ಆಚಾರ್ಯ ಚಾಣಕ್ಯ ಎಂದರೆ ತಿಳಿಯದವರೆ ಇಲ್ಲ. ಸಣ್ಣ ಮಕ್ಕಳು ಕೂಡ ಆಚಾರ್ಯ ಚಾಣಕ್ಯ ಯಾರು ಎಂದರೆ ನೀತಿ ಹೇಳಿಕೊಟ್ಟವರು, ಮೌರ್ಯರ ಸ್ಥಾಪಕ ಎನ್ನುತ್ತಾರೆ. ಹೀಗೆ ಹೆಸರು ಗಳಿಸಿರುವ ಆಚಾರ್ಯ ಚಾಣಕ್ಯರ ಬಗೆಗೆ ಒಂದಿಷ್ಟು ಮಾಹಿತಿಯ ಜೊತೆಗೆ, ಅವರ ಕೆಲವು ನುಡಿಮುತ್ತುಗಳನ್ನು ಈ ಕೆಳಗೆ ನೀಡಲಾಗಿದೆ. ಹಾಗಾದರೆ ಆಚಾರ್ಯ ಚಾಣಕ್ಯ ಹೇಳಿರುವ ನುಡಿಗಳು, ನೀತಿಗಳು ಏನು ಎಂಬುದನ್ನು ಈ ಮಾಹಿತಿಯ ಮೂಲಕ ತಿಳಿಯೋಣ.

ಆಚಾರ್ಯ ಚಾಣಕ್ಯ ಎರಡು ಸಾವಿರದ ಮುನ್ನೂರು ವರ್ಷಗಳಷ್ಟು ಹಿಂದೆ ಇದ್ದ ಎನ್ನಲಾಗಿದೆ. ಕೌಟಿಲ್ಯ, ವಿಷ್ಣುಗುಪ್ತ ಇವು ಚಾಣಕ್ಯನ ಇತರ ಹೆಸರುಗಳು. ಮೌರ್ಯ ಸಾಮ್ರಾಜ್ಯದ ಸ್ಥಾಪಕ ಈ ಚಾಣಕ್ಯ ಹಾಗೂ ಅತ್ಯದ್ಭುತ ಸಲಹೆಗಾರ. ಚಾಣಕ್ಯನು ಅರ್ಥಶಾಸ್ತ್ರ ಹಾಗೂ ಚಾಣಕ್ಯ ನೀತಿ ಎಂಬ ಪುಸ್ತಕಗಳನ್ನು ರಚಿಸಿದ್ದಾನೆ. ಇವುಗಳಲ್ಲಿ ಚಾಣಕ್ಯನ ನೀತಿ ಗ್ರಂಥವು ಬಹಳ ವಿಭಿನ್ನವಾಗಿ ಇದ್ದು ಹೆಸರುವಾಸಿಯಾಗಿದೆ. ತನ್ನ ಯೋಚನಾ ಲಹರಿ, ದೃಷ್ಟಿಕೋನದಿಂದ ರಚಿಸಿದ ಈ ಪುಸ್ತಕ ಕಾಲ ಕಾಲಗಳಿಂದಲೂ ಹೆಸರು ಪಡೆದಿದೆ. ನಾಲ್ಕು ಜನರಿಗೆ ಒಳ್ಳೆಯದು ಮಾಡುವ ಯಾವುದೆ ಕೆಲಸವಾದರೂ ಸರಿ ಚಾಣಕ್ಯನ ರಾಜತಂತ್ರದ ಮೂಲಕ ಆ ಕೆಲಸ ಸಾಧಿಸಬಹುದು. ಈ ರೀತಿಯ ರಾಜ ತಂತ್ರಗಳು ಜಗತ್ತಿನ ಮೂಲೆ ಮೂಲೆಗಳಲ್ಲೂ ಗಮನ ಸೆಳೆಯುವಂತೆ ಮಾಡಿವೆ. ಇವುಗಳಲ್ಲಿ ಒಂದಾದ ಶಬ್ದವೇಧಿ ನುಡಿ ಮುತ್ತಿನ ಬಗೆಗೆ ತಿಳಿಯುವ. ಜೊತೆಗೆ ಇರುವ ನೀಚ ಹಾಗೂ ಹಾವುಗಳಲ್ಲಿ ನಾವು ಆರಿಸಿಕೊಳ್ಳಬೇಕಾಗಿರುವುದು ಹಾವು. ಯಾಕೆಂದರೆ ತನಗೆ ಅಪಾಯ ಬಂದಿದೆ ಎಂದಾಗ ಮಾತ್ರ ಹಾವೂ ದಾಳಿ ಮಾಡುತ್ತದೆ. ಆದರೆ ನೀಚ ಹೆಜ್ಜೆ ಹೆಜ್ಜೆಗೂ ಮೋಸ ಮಾಡಿ ಕಚ್ಚುತ್ತಲೆ ಇರುತ್ತಾನೆ.

ಭಯಂಕರ ಆಪತ್ತು‌ ಎದುರಾದಾಗ, ವಿದೇಶಿಯರು ಆಕ್ರಮಣ ಮಾಡಿದಾಗ, ಅತಿಯಾದ ಬರಗಾಲ ಇದ್ದಾಗ ಹಾಗೂ ಮುಖ್ಯವಾಗಿ ದುಷ್ಟನ ಸಂಗದಿಂದ ದೂರವಾಗಿ ಓಡುವವನು ಮಾತ್ರ ಸುರಕ್ಷಿತವಾಗಿ ಇರುತ್ತಾನೆ. ಉಪದೇಶ ಕೊಡುವ ಶಿಷ್ಯ ಮೂರ್ಖನಾಗಿದ್ದರೆ, ಹೆಂಡತಿಯ ದುಷ್ಟತನ ತಿಳಿದು ಸಲಹುವುದರಿಂದ, ಅತಿಯಾಗಿ ಸಲಿಗೆ ಹೊಂದಿದ ವ್ಯಕ್ತಿ ದುಃಖ ಪೀಡಿತನಾಗಿದ್ದರೆ, ಒಳ್ಳೆಯ ಜ್ಞಾನ ಹೊಂದಿದ ಪಂಡಿತನು ದುಃಖವನ್ನು ಹೊಂದುತ್ತಾನೆ. ಮೋಸ ಮಾಡವ ಸ್ನೇಹಿತ, ಕೆಟ್ಟತನ ಹೊಂದಿರು ಹೆಂಡತಿ, ವ್ಯವಹರಿಸುವ ವ್ಯಕ್ತಿ ಉದ್ದಟತನದಿಂದ ಇದ್ದರೆ ಹಾಗೂ ನಾವೂ ವಾಸಿಸುವುದು ಹಾವಿರುವ ಮನೆಯಾದರೆ ಇವೆಲ್ಲವೂ ಮರಣಕ್ಕೆ ಸಮನಾದುದು. ಬೆಳ್ಳಿ ಬಂಗಾರದೊಂದಿಗೆ ಬೆರೆತಾಗ ಬಂಗಾರದಂತೆಯೆ ಕಾಣುವುದು. ಕೇವಲ ಅದೃಷ್ಟವನ್ನು ಮಾತ್ರ ನಂಬುವವನು ಸರ್ವನಾಶವಾಗುವುದು ಖಚಿತ ಆದರೆ ಕಷ್ಟಗಳನ್ನು, ಸಂದರ್ಭಗಳನ್ನು ಎದುರಿಸಲು ತಯಾರಾದವನು, ಅಂತಹ ಸಮಯದಲ್ಲಿ ತನ್ನ ಬುದ್ದಿವಂತಿಕೆ ಉಪಯೋಗಿಸುವವನು ಇವರಿಬ್ಬರೂ ಜೀವನದ ಆನಂದ ಪಡೆಯುತ್ತಾರೆ.

ಬಲಿಷ್ಠ ಆಗಿರುವವನಿಗೆ ಭಾರ ಆಗುವುದು ಯಾವುದು? ಪ್ರಯತ್ನಿಸಿದಾಗ ಕೈಗೆಟುಕದೆ ಇರುವುದು ಯಾವುದು? ವಿದ್ಯಾವಂತನಾದವನಿಗೆ ಪರದೇಶ ಎನ್ನುವುದು ಯಾವುದು? ಮಾತಿನಲ್ಲಿ ಮೃದುತ್ವ ಇರುವವನಿಗೆ ಶತ್ರುಗಳು ಯಾರು?. ಕಷ್ಟಗಳು ಬಂದ ಸಮಯದಲ್ಲಿ, ಯೋಚಿಸುವ ದೂರದೃಷ್ಟಿ ಸಮಯದಲ್ಲಿ, ಬರಗಾಲ ಬಂದ ಸಮಯದಲ್ಲಿ, ಯುದ್ಧದ ಸನ್ನಿವೇಶ ಉಂಟಾದ ಸಮಯದಲ್ಲಿ, ರಾಜನ ಆಸ್ಥಾನದಲ್ಲಿ, ಸ್ಮಶಾನದಲ್ಲಿಯೂ ನಮ್ಮನ್ನು ಬಿಟ್ಟು ಕೊಡದೆ ಇರುವವನು ನಿಜವಾದ ಗೆಳೆಯ. ಮಾನವನ ಪ್ರಯತ್ನದಿಂದಲೆ ಒಂದು ಕಾರ್ಯ ಪೂಟಲರ್ಣಗೊಳ್ಳಲು ಸಾಧ್ಯ. ಮಾನವನ ಪ್ರಯತ್ನವನ್ನು ಅದೃಷ್ಟ ಹಿಂಬಾಲಿಸುತ್ತಿರುತ್ತದೆ. ಕಲಿತ ಶಾಸ್ತ್ರಾಧ್ಯಯನಗಳು ವಿಷಕ್ಕೆ ಸಮಾನ, ಊಟವು ಅಜೀರ್ಣ ಹೊದಿದವನಿಗೆ ವಿಷಕ್ಕೆ ಸಮಾನ, ಸಮಾಜದ ಸಂಭ್ರಮಾಚರಣೆಗಳು ಬಡವನಿಗೆ ವಿಷಕ್ಕೆ ಸಮಾನ, ವಯಸ್ಸಾದವನಿಗೆ ಯುವತಿ ಹೆಂಡತಿಯಾದರೆ ವಿಷಕ್ಕೆ ಸಮಾನ. ಯಾವುದೇ ಕಾರ್ಯ ಮಾಡುವಾಗಲೂ ಅದನ್ನು ಬಹಿರಂಗ ಪಡಿಸದೆ ವಿವೇಚನೆಯಿಂದ ಆಲೋಚನೆ ಮಾಡಿ, ಮಾಡಬೇಕಾದ ಕೆಲಸ ಕಾರ್ಯಗತಗೊಳಿಸುವ ಗಟ್ಟಿಯಾದ ನಿರ್ಧಾರವನ್ನು ಹೊಂದಿ, ಕೆಲಸ ಗುಪ್ತವಾಗಿ ಇಡು.

ಎಲ್ಲ ರೀತಿಯ ಸಂಪತ್ತುಗಳನ್ನು ಎಷ್ಟು ಕಡೆಯಿಂದ ಸಿಗುವುದೊ ಅಷ್ಟು ಕಡೆಯಿಂದ ಸಂಗ್ರಹಿಸಬೇಕು. ಮುಂದಾಲೋಚನೆ ಇಲ್ಲದೆ ಕೆಲಸ ಮಾಡಲು ಅಡಿ ಇಟ್ಟರೆ ಅದೃಷ್ಟವೂ ಭಾಗ್ಯ ಹೊಂದಿದವನನ್ನು ತ್ಯಜಿಸಿ ಹೊರಟು ಹೋಗುತ್ತದೆ. ಒಂದು ಕಾರ್ಯ ಮುಗಿಸಿದ ನಂತರ ಮಾಡಲೇ ಬೇಕಾದ ಇನ್ನೊಂದು ಕಾರ್ಯ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳಬಾರದು. ನೀರ ಮೇಲೆ ಬಿದ್ದ ಎಣ್ಣೆ, ರಹಸ್ಯ ಹಂಚಿಕೊಂಡಿರುವುದು, ದಾನ ತೆಗಡದುಕೊಂಡವನು ಯೋಗ್ಯನಾದರೆ, ಬುದ್ದಿವಂತನಿಗೆ ಧಾರೆ ಎರೆದ ಶಾಸ್ತ್ರ ವಿದ್ಯೆ ಎಲ್ಲವೂ ಹರಡುತ್ತಲೆ ಹೋಗುತ್ತಿರುತ್ತದೆ. ಯಾವುದಾದರೂ ಉಪಕಾರವನ್ನು ಒಬ್ಬ ವ್ಯಕ್ತಿಯ ಬಳಿಯಲ್ಲಿ ಬಯಸುತ್ತಿದ್ದರೆ, ಆ ವ್ಯಕ್ತಿಯು ಸದಾ ಸಂತೋಷದಿಂದ ಇರುವಂತೆ ನಾವು ನೋಡಿಕೊಳ್ಳಬೇಕು. ಬೇಟೆಯ ಬಯಸಿದ ಬೇಡೆಗಾರ ಇಂಪಾಗಿ ಹಾಡಿದಂತೆ. ನೀಚನಿಗೆ ಎಂದು ಒಳ್ಳೆಯವನು ತನ್ನ ರಹಸ್ಯ ಹೇಳಬಾರದು. ತನ್ನ ನಿಯಂತ್ರಿಸಲಾಗದ ಮನುಷ್ಯ ತನ್ನ ಕೋಪದಿಂದಲೆ ನಾಶವಾಗುತ್ತಾನೆ.

ಆಚಾರ್ಯ ಚಾಣಕ್ಯರ ಮಾತುಗಳು ಅಕ್ಷರಶಃ ಅರ್ಥ ಪೂರ್ಣ. ಇವುಗಳನ್ನು ಸರಿಯಾಗಿ ಅರಿತು, ಜೀವನದಲ್ಲಿ ಅಳವಡಿಸಿಕೊಂಡು ಅನೇಕ ಸಂಕಷ್ಟ ಹಾಗೂ ಸಮಸ್ಯೆಗಳಿಂದ ಮುಕ್ತರಾಗೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!