ತರಕಾರಿಗಳು ಆರೋಗ್ಯಕ್ಕೆ ಸಂಬಂಧಿತ ಹಲವಾರು ಕಾಯಿಲೆಗಳು ಬರದಂತೆ ನಮ್ಮನ್ನು ರಕ್ಷಿಸುತ್ತವೆ. ತರಕಾರಿಗಳನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿ ತಿನ್ನುವುದರಿಂದ ಅದರಲ್ಲಿ ಇರುವ ವಿಟಮಿನ್, ನಾರಿನಾಂಶ, ಸತ್ವಗಳು ಹೇರಳವಾಗಿ ಸಿಗುತ್ತವೆ ಎಂಬ ಮಾತಿದೆ. ಈ ತರಹದ ತರಕಾರಿಗಳಲ್ಲಿ ಒಂದಾದ ಸಿಹಿ ಗೆಣಸು ಸೇವಿಸುವುದರಿಂದ ಏನೇನು ಲಾಭ ಸಿಗುತ್ತದೆ ಎಂಬುದನ್ನು ತಿಳಿಯೋಣ.
ತೂಕ ಹೆಚ್ಚಿಸಿಕೊಳ್ಳಲು ಸಿಹಿ ಗೆಣಸು ಸೇವಿಸಬೇಕು. ಅಸ್ತಮಾ ಸಮಸ್ಯೆಗೆ ಸಿಹಿ ಗೆಣಸು ಪರಿಹಾರ ನೀಡುತ್ತದೆ. ಜೀರ್ಣಕ್ರಿಯೆ ಉತ್ತಮಗೊಳಿಸಲು ಸಿಹಿ ಗೆಣಸಿನಲ್ಲಿರುವ ಪೈಬರ್ ಸಹಾಯ ಮಾಡುತ್ತದೆ. ಸಿಹಿ ಗೆಣಸಿನಲ್ಲಿ ಮಾಗ್ನಿಸಿಯಂ ಹೇರಳವಾಗಿ ದೊರೆಯುತ್ತವೆ. ಸಿಹಿ ಗೆಣಸಿನಲ್ಲಿ ವಿಟಮಿನ್, ಮಿನರಲ್ಸ್, ಪ್ರೋಟೀನ್ ಪುಷ್ಕಳವಾಗಿದೆ. ಸಿಹಿ ಗೆಣಸಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವಿದೆ. ಬೀಟಾ ಕ್ಯಾರೋಟಿನ್, ವಿಟಮಿನ್ ಬಿ ಮತ್ತು ಸಿ ಕಾಂಪ್ಲೆಕ್ಸ್ , ಆಂಟಿ ಆಕ್ಸಿಡೆಂಟ್, ಐರನ್ ಗಳು ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಶ್ವಾಸಕೋಶದ ತೊಡಕುಗಳನ್ನು ನಿವಾರಿಸಿ ಉಸಿರಾಟದ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ಸಿಹಿಗೆಣಸು ಗಂಟಲು ನೋವಿಗೆ ಪರಿಹಾರ ಒದಗಿಸುತ್ತದೆ. ಸಿಹಿ ಗೆಣಸಿನ್ನು ನಿಯಮಿತವಾಗಿ ಸೇವಿಸುವುದರಿಂದ ಕರುಳು, ಕ್ಯಾಲನ್, ಕಿಡ್ನಿ ಪೋಸ್ರ್ಟೇಟ್ ಕ್ಯಾನ್ಸರ್ ಗಳನ್ನು ಬರದಂತೆ ತಡೆಯುತ್ತದೆ. ಸಿಹಿ ಗೆಣಸು ಹೊಟ್ಟೆಯೊಳಗಿನ ಹುಣ್ಣನ್ನು ನಿವಾರಿಸುತ್ತದೆ. ಮಧುಮೇಹಿಗಳಿಗೆ ಒಳ್ಳೆಯದು. ಡಿಹೈಡ್ರೇಷನ್ ಸಮಸ್ಯೆಯನ್ನು ಸಿಹಿ ಗೆಣಸು ನಿವಾರಿಸುತ್ತದೆ.
ಸಿಹಿ ಗೆಣಸಿನ್ನು ಆಹಾರದಲ್ಲಿ ಸೇರಿಸಿ ಬಳಸುವುದರಿಂದ ಎಷ್ಟೆಲ್ಲಾ ಆರೋಗ್ಯ ಲಾಭಗಳಿವೆ ಎನ್ನುವುದು ತಿಳಿದಂತಾಯಿತು. ಇನ್ನೂ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳನ್ನು ಬಳಸಿ ಆರೋಗ್ಯ ಕಾಪಾಡಿಕೊಳ್ಳೊಣ.