ಉದ್ಯೋಗದ ಸಮಸ್ಯೆ ಮೊದಲಿನಿಂದಲೂ ಇದ್ದರೂ ಇತ್ತಿಚೀನ ವರ್ಷಗಳಲ್ಲಿ ಅದು ತುಂಬಾ ದೊಡ್ಡದಾದ ಸ್ವರೂಪ ಪಡೆದುಕೊಂಡಿದೆ. ಉದ್ಯೋಗ ದೊರಕದೆ ಇದ್ದವರೆ ಹೆಚ್ಚಾಗಿದ್ದಾರೆ. ಆದ್ದರಿಂದ ಸುಮಾರು ಯುವಕರು ತಮ್ಮದೆ ಆದ ಬ್ಯುಸಿನೆಸ್ ಅಂದರೆ ಸ್ವಂತ ವ್ಯವಹಾರ ನಡೆಸುವ ಯೋಚನೆ ಮಾಡುತ್ತಾರೆ. ಬಂಡವಾಳ ಹಾಕಿ ಕೆಲವೊಬ್ಬರು ನೆಲೆ ನಿಂತರೆ ಕೆಲವೊಬ್ಬರೂ ಕೈ ಸುಟ್ಟುಕೊಳ್ಳುತ್ತಾರೆ. ಅಂತಹ ಬ್ಯುಸಿನೆಸ್ ಮಾಡುವ ಮನಸ್ಸುಳ್ಳವರಿಗೆ ಇಲ್ಲಿರುವ ಮಾಹಿತಿ ಉಪಯುಕ್ತವಾಗಬಲ್ಲದು. ಹಾಗಾದರೆ ಈ ಮಾಹಿತಿಯಲ್ಲಿ ಏನಿದೆ ತಿಳಿಯೋಣ.
ಕಂಟ್ರಿ ಕೋಳಿ ಫಾರ್ಮಿಂಗ್ ಈಗ ಬಹಳ ಲಾಭಗಳಿಸುವ ವ್ಯವಹಾರವಾಗಿದೆ. ರೈತರೂ ಬೆಳೆ ಬೆಳೆಯುವುದರ ಜೊತೆಗೆ ನಾಟಿ ಕೋಳಿ ಫಾರ್ಮಿಂಗ್ ಮಾಡುತ್ತಾರೆ. ಭೂಮಿ ಇಲ್ಲದೆ ಕೂಲಿ ಮಾಡುವ ಜನರು ಕೋಳಿ ಫಾರ್ಮಿಂಗ್ ನಿಂದ ಲಾಭಗಳಿಸುತ್ತಾರೆ. ಇದರಲ್ಲಿ ನಾಟಿ ಕೋಳಿ ಫಾರ್ಮಿಂಗ್ ಜೊತೆಗೆ ಮೊಟ್ಟೆ ಮಾರಾಟದಿಂದಲೂ ಲಾಭಗಳಿಸಬಹುದು. ಹಾಗಾದರೆ ಕೋಳಿ ಫಾರ್ಮಿಂಗ್ ನ ಬಂಡವಾಳ ಎಷ್ಟು? ಹೇಗೆ ಮಾಡಬೇಕು? ಎಂದು ನೋಡೊಣ ಬನ್ನಿ. ಫಾರ್ಮಿಂಗ್ ಮಾಡುವ ಜಾಗದಲ್ಲಿ ಕಬ್ಬಿಣದ ತಂತಿಯ ಸಹಾಯದಿಂದ ಕೋಳಿಗಳು ಹೊರಗೆ ಹಾರಿ ಹೋಗದ ರೀತಿಯಲ್ಲಿ ಬೇಲಿ ಮಾಡಬೇಕು. ಖಾಲಿ ಇರುವ ಜಾಗಗಳಲ್ಲಿ ತರಕಾರಿಯ ಗಿಡಗಳನ್ನು ಬೆಳೆಸಿದರೆ, ಕೋಳಿಗಳು ಅದನ್ನು ಆಹಾರವಾಗಿ ತೆಗೆದುಕೊಂಡು ಸೊಂಪಾಗಿ ಬೆಳೆಯುತ್ತವೆ.
ಅನುಭವ ಇಲ್ಲದೆಯೆ ಮೊದಲಿಗೆ ಕೋಳಿ ಫಾರ್ಮಿಂಗ್ ಮಾಡುತ್ತಿದ್ದರೆ, ಮೊದಲಿಗೆ ಎರಡು ತಂಡದಲ್ಲಿ ಮೂರು ನೂರರಿಂದ ನಾಲ್ಕು ನೂರು ಕೋಳಿ ಮರಿಗಳನ್ನು ಸಾಕಿದರೆ ಉತ್ತಮ. ಈ ಕೋಳಿ ಮರಿಗಳು ಒಂದರಿಂದ ಎರಡು ದಿನದ ಮರಿಗಳು ಆಗಿದ್ದರೆ ಒಳ್ಳೆಯದು. ಮರಿಗಳನ್ನು ನೀವೆ ನೋಡಿಕೊಳ್ಳುವುದು ಉತ್ತಮ. ಅನುಭವ ಸಿಕ್ಕ ನಂತರ ಎರಡು ಸಾವಿರದ ವರೆಗೂ ಕೋಳಿಗಳನ್ನು ಸಾಕಬಹುದು. ಒಂದು ಮರಿಗಳು 25 ರಿಂದ 30 ರೂಪಾಯಿಗಳಲ್ಲಿ ಸಿಗುತ್ತದೆ. ಇದರಿಂದ ತುಂಬಾ ಲಾಭವಿದೆ. ನಾಟಿಕೋಳಿಗಳಿಗೆ ಆಹಾರ ತುಂಬಾ ಮುಖ್ಯ. ನಾಟಿಕೋಳಿ ಫಾರ್ಮಿಂಗ್ ಮಾಡಿದವರ ಅನುಭವದ ಮೇಲೆ ಆಹಾರದ ಬಗೆಗಿನ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಪೇಟೆಯಲ್ಲೂ ಕೊಳ್ಳಬಹುದು. ಒಂದು ಮರಿ ಕೋಳಿ ಐದು ತಿಂಗಳುಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಹುಂಜವು ಎರಡು ಅರ್ಧ ಕೆಜಿ ಆದರೆ ಕೋಳಿ ಒಂದು ಅರ್ಧ ಕೆಜಿ ಆಗುತ್ತವೆ. ಕೋಳಿ ಫಾರ್ಮಿಂಗ್ ಮಾಡುವಾಗ ಒಂದು ಸಾವಿರ ಕೋಳಿಗಳ ಸಾಕಣಿಕೆಗೆ ಒಂದು ಲಕ್ಷದ ವರೆಗೂ ಬಂಡವಾಳ ಬೇಕಾಗುತ್ತದೆ. ಕೋಳಿಗಳ ಸಾಕಣಿಕೆ ಹಾಗೂ ಆಹಾರಕ್ಕಾಗಿ ತಿಂಗಳಿಗೆ ಹತ್ತು ಸಾವಿರ ರೂಪಾಯಿ ಬೇಕಾಗುತ್ತದೆ.
ಇನ್ನೂ ಇದರ ಲಾಭದ ವಿಷಯ ಬಂದಾಗ ಐದು ತಿಂಗಳ ನಂತರದಲ್ಲಿ ಕೋಳಿಯ ಬೆಳವಣಿಗೆ ಆದಾಗ ಲಾಭದ ಲೆಕ್ಕಾಚಾರ ಹೇಗೆ ಮಾಡಬಹುದೆಂದು ನೋಡೋಣ. ಒಂದು ಚಿಕನ್ ಗೆ 400-450 ರೂಪಾಯಿ ವರೆಗೂ ಮಾರಬಹುದು. ಒಂದು ಸಾವಿರ ಕೋಳಿಗಳ ತಂಡದಲ್ಲಿ 900 ಕೋಳಿ ಬದುಕಿದೆ ಅಂದುಕೊಂಡರೆ. 900 ಕೋಳಿಗಳಿಗೆ 400 ರೂಪಾಯಿಗಳಾದರೆ ಒಟ್ಟು ಮೊತ್ತ 3,60,000 ರೂಪಾಯಿಗಳು. ಒಂದು ತಂಡಕ್ಕೆ ಹಾಕಿದ ಬಂಡವಾಳ ಒಂದು ಲಕ್ಷ ಕಳೆದಾಗ 2,50,000 ಪ್ರತಿ ತಂಡಕ್ಕೆ ಬರುವ ಲಾಭ. ಕೋಳಿ ಫಾರ್ಮಿಂಗ್ ಮಾಡಿದಾಗ ಕೋಳಿಗಳ ಬಗ್ಗೆ ಹೆಚ್ಚಿನ ಕಾಳಜಿ ಅವಶ್ಯಕ. ಏಕೆಂದರೆ ರೋಗ ಒಮ್ಮೆ ಬಂದರೆ ಕೋಳಿಗಳು ಸಾಯುತ್ತವೆ. ಕೋಳಿಗಳು ಸತ್ತರೆ ನಷ್ಟವಾಗುತ್ತದೆ.
ಒಂದು ವ್ಯವಹಾರ ಅಥವಾ ಬ್ಯುಸಿನೆಸ್ ಮಾಡುವಾಗ ಅದರ ಬಗ್ಗೆ ಆದಷ್ಟು ಹೆಚ್ಚು ಮಾಹಿತಿ ಕಲೆ ಹಾಕಿಕೊಳ್ಳುವುದು ಒಳ್ಳೆಯದು. ಯಾಕೆಂದರೆ ಬಂಡವಾಳ ಹಾಕಿ ಮಾಡಿದ ವ್ಯವಹಾರ ಲಾಭ ಸಿಕ್ಕರೆ ಒಳ್ಳೆಯದು. ಇಲ್ಲದೆ ಹೋದಲ್ಲಿ ಮಾಹಿತಿಯ ಅಭಾವದಿಂದ ನಷ್ಟವಾಗುವುದು ಖಚಿತ.