ಮಹಿಳೆಯರು ಕೇಳಿದ ಪ್ರಶ್ನೆ: ಮುಖದ ಮೇಲಿನ ಕೂದಲು ನಿವಾರಣೆಗೆ ಪರಿಹಾರ

0 2,192

ಮಹಿಳೆಯರು ಸೌಂದರ್ಯ ಪ್ರಿಯರು. ಹುಡುಗಿಯರು ಮೊಗದ ಮೇಲೆ ಪಿಂಪಲ್ ಗಳು, ಮುಖದ ಮೇಲೆ ಬೇಡದ ಕೂದಲು ಬೆಳೆದರೆ ಲಜ್ಜಿತರಾಗುತ್ತಾರೆ, ಮುಜುಗರ ಪಡುತ್ತಾರೆ. ಹದಿಹರೆಯದವರ ಮುಖದ ಮೇಲೆ ಕೂದಲು ಬೆಳೆಯುವ ಸಮಸ್ಯೆಗಳ ಕಾರಣ ಹಾಗೂ ಪರಿಹಾರಗಳನ್ನು ನಾವು ಈ ಮಾಹಿತಿಯ ಮೂಲಕ ತಿಳಿಯೋಣ.

ಹೆಣ್ಣು ಮಕ್ಕಳಲ್ಲಿ ಗಂಡಿನಲ್ಲಿ ಬಿಡುಗಡೆಯಾಗುವ ಆ್ಯಂಡ್ರೊಜನ್ ಗಳು ಹಾಗೂ ಹಾರ್ಮೋನ್ ಗಳು ಬಿಡುಗಡೆಯಾದಾಗ ಮುಖದ ಮೇಲಿನ ಕೂದಲು ಬೆಳೆಯುವ ಸಮಸ್ಯೆ ಉದ್ಭವಿಸುವ ಸಂಭವ ಇರುತ್ತದೆ. ಓವರಿಸ್ ನಲ್ಲಿ ಇರುವ ನಿರ್ಗುಳ್ಳೆಗಳ ಕಾರಣದಿಂದ ಈ ಹಾರ್ಮೋನ್ ಗಳು ಬಿಡುಗಡೆ ಆಗುತ್ತದೆ. ಈ ತರಹದ ಸಮಸ್ಯೆಗಳಿಗೆ ಪಿಸಿಒಡಿ ಅಥವಾ ಪಿಸಿಓಎಸ್ ಗಳು ಎಂದು ನಿರ್ಧರಿಸಬಹುದು. ಕೆಲವೊಮ್ಮೆ ಸ್ಕ್ಯಾನಿಂಗ್ ಗಳಲ್ಲಿ ಕಾಣಿಸಬಹುದು ಇಲ್ಲವೇ ಕಾಣಿಸದೆ ಇರಬಹುದು. ಆದರೆ ಮುಖದ ಮೇಲಿನ ಕೂದಲುಗಳು ಹಾಗೆ ಬೆಳೆಯುತ್ತಿರುತ್ತದೆ. ಹಾಗಾದರೆ ಮುಖದ ಮೇಲಿನ ಕೂದಲು ನಿವಾರಣೆಗಾಗಿ ಏನು ಮಾಡಬೇಕು. ಮೊದಲು ಮೂಲ ಕಾರಣಗಳನ್ನು ನೋಡಬೇಕು. ತಿಂಗಳಿನ ದಿನಗಳು ಸರಿಯಾಗಿ ಆಗುತ್ತಿದೆಯೆ ಗಮನ ಕೊಡಬೇಕು. ಹಾರ್ಮೋನ್ ಗಳ ಸಮತೋಲನ ತಪ್ಪಲು ಕಾರಣವೇನು ನೋಡಬೇಕು. ಪಿಸಿಓಡಿ ಹಾಗೂ ಪಿಸಿಓಎಸ್ ಗಳಿಗೆ ಚಿಕಿತ್ಸೆ ಪಡೆಯಬೇಕು. ಹೆಚ್ಚು ತೂಕವಿದ್ದರೆ ತೂಕ ಇಳಿಸಿಕೊಳ್ಳಬೇಕು. ಹೊಟ್ಟೆಯ ಭಾಗ ದೊಡ್ಡದಾಗಿದ್ದರೆ ಕರಗಿಸಿಕೊಳ್ಳಬೇಕು. ಡಾಕ್ಟರ್ ಗಳ ಸಲಹೆ ಪಡೆಯುವುದು ಉತ್ತಮ. ಮನೆಯ ಮದ್ದಿನಲ್ಲಿ ಕಡಿಮೆ ಮಾಡಬೇಕು ಎಂದು ಕೊಂಡರೆ ಅದಕ್ಕೆ ಪರಿಹಾರ ಹೀಗಿದೆ. ನಿಂಬೆಹಣ್ಣು ಹಾಗೂ ಸಕ್ಕರೆಯ ಮಿಶ್ರಣ ತಯಾರಿಸಿ, ಈ ಮಿಶ್ರಣವನ್ನು ಕೂದಲು ಬೆಳೆಯುತ್ತಿರುವ ವಿರುದ್ದದಲ್ಲಿ ಮಸಾಜ್ ಮಾಡಬೇಕು.

ಒಂದು ವೇಳೆ ನಿಂಬೆಹಣ್ಣಿನ ರಸ ಸುಟ್ಟಂತಹ ಅನುಭವ ಉಂಟುಮಾಡಿದರೆ ಸ್ವಲ್ಪ ನೀರನ್ನು ಸೇರಿಸಿಕೊಳ್ಳಬಹುದು. ಯಾವ ದಿಕ್ಕಿನಲ್ಲಿ ಕೂದಲುಗಳ ಬೆಳವಣಿಗೆ ಇದೆಯೊ ಅದರ ವಿರುದ್ಧದ ದಿಕ್ಕಿನಲ್ಲಿ ಮಸಾಜ್ ಮಾಡಬೇಕು. ಕಡಿಮೆಯೆಂದರೂ ಮೂರು ತಿಂಗಳು ಮಾಡಬೇಕು. ಇನ್ನೂ ಚರ್ಮಕ್ಕೆ ನಿಂಬೆರಸ ಆಗುವುದಿಲ್ಲ ಅನ್ನುವಂತಹವರಿಗೆ ಇರುವ ಉಪಾಯವೆಂದರೆ ಓಟ್ಸ್‌ ರುಬ್ಬಿದ ಪುಡಿಯ ಜೊತೆಯಲ್ಲಿ ಜೇನು ತುಪ್ಪವನ್ನು ಬೆರೆಸಿ ಮಸಾಜ್ ಮಾಡಿಕೊಳ್ಳಬೇಕು. ಇದರಿಂದ ಹೆಚ್ಚಾಗಿ ಮುಖದಲ್ಲಿ ಬೆಳೆಯುವ ಕೂದಲನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಇನ್ನು ತಾಜಾ ಹಾಲಿಗೆ ಶುದ್ದ ಅರಿಶಿನದ ಪುಡಿಯನ್ನು ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಪ್ಯಾಕ್ ಹಾಕಿಕೊಂಡು, ಇಪ್ಪತ್ತು ನಿಮಿಷ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಇದನ್ನು ಪ್ರತಿನಿತ್ಯ ಬಳಸುವುದರಿಂದ ಮುಖದ ಕಾಂತಿ ಹೆಚ್ಚುವುದರ ಜೊತೆಗೆ ನಿರ್ಜೀವ ಕಣಗಳ ಹೊಗಲಾಡಿಸುತ್ತದೆ. ಮುಖದ ಮೇಲಿನ ಕೂದಲುಗಳ ನಿರ್ಮೂಲನೆಗೆ ಸಹಾಯ ಮಾಡುತ್ತದೆ. ಮುಖದ ಮೇಲಿನ ಕೂದಲಿನ ನಿವಾರಣೆಗೆ ಪಾರ್ಲರ್ ಗಳಲ್ಲಿ ಫಿ-ಲಾಫ್ ಗಳನ್ನು ಮಾಡುತ್ತಾರೆ. ಇದನ್ನು ಮನೆಯಲ್ಲಿಯೆ ಮಾಡುವ ವಿಧಾನ ಹೀಗಿದೆ.

ಎರಡು ಎಗ್ ವೈಟ್, ಎರಡು ಚಮಚ ಜೋಳದ ಪುಡಿ ಹಾಗೂ ಎರಡು ಚಮಚ ನುಣುಪಾದ ಸಕ್ಕರೆಯ ಪುಡಿಯನ್ನು ಮಿಶ್ರಣ ಮಾಡಿಕೊಳ್ಳಬೇಕು. ಎಲ್ಲಿ ಬೇಡದ ಕೂದಲುಗಳಿವೆಯೊ ಆ ಕೂದಲಿನ ಮೇಲೆ ಹಚ್ಚಿಕೊಳ್ಳಬೇಕು. ಹತ್ತು ನಿಮಿಷಗಳ ಮೇಲೆ ಗಟ್ಟಿಯಾದ ಈ ಮಿಶ್ರಣವನ್ನು ಕೂದಲು ಬೆಳೆದ ದಿಕ್ಕಿನ ವಿರುದ್ದವಾಗಿ ಎಳೆಯಬೇಕು. ಒಂದು ತಿಂಗಳು ಹೀಗೆ ಎರಡು ಹೊತ್ತು ಮಾಡುವದರಿಂದ ಕೂದಲು ಬೆಳೆಯುವ ಸಮಸ್ಯೆ ನಿವಾರಣೆ ಆಗುತ್ತದೆ. ಈ ರೀತಿಯ ಬೇಡದ ಕೂದಲಿನ ಸಮಸ್ಯೆಗೆ ಮೂಲ ಕಾರಣವಾದ ಪಿಸಿಓಡಿ ಸಮಸ್ಯೆಗೆ ಎಳನೀರಿನ ಉಪವಾಸ, ಒಮೆಗಾ 3 ಯ ಸೇವನೆ, ಲೈಕೋ 3 ಯ ಸೇವನೆ, ಅಲ್ಫಾ ನ್ಯಾಚುರಲ್ ಅವರ ಸ್ಮೂತ್ ಫ್ಲೋ ಇರಬಹುದು ಇವುಗಳ ಸೇವನೆಯಿಂದ ಪರಿಹಾರ ಸಿಗುತ್ತದೆ. ಸ್ಮೂತ್ ಫ್ಲೋ ಹಲವು ಸಸ್ಯಗಳ ಔಷಧಿಗಳಿಂದ ತಯಾರಾಗಿದೆ. ಇದನ್ನು ಬೆಳಗ್ಗೆ ಹಾಗೂ ಸಂಜೆ ಸೇವಿಸುವುದರಿಂದ ಪರಿಹಾರ ಸಿಗುತ್ತದೆ. ಸ್ಮೂತ್ ಫ್ಲೋ ಸೇವಿಸುವುದರಿಂದ ಮುಟ್ಟಿನ ಸಮಸ್ಯೆ ಸರಿಯಾಗುತ್ತದೆ. ಹಾರ್ಮೋನ್ ಗಳ ಬಿಡುಗಡೆ ಸರಿಯಾಗುತ್ತದೆ.

ಮುಖದ ಮೇಲಿನ ಬೇಡದ ಕೂದಲುಗಳ ನಿವಾರಣೆಗಳು ನಿಧಾನವಾಗಿ ಸಾಗುತ್ತದೆ. ತಕ್ಷಣವೇ ಪರಿಹಾರ ಸಿಗಬೇಕು ಎಂದರೆ ಸಾಧ್ಯವಿಲ್ಲ. ನಿರಂತರವಾಗಿ ಔಷಧ ಮಾಡುತ್ತಾ ಬಂದಲ್ಲಿ ಕೂದಲುಗಳ ಬೆಳವಣಿಗೆಯ ಸಮಸ್ಯೆ ಪರಿಹರಿಸಿಕೊಳ್ಳಬಹುದು.

Leave A Reply

Your email address will not be published.