ಸೂರ್ಯೋದಯದ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಸಮುದ್ರ ತೀರದಲ್ಲಿ ನಿಂತಾಗ ನಮ್ಮ ದೇಹಕ್ಕೆ ಬೇಕಾದ ವಿಟಮಿನ್ ಡಿ ಅಂಶ ನಮಗೆ ಸಿಗುತ್ತದೆ. ಹಾಗೆಯೆ ಅಸ್ತಮಾ ಹಾಗೂ ಉಸಿರಾಟದ ತೊಂದರೆ ಇರುವವರು ಕೂಡ ಸಮುದ್ರದ ತೀರದಲ್ಲಿ ಬೀಸುವ ತಂಪಾದ ಗಾಳಿಯಲ್ಲಿ ಓಡಾಡಿಕೊಂಡು ಬಂದರೆ ಒಳ್ಳೆಯದು ಎನ್ನುತ್ತಾರೆ. ಇದೇ ಕಾರಣದಿಂದಾಗಿ ವಿದೇಶದವರು ಬೀಚ್ ಗಳಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು. ವಿದೇಶಿಗರ ಹಲವಾರು ದೇಹದ ಸಮಸ್ಯೆಗೆ ಸಮುದ್ರ ತೀರದ ಬಿಸಿಲು ಹಾಗೂ ಗಾಳಿ ಔಷಧಿಯಂತೆ. ಆದರೆ ಒಬ್ಬರು ನಟಿ ಸಮುದ್ರದ ದಂಡೆಯಲ್ಲಿ ವ್ಯಾಯಾಮ ಮಾಡುತ್ತಿದ್ದಾರೆ ಯಾರು ಆ ನಟಿ? ಏನು ಮಾಡುತ್ತಿದ್ದಾರೆ ಎಂಬ ವಿಷಯವನ್ನು ಈ ಮಾಹಿತಿಯ ಮೂಲಕ ತಿಳಿಯೋಣ ನಾವು.
ಆ ನಟಿ ಬೇರೆ ಯಾರೂ ಅಲ್ಲ ಅವರೆ ರಶ್ಮಿಕಾ ಮಂಡಣ್ಣ. ಸೂರ್ಯಾಸ್ತದ ಸಮಯದಲ್ಲಿ ವ್ಯಾಯಾಮ ಮಾಡುತ್ತಿದ್ದಾರೆ. ತಮ್ಮ ಜಿಮ್ ಎಕ್ಸ್ ಫರ್ಟ್ ಹಾಗೂ ತಮ್ಮ ಮುದ್ದಿನ ನಾಯಿಯನ್ನು ಅವರ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ. ಡೆಂಬಲ್ ಲಿಪ್ಟಿಂಗ್, ರನ್ನಿಂಗ್, ನಿಂತ ಜಾಗದಲ್ಲಿಯೆ ಓಡುವುದು, ಇನ್ನಿತರ ವ್ಯಾಯಾಮಗಳನ್ನು ಮಾಡುತ್ತಿದ್ದಾರೆ. ಅವರ ಜಿಮ್ ಎಕ್ಸ್ ಫರ್ಟ್ ರಶ್ಮಿಕಾ ಮಂಡಣ್ಣ ಅವರಿಗೆ ವ್ಯಾಯಾಮ ಮಾಡುವ ವಿಧಾನವನ್ನು ತಾವು ಮಾಡಿ ತೋರಿಸಿ ನಂತರ ರಶ್ಮಿಕಾ ಅವರಿಂದಲೂ ಮಾಡಿಸುತ್ತಿದ್ದಾರೆ. ರಶ್ಮಿಕಾ ಅವರ ಮುದ್ದಿನ ನಾಯಿ ಮರಿ ಇವರನ್ನು ನೋಡುತ್ತಾ, ತನ್ನ ರೀತಿಯಲ್ಲಿ ಆಟ ಆಡುತ್ತಿತ್ತು.
ದೇಹಕ್ಕೆ ಬೇಕಾದ ವಿಟಮಿನ್ ಗಳು ಕೆಲವು ನೈಸರ್ಗಿಕ ದೊರಕುತ್ತವೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದು ನಮಗೆ ಸಂಬಂಧಿಸಿದ್ದಾಗಿದೆ.