ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಜನನ ಪ್ರಮಾಣ ಪತ್ರ ಹಾಗೂ ಮರಣ ಪ್ರಮಾಣ ಪತ್ರವನ್ನು ಸುಲಭವಾಗಿ ಪ್ರಿಂಟ್ ತೆಗೆಯುವುದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಮೊಬೈಲ್ ಅಥವಾ ಕಂಪ್ಯೂಟರಿನಲ್ಲಿ ಗೂಗಲ್ ಹೋಗಿ ಇಜನ್ಮ ಎಂದು ಟೈಪ್ ಮಾಡಿ ಸರ್ಚ್ ಕೊಟ್ಟಾಗ ವೆಬ್ ಸೈಟ್ ಓಪನ್ ಆಗುತ್ತದೆ. ಅಲ್ಲಿ ಸೈಡಿನಲ್ಲಿ ಬರ್ಥ್ ಆರ್ ಡೆಥ್ ಸರ್ಟಿಫಿಕೇಟ್ ವೆರಿಫಿಕೇಶನ್ ಎಂಬ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಬೇಕು. ಆಗ ವಿಂಡೋ ಓಪನ್ ಆಗುತ್ತದೆ ಅಲ್ಲಿ ಬರ್ಥ್ ಸರ್ಟಿಫಿಕೇಟ್ ಬೇಕಾದರೆ ಬರ್ಥ್ ಆಪ್ಷನ್ ಕ್ಲಿಕ್ ಮಾಡಿ, ರಿಜಿಸ್ಟರ್ ನಂಬರ್ ಹಾಕಿ, ಡೇಟ್ ಆಫ್ ಬರ್ಥ್ ಹಾಕಿ ಕ್ಯಾಪ್ಚರ್ ಕೋಡ್ ಎಂಟ್ರಿ ಮಾಡಿ ಸರ್ಚ್ ಅಂತ ಕೊಡಬೇಕು. ಆದರೆ 01 07 2018 ರ ನಂತರ ಜನನ ಮತ್ತು ಮರಣ ಹೊಂದಿದ್ದರೆ ಹೀಗೆ ಮಾಡಬೇಕು.
01 07 2018 ರ ಮೊದಲು ಜನನ ಹಾಗೂ ಮರಣ ಹೊಂದಿದ್ದರೆ ಈ ವೆಬ್ ಸೈಟ್ ನಲ್ಲಿ ಮೊದಲಿನಂತೆ ಮಾಹಿತಿ ಹಾಕಿದ ನಂತರ ಕೆಳಗಡೆ ಕ್ಲಿಕ್ ಹಿಯರ್ ಎಂದು ರೆಡ್ ಕಲರ್ ನಲ್ಲಿ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಹೊಸ ವಿಂಡೋ ಓಪನ್ ಆಗುತ್ತದೆ. ಅಲ್ಲಿ ಬರ್ಥ್ ಆರ್ ಡೆಥ್ ಎಂದಿರುತ್ತದೆ ಅದನ್ನು ಕ್ಲಿಕ್ ಮಾಡಬೇಕು. ನಂತರ ಜಿಲ್ಲೆಯನ್ನು ಸೆಲೆಕ್ಟ್ ಮಾಡಬೇಕು. ನಂತರ ಯಾವ ತಾಲೂಕು ಎಂಬುದನ್ನು ಸೆಲೆಕ್ಟ್ ಮಾಡಬೇಕು. ರಿಜಿಸ್ಟರ್ ನಂಬರ್ ಹಾಕಬೇಕು. ಡೇಟ್ ಆಫ್ ಬರ್ಥ್ ಸೆಲೆಕ್ಟ್ ಮಾಡಬೇಕು ನಂತರ ಕ್ಯಾಪ್ಚರ್ ಕೋಡ್ ನ್ನು ಎಂಟ್ರಿ ಮಾಡಿ ಸರ್ಚ್ ಅನ್ನುವ ಆಪ್ಷನ್ ಕ್ಲಿಕ್ ಮಾಡಿದರೆ ಜನನ ಅಥವಾ ಮರಣ ಪ್ರಮಾಣ ಪತ್ರ ಓಪನ್ ಆಗುತ್ತದೆ ಅದನ್ನು ಡೌನ್ಲೋಡ್ ಆಪ್ಷನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಪ್ರಿಂಟ್ ಕೂಡ ತೆಗೆಯಬಹುದು.