ಮಹಾಭಾರತ ಯಾರಿಗೆ ತಿಳಿದಿಲ್ಲ.ಅದರಲ್ಲಿ ಕರ್ಣ ಮತ್ತು ಅರ್ಜುನರ ಪಾತ್ರ ಬಹಳ ಮುಖ್ಯವಾದದ್ದು. ಕರ್ಣ ತನ್ನ ಸಹೋದರ ಎಂದು ಅರ್ಜುನನಿಗೆ ಮೊದಲು ತಿಳಿದಿರಲಿಲ್ಲ. ಆದರೆ ಕರ್ಣನಿಗೆ ಗೊತ್ತಿತ್ತು. ಅರ್ಜುನ ತನ್ನ ಸಹೋದರ ಎಂದು. ಅರ್ಜುನ ಕರ್ಣನ ಪುತ್ರನನ್ನು ಬೆಳೆಸಿದ ಬಗೆಯನ್ನು ನಾವು ಇಲ್ಲಿ ತಿಳಿಯೋಣ.
ಕರ್ಣ ಮತ್ತು ಅರ್ಜುನರಿಗೆ ಯುದ್ಧ ನಡೆದಾಗ ತಾನು ಕೊರಳು ಸೀಳಿದ ವ್ಯಕ್ತಿ ಕೌಂತೇಯ ಎಂದು ತಿಳಿದ ಮೇಲೆ ಭಾವೋದ್ವೇಗದ ಪ್ರತಾಪಕ್ಕೆ ಬಿದ್ದು ಬಿಟ್ಟ ಪಾರ್ಥ. ಒಮ್ಮೆಲೇ ಸಾವಿರ ನದಿಗಳ ಪ್ರವಾಹ ಎದುರಿಸಿದಂತೆ ಆಗಿತ್ತು ಅರ್ಜುನನ ಹೃದಯಕ್ಕೆ. ಆ ಕ್ಷಣ ಎಲ್ಲವೂ ನೆನಪಾಯಿತು ತಾನು ಅಂದಿದ್ದು, ಅವಮಾನಿಸಿದ್ದು, ಏನೆಲ್ಲಾ ಮಾಡಿದ್ದೇನೆ ಅನ್ನುವುದೆಲ್ಲಾ ನೆನಪಾಗಿ ಹೋಯಿತು. ತಮ್ಮ ವೀರ ಪುತ್ರ ಅಭಿಮನ್ಯುವಿನ ಪ್ರತೀಕಾರಕ್ಕಾಗಿ ಕರ್ಣನ ಮಕ್ಕಳನ್ನು ಮುಗಿಸಿದ್ದರು ಪಾಂಡವರು. ಅರ್ಜುನನಂತೂ ಕರ್ಣನ ಕಣ್ಣ ಮುಂದೆಯೇ 3 ಮಕ್ಕಳನ್ನು ಸೀಳಿಬಿಟ್ಟಿದ್ದ. ಈಗ ಎಲ್ಲವೂ ಕಣ್ಣ ಮುಂದೆ ಬಂದು ಶೂನ್ಯ ಆವರಿಸಿತ್ತು. “ಅಯ್ಯೋ ವಿಧಿಯೇ ಇದೆಂತಹ ಘಾತ ಮಾಡಿಸಿಬಿಟ್ಟ”ಎಂದು ಮನಸಿನಲ್ಲಿ ವೇದನೆ ಹೇಳಲಾರದಷ್ಟು ಆಗುತ್ತಿತ್ತು.
ಇಡೀ ಕದನದಲ್ಲಿ ಕರ್ಣನನ್ನು ಮುಗಿಸಲಾಯಿತು.ಕರ್ಣನ ಮಕ್ಕಳನ್ನು ಮುಗಿಸಲಾಯಿತು.ಕರ್ಣನ ಹೆಂಡತಿಯರು ಅಗ್ನಿಸ್ಪರ್ಶ ಮಾಡಿದರು. ಆದರೆ ಆ ಪರಮದುಃಖದ ಕ್ಷಣ ಇವೆಲ್ಲವುಗಳ ಸಮಾಧಾನದಂತೆ ಕಂಡ ಆ ಬಾಲಕ.ಅವನೇ ಋಷಿಕೇತು. ಕುರುಕ್ಷೇತ್ರದಲ್ಲಿ ಬದುಕಿದ ಕರ್ಣನ ಏಕ್ಯೆಕ ಕುಡಿ.ಯುದ್ಧದ ವೇಳೆ ಅಜ್ಜಿಯ ಜೊತೆ ಇದ್ದ ಕಾರಣ ವಿದ್ವಂಸದಿಂದ ಬಚಾವಾಗಿದ್ದ ಈ12 ವರ್ಷದ ಬಾಲಕ.
ಮಹಾವೀರ ತಂದೆ ಮತ್ತು ಸೂದರರನ್ನು ಕಳೆದುಕೊಂಡಿದ್ದ ಋಷಿಕೇತುವಿಗೆ ಪಾಂಡವರಂದರೆ ಯಾರು ಎಂದೂ ಗೊತ್ತಿರಲಿಲ್ಲ.ಹಸ್ತಿನಾಪುರದ ಮಹೋನ್ನತಿಯು ಗೊತ್ತಿರಲಿಲ್ಲ.ಆ ಕ್ಷಣಕ್ಕೆ ಅವನ ಮನದಲ್ಲಿರುವುದು ಒಂದೇ ತನ್ನ ತಂದೆಯ ಕೊಂದ ವ್ಯಕ್ತಿಯ ಹೆಣ ನೋಡಬೇಕೆಂದು. ದಿನವೂ ತನ್ನ ತಂದೆ ಬ್ರಾಹ್ಮಣರಿಗೆ ದಾನ ನೀಡುತ್ತಿದ್ದ ಜಾಗದಲ್ಲಿ ನಿಂತು ಋಷಿಕೇತು ತನ್ನ ನೋವುಗಳಿಂದ ತುಂಬಿ ನಿಂತಿದ್ದಾಗ ಒಂದು ಆಕೃತಿ ಬಂತು. ತನ್ನ ತಂದೆಯನ್ನೇ ನೋಡಿದಂತಾಗಿ “ಅಪ್ಪ ನಿಮ್ಮನ್ನು ಕೊಂದವರನ್ನು ನಾನು ಸುಮ್ಮನೆ ಬಿಡುವುದಿಲ್ಲ” ಎಂದ. ಆದರೆ ಆ ಆಕೃತಿ ಯಾವುದೆಂದರೆ ಅದೇ ಅರ್ಜುನ.
ನಾನು ನಿನ್ನಂತೆಯೇ ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಆದರೆ ನನ್ನ ಸ್ವಂತ ಅಣ್ಣನನ್ನೇ ಕೊಲ್ಲುವ ಪರಿಸ್ಥಿತಿ ಎದುರಾಗಿ ಅಣ್ಣನನ್ನೇ ಕಳೆದುಕೊಂಡೆ ಎಂದ ಅರ್ಜುನ. ಬಾಲಕ ಹೀಗೇಕೆ ಮಾಡಿದೆ ಎಂದು ಪ್ರಶ್ನಿಸಿದ.ಆಗ ಅರ್ಜುನ “ಅವನು ಸಾಯುವವರೆಗೂ ಅವನು ಅಣ್ಣ ಎಂದೇ ತಿಳಿದಿರಲಿಲ್ಲ.ತನ್ನ ಪರಾಮಶತ್ರು ಎಂದೇ ಭಾವಿಸಿದ್ದೆ” ಎಂದ. ಆಗ ಬಾಲಕ “ನೀನೇನು ತಿಳಿದು ಮಾಡಲಿಲ್ಲವಲ್ಲ ನಿನ್ನ ಅಣ್ಣ ನಿನ್ನನ್ನು ಕ್ಷಮಿಸುತ್ತಾನೆ” ಎಂದು ಮನೆಗೆ ಹೊರಟ ಬಾಲಕ.
ಪುನಃ ಆಗಮಿಸಿ ನೀನು ಯಾರು ಎಂದು ಕೇಳಿದ.ಆಗ ಅರ್ಜುನ ಕೆಳಗೆ ಕುಳಿತು ಬಿಕ್ಕಳಿಸಿ ಬಿಕ್ಕಳಿಸಿ ಅಳತೊಡಗಿದ.”ಮಹಾರತಿ ಕರ್ಣನೇ ನನ್ನಣ್ಣ.ನನ್ನನ್ನು ಕ್ಷಮಿಸು ಪುತ್ರ” ಎಂದು ಗೋರ್ಗರೆದ. ಋಷಿಕೇತು ಉತ್ತರಿಸದೇ ಮನೆಗೆ ಬಂದ. ಅಲ್ಲಿ ತನ್ನಜ್ಜಿ ರಾಧೆಯ ಜೊತೆ ನಾಲ್ಕು ಪುರುಷರು ಮಾತನಾಡುತ್ತಿರುವುದು ಕಂಡಿತು ಹಾಗೂ ವಿಷಯ ತಿಳಿಯಿತು.ಋಷಿಕೇತುವನ್ನು ಬರಮಾಡಿಕೊಂಡರು ಪಾಂಡವರು.ಒಂದು ಲೆಕ್ಕಕ್ಕೆ ಅವನೇ ಹಿರಿಯ ಸಹೋದರ ಆಗುತ್ತಿದ್ದ ಎಲ್ಲಾ ಸಹೋದರರಿಗೆ ಈತ. ಆದರೆ ಮದುವೆ ಮುಂಚೆ ಕರ್ಣ ಜನಿಸಿದ್ದರಿಂದ ಅವನು ಸೂತಪುತ್ರನಾದ. ರುಷಾಲಿ ಕೂಡ ಸೂತ ಪುತ್ರಿಯಾಗಿದ್ದಳು. ಆದ್ದರಿಂದ ಅರ್ಜುನನ ಮೊಮ್ಮಗ ಪರೀಕ್ಷಿತ ಸಿಂಹಾಸನ ಅಲಂಕರಿಸಿದ.
ತಾನೇ ನಿಂತು ಎಲ್ಲಾ ಶಿಕ್ಷಣವನ್ನು ಕೊಟ್ಟ. ಅರ್ಜುನನು ತನ್ನ ಎಲ್ಲಾ ವಿದ್ಯೆಗಳನ್ನು ಋಷಿಕೇತುವಿಗೆ ಕಲಿಸಿದ. ಪ್ರತಿ ಬಾರಿ ತಲೆ ಸವರಿದರೂ ಕರ್ಣ ಮತ್ತು ಅಭಿಮನ್ಯು ನೆನಪಾಗುತ್ತಿದ್ದರು. ಇದೇ ಮಮತೆಯೊಂದಿಗೆ ಸರ್ವ ವಿದ್ಯೆಯನ್ನು ಕಲಿತ.ಚಿಕ್ಕಪ್ಪನ ಎಲ್ಲಾ ಆಸ್ತ್ರಗಳು ಇವನಿಗೆ ಲಭಿಸಿದವು. ಇಡೀ ಭೂಮಂಡಲದಲ್ಲಿ ಕಟ್ಟ ಕಡೆಯದಾಗಿ ಬ್ರಹ್ಮಾಸ್ತ್ರ ಹೊಂದಿದ್ದ ಏಕ್ಯೆಕ ವ್ಯಕ್ತಿ ಎಂದರೆ ಅವನೇ ಋಷಿಕೇತು.