ಈ ಅಖಿಲಾಂಡ ಬ್ರಹ್ಮಾಂಡ ಹೇಗೆ ಸ್ರಷ್ಟಿ ಆಯಿತು ಎನ್ನುವುದರ ಬಗ್ಗೆ ಕೆಲವು ದಶಕಗಳಿಂದ ವಿಜ್ಞಾನಿಗಳು ಸಂಶೋಧನೆ ಮಾಡುತ್ತಲೇ ಇದ್ದಾರೆ. ಇದರಿಂದ ಹೊರಬಂದದ್ದೇ ಮಲ್ಟಿವರ್ಸ್ ಥೇರಿ.ಈ ಬ್ರಹ್ಮಾಂಡದಲ್ಲಿ ಭೂಮಿಯಂತಹ ಗ್ರಹಗಳು ನಿಜವಾಗಿಯೂ ಇವೆಯಾ ಎನ್ನುವುದರ ಬಗ್ಗೆ ನಾವು ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ನಮ್ಮ ವಿಶ್ವವನ್ನು ಹೋಲಿದ ಮತ್ತೊಂದು ವಿಶ್ವದಲ್ಲಿ ಬೇರೆ ಜೀವಿಗಳು ಸಹ ಜೀವನ ಮಾಡುತ್ತಿವೆ ಎಂದು,ನಮ್ಮ ವಿಶ್ವವನ್ನು ಹೋಲಿದ ವಿಶ್ವಗಳು ಬಹಳ ಇವೆ ಎಂದು ಹೇಳಲಾಗಿದೆ. ಇದೇ ಮಲ್ಟಿವರ್ಸ್ ಥೇರಿ. ಅಷ್ಟೇ ಅಲ್ಲ ನಮ್ಮ ಹಳೆಯ ಗ್ರಂಥಗಳಲ್ಲಿ ಈ ಥೇರಿಯ ಬಗ್ಗೆ ಕೂಡ ಇದೆ.ವಿಶ್ವ ವಿಜ್ಞಾನಿಗಳ ನಂಬಿಕೆಯ ಪ್ರಕಾರ ಅತ್ಯಂತ ದೂರ ಪ್ರದೇಶಗಳನ್ನು ನೋಡಬಲ್ಲ ಟೆಲಿಸ್ಕೋಪ್ ಗಳು ಸೇರಲು ಸಾಧ್ಯವಾಗದ ನಮ್ಮ ಯುನಿವರ್ಸ್ ನ ಅಂಚಿನಲ್ಲಿ ಮತ್ತೊಂದು ಯುನಿವರ್ಸ್ ನ ಅವಕಾಶ ನೂರರಷ್ಟು ಇದೆ ಎಂದು ಹೇಳುತ್ತಾರೆ.

ಈ ಸಿದ್ಧಾಂತದ ಪ್ರಕಾರ ವಿಶ್ವವ್ಯಾಪ್ತಿಯ ನಿರ್ಮಾಣ,ಅದರಲ್ಲಿ ಪ್ರತಿ ವಿಶ್ವದ ಸ್ವಭಾವ,ವಿಶ್ವಗಳ ನಡುವಿನ ಸಂಬಂಧ ಒಂದರಿಂದ ಮತ್ತೊಂದಕ್ಕೆ ಬದಲಾಗುತ್ತಿರುತ್ತದೆ.ಈ ಭೂಮಿಯನ್ನು ಹೋಲುವ ವಿಶ್ವಗಳು ಬೇಕಾದಷ್ಟು ಇವೆ.ವಿಶ್ವದಲ್ಲಿ ಇರುವ ಪ್ರತಿ ಪ್ರಾಣಿ ಅದರ ಜೀವನದಲ್ಲಿ ನಡೆಯುವ ಪ್ರತಿ ಘಟನೆ,ಪ್ರತಿ ವಿಷಯ ಪ್ರತಿರೂಪವಾಗಿ ಬೇರೊಂದು ವಿಶ್ವದಲ್ಲಿ ಇರುತ್ತದೆ.ಉದಾಹರಣೆಗೆ ಒಬ್ಬ ವ್ಯಕ್ತಿ ಭೂಮಿಯ ಮೇಲೆ ಸತ್ತರೆ ಇನ್ನೊಂದು ವಿಶ್ವದಲ್ಲಿ ಹುಟ್ಟುತ್ತಾನೆ.ಹುಟ್ಟಿ ದೊಡ್ಡ ಸಹ ಆಗಿರಬಹುದು.ಈ ರೀತಿ ಪ್ರತಿ ಸಮಾಂತರ ವಿಷಯದಲ್ಲಿ ಘಟನೆಗಳು ಬೇರೆ ಬೇರೆಯಾಗಿ ನಡೆಯುತ್ತಿರುತ್ತವೆ.

ಇವುಗಳು ನೋಡಲು ಸುಲಭವಾಗಿ ಇದ್ದರೂ ಅರ್ಥ ಆಗುವುದು ಸ್ವಲ್ಪ ಕಷ್ಟ. ಉದಾಹರಣೆಗೆ ‘ಇಂಟರ್ಸ್ಟೇಲರ್’ ಮೂವಿ. ಇದನ್ನು ನೋಡುವಾಗ ಗುಹೆ ಎಂದು ಅನಿಸುತ್ತದೆ.ಮೂವಿ ಮುಗಿದ ಮೇಲೆ ಏನೂ ಎಂದು ಅರ್ಥವಾಗದೇ ಇರುತ್ತದೆ.ಆದ್ದರಿಂದ ವಿಜ್ಞಾನಿಗಳು ನಮಗೆ ಅರ್ಥವಾಗಲಿ ಎಂದು 4 ಭಾಗಗಳನ್ನಾಗಿ ಮಾಡಿದ್ದಾರೆ.ಭಾಗ ಒಂದು ‘ಇನ್ಫ್ಲಿನಿಟಿ ಯುನಿವರ್ಸ್’.ಇದರ ಪ್ರಕಾರ ವಿಶ್ವ ವಿಶಾಲವಾಗಿದ್ದು ಅದೇ ರೀತಿ ಮತ್ತೊಂದು ವಿಶ್ವ ಕೂಡ ಇದಕ್ಕೆ ಪ್ರತಿರೂಪವಾಗಿ ಇದ್ದು ಇದಕ್ಕೆ ಸಮಾನಾಂತರ ಆಗಿರುತ್ತದೆ.

ಭಾಗ ಎರಡು ‘ಇನ್ಫ್ಲೇಶನರಿ ಬಬಲ್ ಯೂನಿವರ್ಸ್’.ಇದರ ಪ್ರಕಾರ ಅನೇಕ ವಿಶ್ವಗಳು ಸೇರಿ ಒಂದು ಗುಳ್ಳೆಯಲ್ಲಿ ಇದ್ದು ಇವೆಲ್ಲ ಒಂದರ ಜೊತೆ ಇನ್ನೊಂದು ಬೆರೆತು ಬೆರೆಯಾಗುವ ಸಮಯದಲ್ಲಿ ಇನ್ನೊಂದು ವಿಶ್ವವನ್ನು ಸ್ರಷ್ಟಿ ಮಾಡುತ್ತದೆ.ಇದರಿಂದ ಅನೇಕ ಸಮಾಂತರ ವಿಶ್ವಗಳು ಸ್ರಷ್ಟಿಯಾಗುತ್ತದೆ.

ಭಾಗ ಮೂರು ‘ಮೆನಿ ವರ್ಡ್ಸ್ ಯುನಿವರ್ಸ್’.ಇದರ ಪ್ರಕಾರ ನಮ್ಮನ್ನು ಹೋಲುವ ಮನುಷ್ಯರು ಪ್ರತಿಯೊಂದು ವಿಶ್ವದಲ್ಲೂ ಇರುತ್ತಾರೆ.ಉದಾಹರಣೆಗೆ ಈ ಭೂಮಿ ಮೇಲೆ ಮುಖೇಶ್ ಅಂಬಾನಿ ದೊಡ್ಡ ಶ್ರೀಮಂತರು.ಆದರೆ ಇನ್ನೊಂದು ವಿಶ್ವದಲ್ಲಿ ಅವರು ಬಡವರಾಗಿರಬಹುದು.ಇದು ಸರಿ ಸುಮಾರು ಎರಡನೇ ಥೇರಿಯನ್ನು ಹೋಲುತ್ತದೆ.

ಭಾಗ ನಾಲ್ಕು ‘ಡಿಫರೆಂಟ್ ಲಾಸ್ ಆಫ್ ಫಿಸಿಕ್ಸ್ ಆಂಡ್ ಮೆಥಮೆಟಿಕ್ಸ್’.ಈ ಸಿದ್ಧಾಂತದಲ್ಲಿ ಬೇರೊಂದು ಸಮಾಂತರವನ್ನು ಗಣಿತದ ನಿಯಮಗಳನ್ನು ಬಳಸಿ ಕಂಡುಹಿಡಿಯಲಾಗುತ್ತದೆ.ಇದರ ಪ್ರಕಾರ ಒಂದು ವಿಶ್ವ ಇನ್ನೊಂದು ವಿಶ್ವಕ್ಕೆ ಸಮ ಇಲ್ಲದ ರೀತಿಯಲ್ಲಿ ಇರುತ್ತದೆ.ಇಲ್ಲಿ ಪ್ರತಿವಿಶ್ವಕ್ಕೂ ಬೇರೆ ಬೇರೆ ಆದ ಗಣಿತ ಮತ್ತು ಭೌತಶಾಸ್ತ್ರ ಇರುತ್ತದೆ.ಒಂದು ವಿಶ್ವದ ಸಮಯ ವೇಗವಾಗಿ ಇದ್ದರೆ ಇನ್ನೊಂದು ವಿಶ್ವದ ಸಮಯ ನಿಧಾನಕ್ಕೆ ಇರುತ್ತದೆ.

ಈ ನಾಲ್ಕು ಭಾಗಗಳಲ್ಲಿ ಯಾವುದು ಸತ್ಯ ಎಂದು ಹೇಳಲು ಸಾಧ್ಯವಿಲ್ಲ.ಏಕೆಂದರೆ ಎಲ್ಲವೂ ವಿಜ್ಞಾನಿಗಳ ಊಹೆ ಮಾತ್ರವಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ತುಂಬಾ ವಿಜ್ಞಾನಿಗಳು ಸಂಶೋಧನೆ ಮಾಡುತ್ತಲೇ ಇದ್ದಾರೆ. ಆದಷ್ಟು ಬೇಗ ಇವುಗಳಲ್ಲಿ ಯಶಸ್ಸು ಸಿಗಲಿ ಎಂದು ಬಯಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!