ಕಣ್ಣಿನ ಕೆಳಗೆ ಕಪ್ಪಾಗುವುದನ್ನು ಕಡಿಮೆಮಾಡಲು ಮನೆಯಲ್ಲೆ ಸುಲಭವಾಗಿ ಮಾಡಬಹುದಾದ ಮನೆಮದ್ದನ್ನು ಈ ಲೇಖನದ ಮೂಲಕ ತಿಳಿಯೋಣ.
ಕೆಲವರಿಗೆ ಕಣ್ಣಿನ ಕೆಳಗೆ ಕಪ್ಪಾಗುತ್ತದೆ. ಇದಕ್ಕೆ ಕಾರಣವೆಂದರೆ ನಿದ್ರೆ ಸರಿಯಾಗಿ ಮಾಡದೆ ಇರುವುದು, ಟೆನ್ಷನ್ ಮಾಡಿಕೊಳ್ಳುವುದು. ಇದಕ್ಕೆ ಹಣ್ಣುಗಳನ್ನು ಹೆಚ್ಚು ತಿನ್ನಬೇಕು, ತರಕಾರಿಗಳನ್ನು ಹೆಚ್ಚು ತಿನ್ನಬೇಕು, ಹೆಚ್ಚು ನೀರನ್ನು ಕುಡಿಯಬೇಕು. ಹಸಿ ಆಲೂಗಡ್ಡೆಯ ರಸವನ್ನು ತೆಗೆದುಕೊಂಡು ಪ್ರತಿದಿನ ಕಣ್ಣಿನ ಕೆಳಭಾಗಕ್ಕೆ ಹಚ್ಚಿ ಮಸಾಜ್ ಮಾಡಿ ವಾಷ್ ಮಾಡುವುದರಿಂದ ಕಣ್ಣಿನ ಕೆಳಗೆ ಕಪ್ಪಾಗುವುದು ಕಡಿಮೆಯಾಗುತ್ತದೆ. ಅಲ್ಲದೇ ಸ್ವಲ್ಪ ಬಾದಾಮಿ ಎಣ್ಣೆ, ಸ್ವಲ್ಪ ತೆಂಗಿನ ಎಣ್ಣೆ, ಸ್ವಲ್ಪ ಆಲೋವೆರಾ ಜಲ್, ವಿಟಮಿನ್ ಇ ಕ್ಯಾಪ್ಸೂಲ್ ಒಳಗಿರುವ ಜಲ್ ಮಿಕ್ಸ್ ಮಾಡಿ ಜಲ್ ರೀತಿಯಲ್ಲಿ ಮಲಗುವ ಮುನ್ನ ಕಣ್ಣಿನ ಕೆಳಗೆ ಹಚ್ಚಿಕೊಳ್ಳಬೇಕು ಇದರಿಂದ ಕಣ್ಣಿನ ಕೆಳಭಾಗ ಕಪ್ಪಾಗಿರುವುದು ಕಡಿಮೆಯಾಗುತ್ತದೆ ಮತ್ತು ಕಣ್ಣಿನ ಆರೋಗ್ಯ ಹೆಚ್ಚಾಗುತ್ತದೆ.
ಎರಡು ಸ್ಪೂನ್ ಕಾಫಿ ಪೌಡರ್, ಜೇನುತುಪ್ಪ, ಹಸಿ ಆಲೂಗಡ್ಡೆ ರಸ ಮೂರನ್ನು ಸೇರಿಸಿ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿ 15-20 ನಿಮಿಷದ ನಂತರ ವಾಷ್ ಮಾಡಬೇಕು. ಪ್ಯಾಕ್ ಮಾಡಿಕೊಂಡಾಗ ಶವಾಸನದಲ್ಲಿ ವಿಶ್ರಾಂತಿ ಪಡೆಯಬೇಕು ಇದರಿಂದ ಕಣ್ಣಿನ ಕೆಳಗೆ ಕಪ್ಪಾಗಿರುವುದು ಕಡಿಮೆಯಾಗುತ್ತದೆ ಮತ್ತು ಮುಖದ ಕಾಂತಿ ಹೆಚ್ಚುತ್ತದೆ. ಸುಲಭವಾಗಿ ಮಾಡಬಹುದಾದ ಮನೆ ಮದ್ದನ್ನು ಮಾಡಿಕೊಂಡು ಕಣ್ಣಿನ ಕೆಳಗೆ ಆಗುವ ಕಪ್ಪನ್ನು ಕಡಿಮೆ ಮಾಡಿಕೊಳ್ಳಬಹುದು.

ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ.