ಒಂದು ಸಿನಿಮಾದಲ್ಲಿ ಹಾಸ್ಯ ಪಾತ್ರ ಮುಖ್ಯವಾಗಿದೆ. ಹಾಸ್ಯ ನಟರು ಪಡೆಯುವ ಸಂಭಾವನೆ ಎಷ್ಟು, ಯಾವ ನಟ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಒಂದು ಸಿನಿಮಾ ಹಿಟ್ ಆಗಬೇಕು ಎಂದರೆ ಒಳ್ಳೆ ಹಾಡು, ಫೈಟ್ ಇದ್ದರೆ ಸಾಲದು ಹಾಸ್ಯ, ಕಾಮೆಡಿ ಪಂಚ್ ಇರಬೇಕು. ಹಾಸ್ಯ ನಟರು ಯಾವ ನಟರಿಗೂ ಕಡಿಮೆ ಇಲ್ಲದಂತೆ ಸಂಭಾವನೆ ಪಡೆಯುತ್ತಾರೆ. ಹಾಸ್ಯ ನಟರಿಗೆ ಸಂಭಾವನೆಯನ್ನು ದಿನದ ಕಾಲ್ ಶೀಟ್ ನಂತೆ ಕೊಡಲಾಗುತ್ತದೆ. ಕನ್ನಡ ಹಾಸ್ಯ ನಟರಾದ ಬುಲೆಟ್ ಪ್ರಕಾಶ್ ಅವರು 50,000ರೂ ಸಂಭಾವನೆ ಪಡೆಯುತ್ತಾರೆ. ಮಜಾ ಟಾಕೀಸ್ ನ ಪ್ರಮುಖ ಪಾತ್ರ ಕುರಿ ಪ್ರತಾಪ್ ಅವರದ್ದೆ. ಅವರು ಒಂದು ದಿನಕ್ಕೆ 80,000ರೂ ಸಂಭಾವನೆ ಪಡೆಯುತ್ತಾರೆ.
ಹಾಸ್ಯ ನಟನಾದ ಚಿಕ್ಕಣ್ಣ ಇರುವ ಸಿನಿಮಾ ಹಿಟ್ ಆದಂತೆ ಎಂಬ ಮಾತಿದೆ ಅವರು ದಿನಕ್ಕೆ 1 ಲಕ್ಷ ಸಂಭಾವನೆ ಪಡೆಯುತ್ತಾರೆ. ರಂಗಾಯಣ ರಘು ಅವರು ಹಾಸ್ಯ ಪಾತ್ರ ಮಾಡುವ ಜೊತೆಗೆ ಪೋಷಕ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಾರೆ, ಇವರು ದಿನಕ್ಕೆ 5-6 ಲಕ್ಷ ಸಂಭಾವನೆ ಪಡೆಯುತ್ತಾರೆ. ನಗಿಸುವುದರಲ್ಲಿ ಸಕಲಕಲಾವಲ್ಲಭರಾದ ಸಾಧುಕೋಕಿಲ ಸಂಗೀತ ನಿರ್ದೇಶನ ಕೂಡ ಮಾಡುತ್ತಾರೆ. ಇವರು ಒಂದು ದಿನಕ್ಕೆ 5-6 ಲಕ್ಷ ಸಂಭಾವನೆ ಪಡೆಯುತ್ತಾರೆ. ಇನ್ನು ಅನೇಕ ಹಾಸ್ಯ ನಟರು ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳಲಿ ಎಂದು ಹಾರೈಸೋಣ.