ಕೆಲವೊಮ್ಮೆ ಮನೆಯಲ್ಲಿ ಹಾವುಗಳು ಬರುತ್ತವೆ. ಮನೆಯೊಳಗೆ ಹಾವು ಬಂತೆಂದು ಅದನ್ನು ಬಡಿದು ಸಾಯಿಸುವವರು ಹೆಚ್ಚು ಜನರಿರುತ್ತಾರೆ. ಇನ್ನು ಕೆಲವರು ಹಾವು ಹಿಡಿಯುವವರನ್ನು ಕರೆಸಿ ಹಾವನ್ನು ಹಿಡಿಸಿ ಅದನ್ನು ಒಂದು ಸುರಕ್ಷಿತವಾದ ಜಾಗಕ್ಕೆ ಬಿಡಿಸುತ್ತಾರೆ. ಇನ್ನು ಮನೆಗೆ ಹಾವು ಬಂದರೆ ಅವನು ಓಡಿಸುವುದರ ಸಲುವಾಗಿ ಉಡುಪಿ ಶ್ರೀಕೃಷ್ಣಮಠದ ಪೇಜಾವರ ಶ್ರೀಗಳು ಹಾವನ್ನು ಹಿಡಿಯುವುದರ ಸಲುವಾಗಿ ಸರಳ ಹಾಗೂ ಸುಲಭ ವಾದ ಒಂದು ಉಪಾಯವನ್ನು ಕಂಡುಕೊಂಡಿದ್ದಾರೆ. ಉಡುಪಿಯಲ್ಲಿ ಹಾವು ಬಂದಾಗ ಶ್ರೀಗಳು ಯಾವ ರೀತಿಯಲ್ಲಿ ಹಾವನ್ನು ಸುರಕ್ಷಿತವಾಗಿ ಯಾರಿಗೂ ಯಾವುದೇ ರೀತಿಯ ಉಂಟಾಗದಂತೆ ಹೇಗೆ ಹಿಡಿದಿದ್ದಾರೆ ಎಂದು ನಾವು ಇಲ್ಲಿ ತಿಳಿದುಕೊಳ್ಳೋಣ.
ಪೇಜಾವರ ಶ್ರೀಗಳು ಹಾವು ಬಂದಾಗ ಅದನ್ನು ಹೆದರಿಸಿ ಓಡಿಸದೆ, ಅಥವಾ ಹಾವು ಹಿಡಿಯುವವರನ್ನು ಸಹಕರಿಸಬೇಕಾಗಿ ಸುಲಭವಾದ ವಿಧಾನದಿಂದ ಹಾವನ್ನು ಹಿಡಿದಿದ್ದಾರೆ. ಈ ರೀತಿಯಾಗಿ ನಾವು ಕೂಡ ಧೈರ್ಯವನ್ನು ತೋರಿಸಿ ಹಾವನ್ನು ಹಿಡಿಯಬಹುದು. ಮನೆಯಲ್ಲಿ ಇರುವಂತಹ ವೇಸ್ಟ್ ಪೇಪರ್ ಬಳಸಿಕೊಂಡು ಹಾವನ್ನು ಹಿಡಿದಿದ್ದಾರೆ. ಬೇಡವಾದ ಉದ್ದನೆಯ ಪೇಪರ್ ತೆಗೆದುಕೊಂಡು ಅದನ್ನು ಸುರುಳಿ ಸುತ್ತಿಕೊಂಡು ಮಧ್ಯದಲ್ಲಿ ಪೇಪರ್ ಬಿಚ್ಚಿದಂತೆ ದಾರವನ್ನು ಕಟ್ಟಿ ಕೊಳ್ಳಬೇಕು ಹಾಗೂ ಪೇಪರ್ನ ಒಂದು ಕಡೆ ಸೀಲ್ ಮಾಡಿಕೊಳ್ಳಬೇಕು. ಪೇಪರ್ ನ ಇನ್ನೊಂದು ಕಡೆ ಹಾಗೆಯೇ ಬಿಡಬೇಕು.
ನಾವು ಸುತ್ತಿ ರೆಡಿ ಮಾಡಿಟ್ಟುಕೊಂಡಿರುವ ಪೇಪರ್ನಲ್ಲಿ ಹಾವನ್ನು ಹಿಡಿದು ತುಂಬಬೇಕು. ಇದಕ್ಕಾಗಿ ನಾವು ಕೈಯಲ್ಲಿ ಹಾವನ್ನು ಮಾಡಬೇಕೆಂದೇನೂ ಇಲ್ಲ. ಹಾವಿನ ಬಾಯಿಗೆ ಸಮೀಪದಲ್ಲಿ ನಾವು ತಯಾರಿಸಿಟ್ಟುಕೊಂಡು ಇರುವ ಪೇಪರನ್ನು ಹಿಡಿದರೆ ಹಾವು ತಾನಾಗಿಯೇ ಒಳಗೆ ಹೋಗುವುದು ಆದರೆ ಹಾವು ಪೇಪರ್ ರೋಲ್ ನ ಒಳಗೆ ಹೋಗು ವರೆಗೂ ಕಾಯಬೇಕು ಅಷ್ಟೇ. ಸಂಪೂರ್ಣವಾಗಿ ಹಾವು ಪೇಪರ್ ರೋಲ್ ಇಲ್ಲ ಒಳಗೆ ಹೋದನಂತರ ಇನ್ನೊಂದು ಕಡೆಯೂ ಕೂಡ ಸೀಲ್ ಮಾಡಬೇಕು. ನಂತರ ಆ ಪೇಪರನ್ನು ಮನೆಯಿಂದ ಹೊರಗಡೆ ದೂರ ಎಲ್ಲಾದರೂ ತೆಗೆದುಕೊಂಡುಹೋಗಿ ದಾರವನ್ನು ಹೆಚ್ಚಿಸಿ ಹಾವನ್ನು ಸುರಕ್ಷಿತವಾಗಿ ಹೊರಗೆ ಬಿಟ್ಟು ಬರಬಹುದು.