ಸಾಮಾನ್ಯವಾಗಿ ಮನೆಗಳಲ್ಲಿ ಬಳಸುವ ಶುಂಠಿಯನ್ನು ಅಡುಗೆಯಲ್ಲಿ ಹೆಚ್ಚು ಬಳಸುವುದರಿಂದ ಆಗುವ ಉಪಯೋಗಗಳನ್ನು ಈ ಲೇಖನದ ಮೂಲಕ ತಿಳಿಯೋಣ.
ಶುಂಠಿಯನ್ನು ಸಂಸ್ಕೃತದಲ್ಲಿ ಆದ್ರಕ ಎಂದು ಅಲ್ಲಾ ಎಂತಲೂ ಕರೆಯುತ್ತಾರೆ ಅಲ್ಲಾ ಎಂದರೆ ಭಗವಂತ ಎಂದರ್ಥ ಭಗವಂತನಿಗೆ ಕೊಡುವ ಪ್ರಾಮುಖ್ಯತೆಯನ್ನು ಶುಂಠಿಗೆ ಕೊಡಲಾಗುತ್ತದೆ. ಶುಂಠಿಗೆ ದೀಪನೀಯ, ಪಾಚನೀಯ, ರುಚಿಕಾರಕ, ಭಲ್ಯ, ವರ್ನ್ಯ, ಪಿತ್ತಃ ಗುಣಗಳಿವೆ. ಶುಂಠಿಯು ಹೊಟ್ಟೆಯಲ್ಲಿ ಜಟರಾಗ್ನಿಯನ್ನು ಉತ್ಪತ್ತಿ ಮಾಡುತ್ತದೆ, ತಿಂದಂತಹ ಆಹಾರವನ್ನು ಜೀರ್ಣ ಮಾಡುತ್ತದೆ, ನಾಲಿಗೆಯಲ್ಲಿ ರುಚಿ ಹೆಚ್ಚಿಸುತ್ತದೆ. ಊಟದ ಮೊದಲು ಹಸಿ ಶುಂಠಿಯ ಚೂರಿಗೆ ಸೈಂಧವ ಲವಣ ಅಂದರೆ ಕಲ್ಲುಪ್ಪು ಚಿಟಿಕೆಯಷ್ಟು ಸೇರಿಸಿ ನಾಲಿಗೆಯ ಮೇಲೆ ಇಟ್ಟು ಚಪ್ಪರಿಸಿ ತಿನ್ನಬೇಕು ಇದರಿಂದ ನಾಲಿಗೆಯ ರುಚಿಯನ್ನು ಶುಂಠಿ ಹೆಚ್ಚಿಸುತ್ತದೆ
ದಕ್ಷಿಣ ಭಾರತದ ಆಹಾರಗಳಲ್ಲಿ ಅಂದರೆ ಖಾದ್ಯಗಳಲ್ಲಿ ಶುಂಠಿಯನ್ನು ಹೆಚ್ಚು ಬಳಸಲಾಗುತ್ತದೆ. ಮದುವೆ ಅಥವಾ ಮೃಷ್ಟಾನ್ನ ಭೋಜನಗಳಲ್ಲಿ, ನಾನವೆಜ್ ಗಳ್ಳಲಿ ಶುಂಠಿಯನ್ನು ಬಳಸುತ್ತಾರೆ ಇದರಿಂದ ಸುಲಭವಾಗಿ ಜೀರ್ಣವಾಗುತ್ತದೆ ಅಲ್ಲದೇ ದೇಹದಲ್ಲಿ ಶಕ್ತಿಯಾಗಿ ದಕ್ಕುತ್ತದೆ. ಶುಂಠಿಯನ್ನು ಹೆಚ್ಚು ಆಹಾರದಲ್ಲಿ ಬಳಕೆ ಮಾಡಬೇಕು ಇದು ಆರೋಗ್ಯಕ್ಕೆ ಒಳ್ಳೆಯದು. ಶುಂಠಿಯನ್ನು ಮಕ್ಕಳಿಂದ ಹಿಡಿದು ವೃದ್ದರವರೆಗೆ ಬಳಸಬಹುದು ಅತಿಯಾಗಿ ಸೇವಿಸಿದರೆ ಕೆಲವರಿಗೆ ಹೀಟ್ ಆಗುವ ಸಾಧ್ಯತೆಗಳಿರುತ್ತದೆ. ಶುಂಠಿ ಬಳಕೆಯಿಂದ ಕೊರೋನ ವೈರಸ್ ನಿಂದಲೂ ತಪ್ಪಿಸಿಕೊಳ್ಳಬಹುದು. ಒಟ್ಟಿನಲ್ಲಿ ಶುಂಠಿ ಸೇವಿಸುವುದರಿಂದ ಬಹಳಷ್ಟು ಉಪಯೋಗವಿದೆ. ಈ ಮಾಹಿತಿಯನ್ನು ಎಲ್ಲರಿಗೂ ತಪ್ಪದೆ ತಿಳಿಸಿ ಆರೋಗ್ಯವನ್ನು ಶುಂಠಿ ಬಳಕೆಯಿಂದ ಕಾಪಾಡಿಕೊಳ್ಳಿ.