ಪ್ರತೀ ವರ್ಷವೂ ಸಹ ಎಲ್ಲಾ ವಾಹಿನಿಗಳು ಸಹ ಹಬ್ಬದ ರೀತಿಯಲ್ಲಿ ಅವರವರ ವಾಹಿನಿಯ ಹೆಸರನ್ನು ಇಟ್ಟುಕೊಂಡು ಹಬ್ಬದ ರೀತಿಯಲ್ಲಿ ಆಚರಿಸುವ ಕಾರ್ಯಕ್ರಮ ಎಂದರೆ ಅದು ಕುಟುಂಬ ಅವಾರ್ಡ್ಸ್. ಧಾರಾವಾಹಿಯ ಕಲಾವಿದರಿಗೆ, ತಂತ್ರಜ್ಞರಿಗೆ ವಾಹಿನಿಯ ಕಡೆಯಿಂದ ವರ್ಷಕ್ಕೆ ಒಂದು ಬಾರಿ ನೀಡುವ ಗೌರವ ಇದು ಎಂದೇ ಹೇಳಬಹುದು. ಕಲಾವಿದರಿಗೆ ಸನ್ಮಾನ ಮಾಡಿ ಪ್ರಶಸ್ತಿ ನೀಡುವುದರ ಜೊತೆಗೆ ಮನರಂಜನೆಯ ಕಾರ್ಯಕ್ರಮಗಳನ್ನೂ ಸಹ ಆಯೋಜಿಸಲಾಗುತ್ತದೆ. ಹೀಗೆ ಪ್ರತೀ ವರ್ಷದ ಹಾಗೆಯೇ ಈ ವರ್ಷವೂ ಕೂಡಾ ಜೀ ಕನ್ನಡ ವಾಹಿನಿ ತನ್ನ ಈ ಸಂಭ್ರಮವನ್ನು ಈ ಬಾರಿಯೂ ಸಹ ಆಚರಿಸಿಕೊಂಡಿದೆ. ಕಳೆದ ವರ್ಷ ಇದೇ ಸಮಯಕ್ಕೆ ಜೀ ಕನ್ನಡ ವಾಹಿನಿ ದೊಡ್ಡದೊಂದು ಸಮಾರಂಭ ಆಯೋಜಿಸಿದ್ದು ಅದರಲ್ಲಿ ಸಾಮಾನ್ಯ ಜನರು, ಕಲಾವಿದರು, ತಂತ್ರಜ್ಞರು ಎಲ್ಲರೂ ಒಂದೇ ಸೂರಿನಡಿ ಸೇರಿ ಅದ್ಧೂರಿಯಾಗಿ ಒಂದು ಹಬ್ಬದ ರೀತಿಯಲ್ಲಿ ಆ ಕಾರ್ಯಕ್ರಮ ನೆರವೇರಿಸಿದ್ದರು. ಕಲಾವಿದರಿಗೆ, ತಂತ್ರಜ್ಞರಿಗೆ ಅವಾರ್ಡ್ ಗಳನ್ನು ತೆಗೆದುಕೊಂಡ ಖುಷಿಯಲ್ಲಿ ಇದ್ದರೆ, ಇತ್ತ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಕಿರುತೆರೆ ಕಲಾವಿದರನ್ನು ನೇರವಾಗಿ ನೋಡುವುದೇ ಒಂದು ಸಂಭ್ರಮ. ಆದರೆ ಈ ಬಾರಿ ಕೊರೊನಾ ಕಾರಣದಿಂದಾಗಿ ಎಲ್ಲವೂ ಬಂದ್ ಆಗಿ ಹೋಯಿತು. ಆದರೂ ಸಹ ಜೀ ಕನ್ನಡ ವಾಹಿನಿಯು ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮವನ್ನು ಆಯೋಜಿಸಿ ಸಡಗರದಿಂದ ಕರೋನ ಇರುವ ಕಾರಣಕ್ಕೆ ಸಾರ್ವಜನಿಕರಿಗೆ ಕಾರ್ಯಕ್ರಮದ ವೀಕ್ಷಣೆಗೆ ಅವಕಾಶ ನೀಡದೆ ಬರೀ ಕುಟುಂಬದ ಸದಸ್ಯರಿಗೇ ಮಾತ್ರ ಅವಕಾಶ ನೀಡಿ ಆಚರಿಸಿದೆ. ಇನ್ನು ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಸಾಕಷ್ಟು ರೀತಿಯ ಅವಾರ್ಡ್ ಗಳು ಇದ್ದು ಜನಮೆಚ್ಚಿದ ನಾಯಕ ಕ್ಯಾಟಗರಿಯಲ್ಲಿ ಯಾರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಎನ್ನುವುದನ್ನು ನಾವು ಈ ಲೇಖನದಲ್ಲಿ ನೋಡೋಣ.
ಇನ್ನು ಈ ಬಾರಿಯೂ ಸಹ ಎಂದಿನಂತೆ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಎಲ್ಲಾ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋ ಗಳೂ ನಾಮಿನೇಟ್ ಆಗಿದ್ದು ನಾಮಿನೇಷನ್ ನಲ್ಲಿ ಬೆಸ್ಟ್ ನಟ ನಟಿ, ಜನ ಮೆಚ್ಚಿದ ನಟ ನಟಿ, ಬೆಸ್ಟ್ ಜೋಡಿ, ಬೆಸ್ಟ್ ಸಹೋದರ, ಬೆಸ್ಟ್ ಅಪ್ಪ ಅಮ್ಮ, ಬೆಸ್ಟ್ ಕಾಮಿಡಿಯನ್, ಬೆಸ್ಟ್ ವಿಲನ್, ಬೆಸ್ಟ್ ನಿರ್ದೇಶಕ, ಬೆಸ್ಟ್ ಧಾರಾವಾಹಿ ಹೀಗೆ ನಾನಾ ವಿಭಾಗಗಳೂ ಇದ್ದು, ಆಯ್ಕೆ ಆದ ಪ್ರತಿಯೊಬ್ಬರಿಗೂ ಸಹ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇನ್ನು ಕಳೆದ ಒಂದು ವರ್ಷದಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಜೊತೆ ಜೊತೆಯಲಿ ಧಾರವಾಹಿಯು ಹಿಂದಿನ ವರ್ಷದ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಯಾವುದೇ ನಾಮಿನೇಷನ್ ನಲ್ಲಿ ಭಾಗವಹಿಸಿರಲಿಲ್ಲ ಕಾರಣ ಜೊತೆ ಜೊತೆಯಲಿ ಧಾರವಾಹಿ ಆಗ ತಾನೇ ಆರಂಭ ಆಗಿ ಕೇವಲ ಕೆಲವೇ ಕೆಲವು ವಾರಗಳು ಆಗಿದ್ದವು ಹಾಗಾಗಿ ಜೊತೆಜೊತೆಯಲಿ ಧಾರಾವಾಹಿಯನ್ನು ಸ್ಪರ್ಧೆಯಿಂದ ಹೊರಗೆ ಇಡಲಾಗಿತ್ತು.
ಕಳೆದ ವರ್ಷ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ನಾಮಿನೇಟ್ ಆಗದ ಜೊತೆಜೊತೆಯಲಿ ಧಾರಾವಾಹಿ ಈ ವರ್ಷ ನಾಮಿನೇಟ್ ಆಗಿದ್ದು, ಬೇರೆ ಧಾರಾವಾಹಿಗಳಂತೆ ಸ್ಪರ್ಧೆಯಲ್ಲಿ ಭಾಗವಹಿಸಿ ಬರೋಬ್ಬರಿ 15 ಅವಾರ್ಡ್ಸ್ ಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.
ಜೊತೆಜೊತೆಯಲಿ ಧಾರಾವಾಹಿಯ ಅದ್ಭುತ ನಟನೆಗೆ ಆರ್ಯವರ್ಧನ್ ಪಾತ್ರದ ಅನಿರುದ್ಧ್ ಅವರಿಗೆ ಬೆಸ್ಟ್ ನಟ ಪ್ರಶಸ್ತಿ ಲಭಿಸಿದೆ. ಹಾಗೂ ಗಟ್ಟಿಮೇಳ ಧಾರಾವಾಹಿ ಮೂಲಕ ಹುಡುಗಿಯರ ನೆಚ್ಚಿನ ನಟನಾಗಿರುವ ವೇದಾಂತ್ ಪಾತ್ರಧಾರಿ ರಕ್ಷ್ ಅವರಿಗೆ ಜನ ಮೆಚ್ಚಿದ ನಾಯಕ ನಟ ಪ್ರಶಸ್ತಿ ಲಭಿಸಿದೆ. ಇನ್ನು ಜೊತೆಜೊತೆಯಲಿ ಧಾರಾವಾಹಿಯ ಅನು ಸಿರಿಮನೆ ಪಾತ್ರದ ಮೂಲಕ ಜನರ ಮನ ಗೆದ್ದಿರುವ ಮೇಘ ಶೆಟ್ಟಿ ಅವರಿಗೆ ಜನಮೆಚ್ಚಿದ ನಾಯಕಿ ಪ್ರಶಸ್ತಿ, ಅನು ಆರ್ಯವರ್ಧನ್ ಜೋಡಿಗೆ ಬೆಸ್ಟ್ ಜೋಡಿ ಪ್ರಶಸ್ತಿ , ಜೊತೆಜೊತೆಯಲಿ ಧಾರಾವಾಹಿಗೆ ಬೆಸ್ಟ್ ಡಿಓಪಿ ಪ್ರಶಸ್ತಿ, ಬೆಸ್ಟ್ ಡೈಲಾಗ್ ರೈಟರ್ ಪ್ರಶಸ್ತಿ, ಅನು ಅಪ್ಪ ಅಮ್ಮನಿಗೆ ಬೆಸ್ಟ್ ಅಪ್ಪ ಅಮ್ಮ ಪ್ರಶಸ್ತಿ, ಹರ್ಶವರ್ಧನ್ ಗೆ ಬೆಸ್ಟ್ ಸಹೋದರ ಪ್ರಶಸ್ತಿ, ಅತ್ಯುತ್ತಮ ಸಪೋರ್ಟಿಂಗ್ ರೋಲ್ ನಟಿ ಹಾಗೂ ನಟ ಪ್ರಶಸ್ತಿ ಹಾಗೂ ಅತಿ ಹೆಚ್ಚು ರೇಟೆಡ್ ಧಾರಾವಾಹಿ ಪ್ರಶಸ್ತಿ, ಇನ್ನೂ ಎಲ್ಲರ ಅಚ್ಚು ಮೆಚ್ಚು ಆಗಿರುವ ಜೊತೆ ಜೊತೆಯಲಿ ಧಾರವಾಹಿಯ ಶೀರ್ಷಿಕೆ ಗೀತೆ ಅತ್ಯುತ್ತಮ ಶೀರ್ಷಿಕೆ ಗೀತೆ ಪ್ರಶಸ್ತಿಯನ್ನು, ಅತ್ಯುತ್ತಮ ಎಡಿಟರ್ ಪ್ರಶಸ್ತಿ, ಅತ್ಯುತ್ತಮ ಸ್ಕ್ರೀನ್ ಪ್ಲೇ ಪ್ರಶಸ್ತಿ, ವಿಶೇಷ ಮೆಚ್ಚುಗೆ ಪ್ರಶಸ್ತಿ ಇದೆ ರೀತಿಯ ಹೀಗೆ ಒಟ್ಟು 15 ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು ಜೊತೆಜೊತೆಯಲಿ ಧಾರಾವಾಹಿಯ ಕಲಾವಿದರು ಹಾಗೂ ತಂತ್ರಜ್ಞರು ಹಬ್ಬದ ಸಡಗರದಲ್ಲಿ ಇದ್ದಾರೆ ಎಂದರೆ ತಪ್ಪಾಗಲಾರದು.