2008ರಲ್ಲಿ ಭ ಯೋತ್ಪಾ ದಕರು ಮುಂಬೈನ ಒಳಗೆ ನುಗ್ಗಿ ಎಂಟು ಕಡೆಯಲ್ಲಿ ಗುಂ ಡು ಹಾರಿಸಿ ಒಟ್ಟು೧೬೪ ಜನರ ಸಾ ವಿಗೆ ಕಾರಣರಾಗಿದ್ದರು. ದೇಶವೇ ತಲ್ಲಣವಾಗಿತ್ತು. ದಾಳಿ ನಡೆದ 8 ಸ್ಥಳಗಳಲ್ಲಿ ತಾಜ್ ಮತ್ತು ಒಬೇರ ಹೋಟೆಲ್ ಗಳು ಕೂಡ ಸೇರಿವೆ. ಇದರಲ್ಲಿ 28 ವಿದೇಶಿಗರು ಸಾ ವ ನ್ನಪ್ಪಿದ್ದಾರೆ. ನಾವು ಇಲ್ಲಿ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಜೇಮ್ಸಟಾಜಿ ಟಾಟಾ ಎಂಬ ಉದ್ಯಮಿಗೆ 18ನೇ ಶತಮಾನದಲ್ಲಿ ಬ್ರಿಟಿಷ್ ಆಳ್ವಿಕೆ ನಡೆಯುತ್ತಿದ್ದಾಗ ಭಾರತೀಯರು ಎಂಬ ಕಾರಣದಿಂದ ಇವರಿಗೆ ಒಂದೇ ಒಂದು ಬಾರಿ ದೊಡ್ಡ ಹೋಟೆಲ್ ಗೆ ಹೋದಾಗ ನಿರಾಕರಿಸುತ್ತಾರೆ. ಈ ಅವಮಾ ನದಿಂದ ಅದಕ್ಕಿಂತ ದೊಡ್ಡ ಹೋಟೆಲ್ ನಿರ್ಮಾಣ ಮಾಡುವ ಪ್ರತಿಜ್ಞೆಯನ್ನು ಇವರು ಮಾಡುತ್ತಾರೆ. ಆಗ ಮುಂಬೈನಲ್ಲಿ ಕೇವಲ ಬೆರಳಣಿಕೆಯಷ್ಟು ಹೋಟೆಲ್ ಗಳು ಇದ್ದು ಕೇವಲ ಗಣ್ಯರಿಗೆ ಮಾತ್ರ ಅವಕಾಶವಿತ್ತು. 16 ಡಿಸೆಂಬರ್ 1903ರಂದು ತಾಜ್ ಹೋಟೆಲ್ ಆರಂಭವಾಯಿತು. ಅಂದಿನಿಂದ ಇಂದಿನವರೆಗೂ ಭಾರತದ ವೈಭವ ಮತ್ತು ಅದ್ದೂರಿ ಹೋಟೆಲ್ ಆಗಿ ಪ್ರಖ್ಯಾತಿ ಪಡೆದಿದೆ.
1903ರಲ್ಲಿ ಈ ಹೋಟೆಲ್ ನ ನಿರ್ಮಾಣದಲ್ಲಿ ಪೂರ್ಣಗೊಂಡಾಗ ಆದ ಖರ್ಚು 2ವರೆಲಕ್ಷ ಪೌಂಡ್. ಈಗಿನ ದಿನದಲ್ಲಿ ಈತರಹ ಕಟ್ಟಬೇಕು ಎಂದರೆ 127ಮಿಲಿಯನ್ ಪೌಂಡ್ ಹಣ ಬೇಕಾಗುತ್ತದೆ. ವಿಶೇಷವಾದ ಕಬ್ಬಿಣವನ್ನು ಇಲ್ಲಿ ಬಳಸಲಾಗಿದೆ. ಇದಕ್ಕೆ ಅಗತ್ಯವಾದ ಕಬ್ಬಿಣವನ್ನು ಫ್ರಾನ್ಸ್ ನಿಂದ ಆಮದು ಮಾಡಿಕೊಳ್ಳಲಾಗಿತ್ತು. ಒಟ್ಟು ಏಳು ಅಂತಸ್ತಿನಲ್ಲಿ ಇರುವ ಈ ಕಟ್ಟಡದಲ್ಲಿ ಓಡಾಡಲು ಜರ್ಮನಿಯಲ್ಲಿ ಬಳಸುವ ಲಿಫ್ಟ್ ಗಳನ್ನು ಬಳಸಲಾಗಿದೆ. ಟರ್ಕಿ ದೇಶದಿಂದ ಸ್ನಾನ ಗೃಹಗಳನ್ನು ತರಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲದೆ ಟಾಟಾ ಅವರು ಮೊಟ್ಟ ಮೊದಲ ಬಾರಿಗೆ ಭಾರತೀಯರು ಮಾಲೀಕರಾದಂತಹ ಸಂಸ್ಥೆಯಲ್ಲಿ ಬ್ರಿಟಿಷರು ಕೆಲಸ ಮಾಡುವ ಹಾಗೆ ಮಾಡುತ್ತಾರೆ. ಮೊದಲು 225 ಕೊಠಡಿಗಳು ಇದ್ದವು ನಂತರ ಹೆಚ್ಚಿನ ಬೇಡಿಕೆಯಿಂದಾಗಿ 565ಆಗಿ ಏರಿಕೆ ಮಾಡಲಾಗುತ್ತದೆ. ಸಮುದ್ರಕ್ಕೆ ಮುಖ ಮಾಡಿ ನಿರ್ಮಿಸಲಾಗುತ್ತದೆ.
1974ರಲ್ಲಿ ದಿನದಲ್ಲಿ 24ಗಂಟೆಗಳ ಕಾಲ ಕಾಫೀ ಗೃಹ ಮತ್ತು ಚೀನೀ ಅಡುಗೆಗಳನ್ನು ತಯಾರಿ ಮಾಡುವಂತೆ ಇಲ್ಲಿ ಪ್ರಾರಂಭ ಮಾಡಲಾಯಿತು. ಖ್ಯಾತ ಕಲಾವಿದರ ಕಲಾಕೃತಿಗಳನ್ನು ಸಹ ಈ ಹೋಟೆಲ್ ಗಳಲ್ಲಿ ಮಾಡಲಾಗಿದೆ.ಇದು ಎಲ್ಲರ ಗಮನ ಸೆಳೆಯುತ್ತದೆ. 1903ರಲ್ಲಿ ಹೋಟೆಲ್ ಪ್ರಾರಂಭವಾದಾಗ ಒಂದು ಕೋಣೆಯ ಬಾಡಿಗೆ ಬೆಲೆ 10ರೂಪಾಯಿಗಳು ಆಗಿತ್ತು. 13ರೂಪಾಯಿ ಕೊಟ್ಟರೆ ಶೌಚಾಲಯ ಸೌಲಭ್ಯ ಸಿಗುತ್ತಿತ್ತು. ಒಂದು ಪೂರ್ತಿ ದಿನದ ಊಟಕ್ಕೆ 25ರೂಪಾಯಿ ಖರ್ಚು ಆಗುತ್ತಿತ್ತು. ಈಗ ದಿನದ ಬಾಡಿಗೆ 10,000 ದಿಂದ 13,000 ರೂಪಾಯಿಗಳು ಇದ್ದು ಲಕ್ಸೂರಿ ರೂಮಿನ ಬೆಲೆ 1,80,000 ರೂಪಾಯಿವರೆಗೂ ಇದೆ. ಇಲ್ಲಿ ಪ್ರತಿಯೊಬ್ಬರ ಸಂಬಳ 50,000 ದಿಂದ 5,00,000ದವರೆಗೆ ಇರುತ್ತದೆ.