ಸುವರ್ಣ ಗಡ್ಡೆಯು ಉತ್ತಮ ಮನೆಮದ್ದಾಗಿದೆ. ಯಾವ ರೋಗಕ್ಕೆ ಸುವರ್ಣ ಗಡ್ಡೆಯನ್ನು ಬಳಸಬೇಕು ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯೋಣ.
ಆಕರ್ಷಣೀಯವಲ್ಲದ, ಬಳಸಲು ಇಷ್ಟವಾಗದ ತರಕಾರಿಯಾಗಿರುವ ಸುವರ್ಣ ಗಡ್ಡೆಯಲ್ಲಿ ಸಾಕಷ್ಟು ಔಷಧೀಯ ಗುಣವಿದೆ. ನಾಲಿಗೆ ತುರಿಸುವ ಕಾರಣದಿಂದ ನೀರಿನಲ್ಲಿ ಬೇಯಿಸಿ, ನೀರನ್ನು ಚೆಲ್ಲಿ ಸುವರ್ಣ ಗಡ್ಡೆಯನ್ನು ಬಳಸಬೇಕು. ಮೂಲವ್ಯಾಧಿ ಸಮಸ್ಯೆಯಿಂದ ಬಳಲುವವರು ಈ ಗಡ್ಡೆಯ ಪಲ್ಯ, ಅಥವಾ ಇದನ್ನು ಆಹಾರ ರೂಪದಲ್ಲಿ ಸೇವಿಸಬೇಕು. ತಿಂಗಳುಗಟ್ಟಲೆ ಮಜ್ಜಿಗೆ ಹಾಗೂ ಸುವರ್ಣ ಗಡ್ಡೆ ಸೇವಿಸಿದರೆ ಸಂಪೂರ್ಣವಾಗಿ ಮೂಲವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತದೆ. ಸುವರ್ಣ ಗಡ್ಡೆಯನ್ನು ಚೆನ್ನಾಗಿ ಜಜ್ಜಿ ತುಪ್ಪ ಸೇರಿಸಿ ಲೇಪಿಸುವುದರಿಂದ ಆನೆಕಾಲು ರೋಗ ನಿವಾರಣೆಯಾಗುತ್ತದೆ.
ಸುವರ್ಣ ಗಡ್ಡೆಯನ್ನು ಬೇಯಿಸಿ ಚೇಳು ಕಚ್ಚಿರುವ ಜಾಗಕ್ಕೆ ಲೇಪಿಸಿದರೆ ವಿಷವು ನಿವಾರಣೆಯಾಗಿ ವಾಸಿಯಾಗುತ್ತದೆ. ಪ್ರತಿದಿನ ಈ ಗಡ್ಡೆಯನ್ನು ಬಳಸುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಸುವರ್ಣ ಗಡ್ಡೆ ಹಾಗೂ ಒಣಶುಂಠಿ ಸೇರಿಸಿ ಜಜ್ಜಿ ಚರ್ಮದ ಗಂಟುಗಳಾದ ಭಾಗಕ್ಕೆ ಲೇಪಿಸಬೇಕು. ಒಂದು ವಾರ ಹೀಗೆ ಹಚ್ಚುತ್ತಾ ಬಂದರೆ ಚರ್ಮದ ಗಂಟು ವಾಸಿಯಾಗುತ್ತದೆ. ಒಟ್ಟಿನಲ್ಲಿ ಸುವರ್ಣ ಗಡ್ಡೆ ನೋಡಲು ಚೆನ್ನಾಗಿರುವುದಿಲ್ಲ ಆದರೆ ಇದು ಬಹಳಷ್ಟು ಔಷಧೀಯ ಗುಣ ಹೊಂದಿದೆ ಆದ್ದರಿಂದ ಈ ಗಡ್ಡೆಯನ್ನು ಬಳಸುವುದು ಆರೋಗ್ಯಕ್ಕೆ ಒಳ್ಳೆಯದು. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.