ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೀವನ, ಸಿನಿಮಾ ಬಗ್ಗೆ, ಅವರ ಮನೆಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ದರ್ಶನ್ ಅವರು ನಟ, ಮೊಡೆಲ್ ಹಾಗೂ ಸಿನಿಮಾ ನಿರ್ಮಾಪಕರು, ಸಿನಿಮಾ ವಿತರಕರು ಆಗಿದ್ದಾರೆ. ಇವರು ಕನ್ನಡದ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರ ನಟನೆಗೆ ಮನಸೋಲದವರೆ ಇಲ್ಲ. ಇವರಿಗೆ ಪೋಲಿಸ್ ಪಾತ್ರದಲ್ಲಿ ಚೆನ್ನಾಗಿ ಕಾಣುತ್ತಾರೆ. ಇವರು ಯಜಮಾನ, ಒಡೆಯ, ಸ್ವಾಮಿ, ಸುಂಟರಗಾಳಿ, ಧರ್ಮ ಮೊದಲಾದ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇವರ ಸಂಬಳ 6 ಕೋಟಿಯಿದೆ. ಇವರ ಬಳಿ ಸಾಕಷ್ಟು ಒಳ್ಳೆಯ ಕಾರುಗಳಿದೆ. ಜಾಗ್ವಾರ್, ಲೆಂಬ್ರೋಗಿನಿ, ರೇಂಜ್ ರೋವರ್, ಟಯೋಟ ಪೊರ್ಚುನರ್ ಕಾರುಗಳಿವೆ. ದರ್ಶನ್ ಅವರ ಮನೆ ಭವ್ಯವಾಗಿದೆ, ನೋಡಲು ಸುಂದರವಾಗಿದೆ. ಅವರ ಮನೆ ದೊಡ್ಡದಾಗಿದ್ದು ಅರಮನೆಯಂತೆ ಕಾಣುತ್ತದೆ.
ಇವರ ತಂದೆಯ ಹೆಸರು ತೂಗುದೀಪ ಶ್ರೀನಿವಾಸ್. ಇವರು ಸಹ ನಟರಾಗಿದ್ದರು. ಇವರ ತಾಯಿಯ ಹೆಸರು ಮೀನ. ಇವರಿಗೆ ಸಹೋದರ ಮತ್ತು ಸಹೋದರಿ ಇದ್ದಾರೆ ಸಹೋದರ ದಿನಕರ್ ಹಾಗೂ ಸಹೋದರಿ ದಿವ್ಯ. ಇವರು 2003 ರಲ್ಲಿ ವಿಜಯಲಕ್ಷ್ಮಿ ಅವರನ್ನು ಮದುವೆಯಾಗಿದ್ದಾರೆ. ಮಗ ವಿನೀಶ್ ದರ್ಶನ್. ಮಗನನ್ನು ನೋಡಲು ಮುದ್ದಾಗಿದ್ದಾನೆ. ಮಗ ಹಾಗೂ ಹೆಂಡತಿ ವಿಜಯಲಕ್ಷ್ಮಿ ಅವರೊಂದಿಗಿನ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಕಂಡುಬರುತ್ತದೆ. ಇವರ ಜೀವನ ಸುಖಕರವಾಗಿದ್ದು, ಇನ್ನು ಹೆಚ್ಚಿನ ಒಳ್ಳೆಯ ಸಿನಿಮಾಗಳಲ್ಲಿ ನಟಿಸಲಿ ಎಂದು ಹಾರೈಸೋಣ.