ಬಾಗಲಕೋಟೆ ಸಮೀಪದಲ್ಲಿ ವ್ಯಕ್ತಿಯೊಬ್ಬರು 8 ಲಕ್ಷಕ್ಕೆ ಜೋಡೆತ್ತುಗಳನ್ನು ಮಾರಾಟ ಮಾಡಿ ಮತ್ತೆ ಪುನಃ ಅದೇ ಜೋಡೆತ್ತುಗಳನ್ನು 17 ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಅದೇ ಎತ್ತುಗಳನ್ನೇ ಕೊಂಡು ಕೊಳ್ಳುವುದಾದರೆ 8 ಲಕ್ಷಕ್ಕೆ ಮಾರಾಟ ಮಾಡಿದ್ದಾದರೂ ಯಾಕೆ? ಇದರ ಹಿಂದಿನ ವಿಶೇಷತೆ ಏನು ಇದರ ಕುರಿತಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೋಡೋಣ.
ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ನಂದಗಾಂವ ಗ್ರಾಮದಲ್ಲಿ ಸಂಗಪ್ಪ ಮುಗಳಖೋಡ ಎಂಬ ಹೆಸರಿನ ವ್ಯಕ್ತಿಯೊಬ್ಬ ತನ್ನ ಜೋಡೆತ್ತುಗಳನ್ನು ಎಂಟು ಲಕ್ಷ ರೂಪಾಯಿಯ ಬಹುದೊಡ್ಡ ಮೊತ್ತಕ್ಕೆ ಒಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ. ಇದಕ್ಕೂ ಹಿಂದೆ ಸಂಗಪ್ಪ ಮುಗಳಖೋಡ ಹೆಸರಿನ ವ್ಯಕ್ತಿ ಎಂಟು ಲಕ್ಷ ರೂಪಾಯಿಗೆ ಇದೆ ಜೋಡಿ ಎತ್ತುಗಳನ್ನು ಮಲ್ಲಪ್ಪ ಬೋರೆಡ್ಡಿ ಎಂಬ ವ್ಯಕ್ತಿಯಿಂದ ಖರೀದಿ ಮಾಡಿದ್ದರು. ನಂತರ ಇದು ಹಳೆಯ ಮಾಲೀಕನಿಗೆ ಮತ್ತೆ ೧೭ ಲಕ್ಷದ ದೊಡ್ಡ ಮೊತ್ತಕ್ಕೆ ಮಾರಾಟ ಆಗಿದೆ. ಈ ಜೋಡೆತ್ತುಗಳು ಹಲವಾರು ಕಡೆಗಳಲ್ಲಿ ತೆರೆಬಂಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಸಹ ಗೆದ್ದಿವೆ.
ಈ ರೀತಿಯಾಗಿ ತೆರೆಬಂಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದ ಮೊತ್ತವೇ ಒಟ್ಟು ಒಂಭತ್ತು ಲಕ್ಷ ರೂಪಾಯಿ ಆಗಿತ್ತು. ಅಂತಹ ಜೋಡೆತ್ತುಗಳನ್ನೂ ಈಗ ಮತ್ತೆ ಹಳೆಯ ಮಾಲೀಕ ಹದಿನೇಳು ಲಕ್ಷದ ಬಹುದೊಡ್ಡ ಮೊತ್ತಕ್ಕೆ ಕೊಂಡಿರುವುದು ದೊಡ್ಡ ವಿಷಯ ಆಗಿದೆ. ಇಷ್ಟೊಂದು ದೊಡ್ಡ ಮೊತ್ತಕ್ಕೆ ಮಾರಾಟ ಆಗಿರುವ ಜೋಡೆತ್ತುಗಳನ್ನೂ ನೋಡುವುದರ ಸಲುವಾಗಿ ಪ್ರತೀ ದಿನ ಮಾಲೀಕನ ಮನೆಯ ಎದುರು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾ ಇದ್ದಾರೆ. ಈ ಕಾರಣಕ್ಕಾಗಿ ಎತ್ತುಗಳು ಸಧ್ಯಕ್ಕೆ ಸೆಲೆಬ್ರಿಟಿ ವರ್ಚಸ್ಸನ್ನು ಪಡೆದುಕೊಂಡಿವೆ.