ಮಾಲಿಕರು ತಮ್ಮ ಕಂಪನಿ ಅಥವಾ ತಾವು ಸ್ಥಾಪಿಸಿದ ಸಂಸ್ಥೆ ಇರಬಹುದು ಅದು ಒಂದು ವರ್ಷ ಅಥವಾ ಹತ್ತು, ಇಪ್ಪತೈದು ಅಥವಾ ಐವತ್ತು ವರ್ಷಗಳಿಗೊಮ್ಮೆ ಸಂಭ್ರಮಾಚರಣೆ ಮಾಡುತ್ತಾರೆ. ಆದರೆ ಇಲ್ಲಿ ಒಬ್ಬರು ವೆಜ್ ಬಿರಿಯಾನಿ ಹಾಗೂ ಬಿರಿಯಾನಿ, ಹಣ್ಣುಗಳು, ಪ್ರೈಡ್ ರೈಸ್ ಎಲ್ಲವನ್ನು ಹಂಚುತ್ತಿದ್ದಾರೆ. ಹಾಗಾದರೆ ಯಾವ ಕಾರಣಕ್ಕಾಗಿ ತಿಂಡಿ ಹಂಚುತ್ತಿದ್ದಾರೆ ಅನ್ನೋದನ್ನ ನಾವಿಲ್ಲಿ ನೋಡೋಣ.
ಸಾಮಾನ್ಯವಾಗಿ ಬೈಕ್ ಅಥವಾ ಕಾರ್ ಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಹೋದಾಗ ಬಿಲ್ ಕೊಡುತ್ತಾರೆ. ಆದರೆ ಇಲ್ಲೊಂದು ಪೆಟ್ರೋಲ್ ಬಂಕ್ ನಲ್ಲಿ ಬಿರಿಯಾನಿ, ವೆಜ್ ಬಿರಿಯಾನಿ ಕೊಡುತ್ತಿದ್ದಾರೆ. ವೆಂಕಟೇಶ್ವರ ಸರ್ವಿಸ್ ಸ್ಟೇಷನ್, ಇಂದಿರಾ ನಗರ, ಬೆಂಗಳೂರಿನ ಬಂಕ್ ಒಂದರಲ್ಲಿ ಇಂಧನ ಹಾಕುವುದರ ಜೊತೆಗೆ ಬಿಸಿ ಬಿಸಿಯಾದ ತಿಂಡಿಗಳನ್ನು ಕಾರಿನ ಬಳಿಯೆ ಬಂದು ನೀಡುತ್ತಿದ್ದಾರೆ. ಯಾಕೆಂದರೆ ಶ್ರೀ ವೆಂಕಟೇಶ್ವರ ಸರ್ವಿಸ್ ಸ್ಟೇಷನ್ ಬಂಕ್ ಪ್ರಾರಂಭಿಸಿ ಐವತ್ತೊಂದು ವರ್ಷಗಳನ್ನು ಪೂರೈಸಿದ ಸಂಭ್ರಮದಿಂದ ಬಂಕ್ ಗೆ ಬಂದು ಇಂಧನ ತುಂಬಿಸಿಕೊಳ್ಳುವ ಗ್ರಾಹಕರಿಗೆ ಕೃತಜ್ಞತಾ ಪೂರ್ವಕವಾಗಿ ತಿಂಡಿ ಹಂಚುತ್ತಿದ್ದಾರೆ.
ವೆಂಕಟೇಶ್ವರ ಸರ್ವಿಸ್, ಇಂಡಿಯನ್ ಆಯಿಲ್ ಹಾಗೂ ಮೇನಕಾ ಪುಡ್ಸ್ ಈ ಮೂರು ಸಂಸ್ಥೆಗಳು ಸೇರಿ ಐವತ್ತು ವರ್ಷಗಳ ಸಂಭ್ರಮಾಚರಣೆ ಮಾಡುತ್ತಿದೆ. ಇಪ್ಪತ್ತೊಂದನೇ ಸೆಪ್ಟೆಂಬರ್ ರಂದು ಪ್ರಾರಂಭಗೊಂಡ ಈ ಬಂಕ್ ಇಂದು ಐವತ್ತೊಂದನೆ ವರ್ಷದ ಆಚರಣೆ ಮಾಡುತ್ತಿದೆ. ಕೂತ ಕಡೆಗಳಲ್ಲಿ ತಿಂಡಿಯ ಹಂಚಿಕೆ ಮಾಡಲಾಗುತ್ತಿದೆ. ಒಂದು ತಿಂಗಳಿನವರೆಗೂ ಈ ಸಂಭ್ರಮಾಚರಣೆ ನಡೆಸಬೇಕೆಂದು ನಿರ್ಧಾರ ಮಾಡಿದ್ದಾರೆ. ಕರೋನಾ ಇದ್ದರೂ ಇವರು ನೀಡುತ್ತಿರುವ ಕೊಡುಗೆಗಳನ್ನು ನೋಡಿ ಗ್ರಾಹಕರು ಮೆಚ್ಚುಗೆಯನ್ನು ಹಾಗೂ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
ಸಂಭ್ರಮಾಚರಣೆಗಳನ್ನು ಮಾಡುವಾಗ ನಮ್ಮಲ್ಲೆ ಆಚರಿಸಿಕೊಳ್ಳದೆ, ಅಗತ್ಯ ಇರುವವರಿಗೆ ಸ್ವಲ್ಪ ಸಹಾಯ ಮಾಡಿದರೆ ಅವರ ಖುಷಿಯ ಜೊತೆಗೆ ಆಶಿರ್ವಾದವೂ ದೊರಕುತ್ತದೆ. ನಮ್ಮಲ್ಲಿ ನಾವೆ ಆಚರಿಸಿದಾಗ ಸಿಗುವ ಸಂತೋಷಕ್ಕಿಂತ ಹೆಚ್ಚಿನ ಸಂತೋಷ ನಮ್ಮದಾಗುತ್ತದೆ.