ಅವರು ಇವರು ಎಂದು ಯಾವುದೆ ಭೇದ ಭಾವ ಇಲ್ಲದೆ ಎಲ್ಲರು ಇಷ್ಟ ಪಡುವ ಆಟ ಕ್ರಿಕೆಟ್. ಟೆಸ್ಟ್ ಮ್ಯಾಚ್ ಆಗಲಿ, ಟ್ವೆಂಟಿ ಟ್ವೆಂಟಿ ಆಗಲಿ ಇಷ್ಟ ಪಟ್ಟು ನೋಡುತ್ತಾರೆ. ಐಪಿಎಲ್ ಬಂದರಂತೂ ಹಬ್ಬದ ವಾತಾವರಣ ಇರುತ್ತದೆ. ಅಷ್ಟು ಹುಚ್ಚೆಬ್ಬಿಸುತ್ತದೆ ಕ್ರಿಕೆಟ್. ಇಂತಹ ಮಹಿಳಾ ಕ್ರಿಕೆಟ್ ಟೀಂ ನಲ್ಲಿ ಆಡುತ್ತಿರುವ ಸ್ಮೃತಿ ಮಂದಾನ ಅವರಿಗೆ ಒಬ್ಬ ಯುವ ಆಟಗಾರನ ಆಟ ತುಂಬಾ ಮೆಚ್ಚುಗೆಯಾಗಿದೆಯಂತೆ. ಹಾಗಾದರೆ ಅವರು ಯಾರು ಎಂದು ಇಲ್ಲಿ ತಿಳಿಯೋಣ.
ಈ ವರ್ಷ ಕರೋನಾ ಸೊಂಕಿನ ಕಾರಣದಿಂದ ಐಪಿಎಲ್ ಪಂದ್ಯ ನಡೆಸಬಾರದು ಎಂದು ನಿರ್ಣಯಿಸಲಾಗಿತ್ತು. ಇದರಿಂದ ಅಭಿಮಾನಿಗಳು ನಿರಾಸೆಗೊಂಡಿದ್ದರು. ಆದರೆ ಐಪಿಎಲ್ ನಡೆಸಲು ನಿರ್ಧರಿಸಿ ಐಪಿಎಲ್ ಕ್ರಿಕೆಟ್ ಹಬ್ಬ ಶುರುವಾಗಿಬಿಟ್ಟಿತು. ಎಂಟು ತಂಡಗಳು ಹದಿಮೂರನೆ ಆವೃತ್ತಿ ಐಪಿಎಲ್ ಪಟ್ಟಕ್ಕಾಗಿ ಯುಎಇ ನಲ್ಲಿ ಪಣತೊಟ್ಟು ಪೈಪೋಟಿಗೆ ನಿಂತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನೈ ಸೂಪರ್ ಕಿಂಗ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್, ಮುಂಬಯಿ ಇಂಡಿಯನ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಕೆಪಿಟಲ್ಸ್, ರಾಜಸ್ಥಾನ ರಾಯಲ್ಸ್ ಹೀಗೆ ಎಂಟು ತಂಡಗಳು ಮನರಂಜನೆಯ ಜೊತೆಗೆ ಜಿದ್ದಾ ಜಿದ್ದಿ ನಡೆಯುತ್ತಿದೆ. ಒಂದಿಷ್ಟು ಜನ ಬೆಂಗಳೂರು ತಂಡಕ್ಕೆ, ಒಂದಿಷ್ಟು ಜನ ಚೆನೈ ಸೂಪರ್ ಕಿಂಗ್ಸ್ ತಂಡಕ್ಕೆ, ಒಂದಷ್ಟು ಜನ ಮುಂಬಯಿ ಇಂಡಿಯನ್ಸ್ ತಂಡಕ್ಕೆ, ಇನ್ನೊಂದಷ್ಟು ಜನ ಕನ್ನಡಿಗರೆ ಇರುವ ಪಂಜಾಬ್ ತಂಡ ಗೆಲ್ಲಬೇಕೆಂದು ಆಸೆ ಪಟ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಐಪಿಎಲ್ ಶುರುವಾದರೆ ಎಲ್ಲಾ ಕ್ಷೇತ್ರದ ಜನರು ತಮ್ಮ ಇಷ್ಟದ ತಂಡಕ್ಕೆ ಬೆಂಬಲಿಸುತ್ತಾರೆ.
ತಮ್ಮ ಇಷ್ಟದ ತಂಡಗಳೆ ಗೆಲ್ಲಬೇಕೆಂದು ಆಸೆ ಪಟ್ಟು ಪ್ರೀತಿಸುತ್ತಾರೆ. ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಾನ ಕೂಡಾ ಐಪಿಎಲ್ ಪಂದ್ಯದ ಮನರಂಜನೆ ಪಡೆಯುತ್ತಿದ್ದಾರೆ. ಸ್ಮೃತಿ ಮಂದಾನ ಮೂಲತಃ ಮುಂಬೈಯವರು. ಸ್ಮೃತಿ ಮಂದಾನ ಅವರು ಇಷ್ಟ ಪಟ್ಟ ಆಟಗಾರ ಈಗಾಗಲೇ ಟೀಂ ಇಂಡಿಯಾ ಕಡೆಯಿಂದ ನಾಲ್ಕೈದು ಬಾರಿ ಟೀ ಟ್ವೆಂಟಿ ಆಡಿದ್ದಾರೆ. ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಶ್ರಮ ಪಡುತ್ತಿದ್ದಾರೆ. ಈಗ ಐಪಿಎಲ್ ನಲ್ಲಿ ಭಾರಿ ಪ್ರದರ್ಶನ ನೀಡುತ್ತಿದ್ದಾರೆ. ತಮ್ಮ ತವರು ತಂಡ ಮುಂಬೈ ಬಿಟ್ಟು ಆ ಆಟಗಾರನ ತಂಡವೇ ಗೆಲ್ಲಲಿ ಎಂದು ಆಸೆ ಪಟ್ಟಿದ್ದಾರೆ. ಹಾಗಾದರೆ ಆ ಆಟಗಾರ ಯಾರು ಎಂದರೆ ಕೇರಳದ ಸಂಜು ಸ್ಯಾಮ್ಸನ್. ಸಂಜು ಸ್ಯಾಮ್ಸನ್ ಅವರ ಆಟದ ವೈಖರಿಗೆ, ಅವರು ಸಿಕ್ಸ್ ಹಾಗೂ ಬೌಂಡರಿ ಹೊಡೆಯುವ ವಿಧಾನಗಳು ಕಂಡು ಫಿದಾ ಆಗಿದ್ದಾರೆ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಾನ. ಸ್ಮೃತಿ ಮಂದಾನ ಸಂಜು ಆಡುತ್ತಿರುವ ರಾಜಸ್ಥಾನ ರಾಯಲ್ಸ್ ಗೆಲ್ಲಬೇಕೆಂದು ಬಯಸಿದ್ದಾರೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ ಎಂದು ವರದಿ ಸಿಕ್ಕಿದೆ.
ಐಪಿಎಲ್ ಪಂದ್ಯವೆ ಒಂದು ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಎಲ್ಲರೂ ಅವರವರ ನೆಚ್ಚಿನ ತಂಡಗಳಿಗೆ ಪ್ರೋತ್ಸಾಹ ನೀಡುತ್ತಾ, ಗೆದ್ದಾಗ ಸಂತೋಷಿಸುತ್ತಾ, ಸೋತಾಗ ಬೆಂಬಲಿಸುತ್ತಾ ಐಪಿಎಲ್ ಪಂದ್ಯವನ್ನು ವೀಕ್ಷಕರು ಆನಂದಿಸುತ್ತಿದ್ದಾರೆ.