ಮೇಘನಾ ರಾಜ್ ಅವರ ಬಗ್ಗೆ ಯಾರಿಗೆ ತಿಳಿದಿಲ್ಲ. ಮೊದಲು ಅವರು ಸುಂದರ್ ರಾಜ್ ಮತ್ತು ಪ್ರಮೀಳಾ ದೇಸಾಯಿ ಇವರ ಪುತ್ರಿ. ನಂತರ ಚಿರಂಜೀವಿ ಸರ್ಜಾ ಅವರನ್ನು ವಿವಾಹವಾಗಿದ್ದರು. 2018ರಲ್ಲಿ ಅದ್ದೂರಿಯಾಗಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಆದರೆ ಮದುವೆ ಆದ 2 ವರ್ಷಕ್ಕೆ ಚಿರು ಅವರು ಮರಣ ಹೊಂದಿದರು. ಮೇಘನಾ ರಾಜ್ ಅವರು ಚಿರುಅವರ ಹುಟ್ಟಿದ ದಿನ ಮಾತಾಡಿದ ಬಗ್ಗೆ ನಾವು ಇಲ್ಲಿ ತಿಳಿಯೋಣ.
ಎರಡೂ ಕುಟುಂಬಗಳು ಚಿರು ಅಗಲಿಕೆಯ ನೋವಿನಲ್ಲಿ ಅಂದರೆ ದುಃಖದ ನಡುವೆಯೂ ಕೂಡ ಸೀಮಂತ ಶಾಸ್ತ್ರವನ್ನು ಮಾಡಿ ಮುಗಿಸಿದ್ದಾರೆ.ಕುಟುಂಬದ ಆಪ್ತರು ಮಾತ್ರ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.ಹುಟ್ಟುವ ಮಗುವಿಗೆ ಹಾರೈಸಿದ್ದಾರೆ. ಇಲ್ಲಿ ವಿಶೇಷತೆ ಎಂದರೆ ನೆನಪಿಗಾಗಿ ಚಿರು ಅವರ ಸೆಟ್ ಹಾಕಿಸಲಾಗಿದೆ
ಅಕ್ಟೋಬರ್ 17ನೇ ತಾರೀಖು ಚಿರು ಅವರ ಹುಟ್ಟಿದ ದಿನ.ಚಿರು ಅವರು ದಿವಂಗತ ಆದ ನಂತರ ಮೊದಲ ಹುಟ್ಟಿದ ಹಬ್ಬ ಇದಾಗಿದೆ. ಈ ದಿನ ಮೇಘನಾ ರಾಜ್ ಅವರು ಕನಕಪುರದ ನೆಲಗುಳಿ ಫಾರ್ಮ್ ಹೌಸ್ ಮನೆಗೆ ತೆರಳಿದರು.ಅಲ್ಲಿ ತೆರಳಿ ಚಿರು ಅವರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಆಗ ಮೇಘನಾ ರಾಜ್ ಅವರು ಚಿರು ಇಲ್ಲದಿರುವುದು ನನಗೊಂದೇ ಅಲ್ಲ ಎಲ್ಲರಿಗೂ ತುಂಬಾ ದುಃಖವಾಗಿದೆ. ಧ್ರುವ ಮತ್ತು ಎಲ್ಲರೂ ಸೇರಿ ತನ್ನ ಸೀಮಂತ ಕಾರ್ಯಕ್ರಮವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ಯಾವತ್ತು ಅವರು ಭೂಮಿಗೆ ಬರಬೇಕೆಂದು ನಿರ್ಧರಿಸುತ್ತಾರೋ ಅವತ್ತು ಭೂಮಿಗೆ ಬರುತ್ತಾರೆ” ಎಂದು ತಮ್ಮ ಡೆಲಿವರಿಯ ಬಗ್ಗೆ ಹೇಳಿದ್ದಾರೆ.