ಪ್ರತಿಯೊಬ್ಬ ಮನುಷ್ಯನಿಗೂ ಊಟ ಹಾಗೂ ಓಟ ತುಂಬಾ ಮುಖ್ಯ ಆಗಿದೆ. ಮನುಷ್ಯನಿಗೆ ಅವನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಒಂದಷ್ಟು ವ್ಯಾಯಾಮ ಮತ್ತು ಯೋಗಾಭ್ಯಾಸ ತುಂಬಾ ಪ್ರಯೋಜನಕಾರಿಯಾಗಿದೆ.ಹಾಗೆಯೇ ಓಟ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಚಿಕ್ಕವರಿಂದ ದೊಡ್ಡವರವರೆಗೆ ಸುಲಭದ ವ್ಯಾಯಾಮ ಎಂದರೆ ಅದು ಓಟ.ಇದು ಎಲ್ಲರಿಗೆ ತಿಳಿದಿದ್ದರೂ ಎಲ್ಲರೂ ಮಾಡಲು ಇಷ್ಟಪಡುವುದಿಲ್ಲ.ಕಾರಣ ಸಮಯದ ಅಭಾವ. ದಿನಾಲೂ ಓಡುವುದರಿಂದ 12 ಲಾಭಗಳಿವೆ. ಅವುಗಳನ್ನು ನಾವು ಇಲ್ಲಿ ತಿಳಿಯೋಣ.

ದಿನಾಲೂ ಓಡುವುದರಿಂದ ಆಗುವ 12 ಪ್ರಯೋಜನಗಳು
1.ಇದರಿಂದ ಹೃದಯಕ್ಕೆ ಶಕ್ತಿ ಬರುತ್ತದೆ.ದಿನಕ್ಕೆ ಒಂದು ಗಂಟೆ ಓಡಿದರೂ ಸಾಕು ಹೃದಯದ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ಇದರಿಂದ ಬಿ.ಪಿ., ಕೊಲೆಸ್ಟ್ರಾಲ್ ಹಾಗೂ ಯಾವುದೇ ಹೃದಯ ಸಂಬಂಧಿ ಕಾಯಿಲೆಗಳು ಬರುವುದು ಕಡಿಮೆ.

2.ಬೇರೆ ಬೇರೆ ವ್ಯಾಯಾಮಕ್ಕಿಂತ ಒಳ್ಳೆಯ ಫಲಿತಾಂಶ ದೊರೆಯುವುದು ಓಟದಿಂದ ಮಾತ್ರ. ಏಕೆಂದರೆ ಇದಕ್ಕೆ ಹೆಚ್ಚಿನ ಕ್ಯಾಲೋರಿ ಖಾಲಿಯಾಗುತ್ತದೆ. ಒಂದು ಗಂಟೆ ಓದಿದರೆ 800 ಕ್ಯಾಲೋರಿ ಖರ್ಚಾದರೆ, ಅದೇ ವಾಕ್ ಮಾಡಿದರೆ 300 ಕ್ಯಾಲೋರಿ ವ್ಯಯ ಆಗುತ್ತದೆ.

3.ದಪ್ಪ ಇರುವವರು ಬೇಗ ಸಣ್ಣ ಆಗಬೇಕು ಎಂದರೆ ದಿನವೂ ಒಂದು ಗಂಟೆ ಓಡಿದರೆ ಸಾಕು. ಓಡುವುದರಿಂದ ದೇಹದ ಕೊಬ್ಬು ಬೇಗ ಕರಗುತ್ತದೆ. ಅದೇ ಮೈ ಕಟ್ಟು ಓದುವುದನ್ನು ನಿಲ್ಲಿಸಿದ ಮೇಲೂ ತುಂಬಾ ದಿನ ಇರುತ್ತದೆ. 4.ಇದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ದಿನಾಲೂ ಓಡುವುದರಿಂದ ದೇಹದಲ್ಲಿ ರೋಗಾಣುಗಳ ಜೊತೆ ಸ್ಪರ್ಧಿಸುವ ರೋಗ ನಿರೋಧಕಗಳು ಹೆಚ್ಚುತ್ತದೆ.

5.ಮೂಳೆ, ಮಾಂಸ ಖಂಡಗಳು ಬಲವಾಗುತ್ತವೆ. ದಿನವೂ ವ್ಯಾಯಾಮ ಮಾಡುವುದರಿಂದ ಮಾಂಸ ಖಂಡಗಳು ಹೆಚ್ಚಿನ ಶಕ್ತಿಯನ್ನು ಪಡೆಯುತ್ತವೆ. 6.ಬೆಟ್ಟ ಗುಡ್ಡ ಎಲ್ಲಿ ಬೇಕಾದರೂ ನಿಮ್ಮ ಮನೆಯ ಹತ್ತಿರ ಓಡಿ ನೋಡಿ. ಇದರಿಂದ ಬೆನ್ನು ಮೂಳೆಗಳು, ಸೊಂಟದ ಭಾಗ ಗಟ್ಟಿಯಾಗಿ ಆಗುತ್ತದೆ. ಸೊಂಟ ಗಟ್ಟಿಯಾಗಿದ್ದರೆ ಎಲ್ಲಿ ಹೋಗಬೇಕಾದರೂ ನಮ್ಮ ದೇಹ ನಮಗೆ ಭಾರ ಅನಿಸುವುದಿಲ್ಲ.

7.ದಿನವೂ ಓಡುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ. ಆತಂಕ ಅಥವಾ ಯಾವುದೇ ಖಿನ್ನತೆ ಇರುವುದಿಲ್ಲ. ಮನುಷ್ಯನಿಗೆ ಸರಿಯಾದ ನಿದ್ರೆ ಕೂಡ ಆರೋಗ್ಯದ ಒಂದು ಭಾಗವಾಗಿದೆ.
8.ಬೆಳಿಗ್ಗೆಯಿಂದ ಸಂಜೆಯ ತನಕ ಕೆಲಸ ಮಾಡಿದರೂ ಸುಸ್ತಾಗಬಾರದು ಎಂದರೆ ಓಟ ಆರಂಭಿಸಿದರೆ ಒಳ್ಳೆಯದು.ಏಕೆಂದರೆ ಮಾಂಸ ಖಂಡಗಳು ಗಟ್ಟಿಯಾಗುವುದರಿಂದ ಸುಸ್ತು, ಆಯಾಸ ಕಡಿಮೆ ಆಗುತ್ತದೆ.

9.ಮೈ ಚರ್ಮಕ್ಕೆ ಬಹಳ ಕಾಂತಿ ಬೇಕು ಎಂದರೆ ದಿನವೂ ಓಟ ಆರಂಭಿಸಬೇಕು. ಓದುವುದರಿಂದ ಚರ್ಮ ಬೆವರುತ್ತದೆ.ಜಿಡ್ಡಿನ ಅಂಶ ಉತ್ಪತ್ತಿಯಾಗುತ್ತದೆ. ಅದಕ್ಕೆ ಚರ್ಮ ಹೊಳೆಯಲು ಆರಂಭಿಸುತ್ತದೆ.

10.ದಿನವೂ ಓಡುವುದರಿಂದ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಓಡುವಾಗ ಮೈ ಮತ್ತು ಮನಸ್ಸು ಒಂದೇ ಕಡೆ ಇರುವುದರಿಂದ ಮರೆವು ದೂರ ಆಗುತ್ತದೆ.ಮುದುಕರಾದರೂ ಸಹ ಮರೆವಿನ ಖಾಯಿಲೆ ಬರುವುದಿಲ್ಲ.

11.ಕ್ಯಾನ್ಸರ್ ನಂತಹ ದೊಡ್ಡ ದೊಡ್ಡ ಖಾಯಿಲೆಗಳಿಂದ ಕೂಡ ದಿನದ ಓಟ ರಕ್ಷಣೆ ನೀಡುತ್ತದೆ. ಓಡುವ ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ಸುಮಾರು 30 ಶೇಕಡದಷ್ಟು ಕಡಿಮೆ ಇರುತ್ತದೆ ದಿನವೂ ಓಡುವುದರಿಂದ ಶ್ವಾಸಕೋಶಕ್ಕೂ ಕೂಡ ಬಹಳ ಓಳ್ಳೆಯದು. ಓಡುವುದರಿಂದ ಕ್ಯೆ ಮತ್ತು ಕಾಲುಗಳ ಹೆಚ್ಚು ರಕ್ತ ಸಂಚಾರ ಉಂಟಾಗುತ್ತದೆ. ಹೃದಯ ಹೆಚ್ಚು ಬಡಿಯುತ್ತದೆ.ಇದಕ್ಕೆ ಶ್ವಾಸಕೋಶ ಶುದ್ಧವಾಗುತ್ತದೆ. ದಿನವೂ ಓಡುವುದರಿಂದ ಇಷ್ಟೊಂದು ಪ್ರಯೋಜನಗಳು ಇವೆ. ಆದ್ದರಿಂದ ಎಲ್ಲರೂ ದಿನಾಲೂ ಓಡಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ. ಇವೆಲ್ಲವುಗಳ ಪ್ರಯೋಜನ ಪಡೆಯೋಣ.

Leave a Reply

Your email address will not be published. Required fields are marked *