾರ ನಡೆಯುತ್ತದೆ. ಪಿಡಬ್ಲ್ಯಡಿ ಇಲಾಖೆಯಿಂದ ಕರೆದಿರುವ ಎಇ/ ಜೆಇ ಸಿವಿಲ್ ಪರೀಕ್ಷೆ ನವೆಂಬರ್ 21,22,29/ 2020 ರಂದು ನಡೆಯುತ್ತದೆ. ಎಸಡಿಎ ಮತ್ತು ಎಪಡಿಎ ಪರೀಕ್ಷೆಗಳು ಡಿಸೆಂಬರ್ ನಲ್ಲಿ ಅಂದರೆ ಡಿಸೆಂಬರ್ ಮೊದಲ ವಾರ ಅಥವಾ ಜನವರಿ ಕೊನೆ ವಾರದಲ್ಲಿ ನಡೆಸಬಹುದು. ಅಸಿಸ್ಟಂಟ್ ಹೋರ್ಟಿಕಲ್ಚರ್ ಆಫೀಸರ್ ಸಂದರ್ಶನ ದಿನಾಂಕವನ್ನು ಶೀಘ್ರದಲ್ಲಿ ತಿಳಿಸುತ್ತಾರೆ. ಈ ಮಾಹಿತಿಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲರಿಗೂ ತಪ್ಪದೆ ತಿಳಿಸಿ