ಯೋಗಾಸನಗಳು ದೇಹಕ್ಕೆ ಅತಿ ಮುಖ್ಯವಾದವುಗಳು. ಪ್ರಾಣಾಯಾಮ, ಯೋಗಗಳು ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುವುದಲ್ಲದೇ ರೋಗಗಳಿಂದ ದೂರವಿರುವಲ್ಲಿ ಸಹಾಯ ಮಾಡುತ್ತದೆ. ಯೋಗಾಸನ ಮಾಡಿದ ಮೇಲೆ ಪ್ರಾಣಾಯಾಮ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. ಯೋಗಾಸನ ಮಾಡುವ ಸಾವಿರದಷ್ಟು ಹೆಚ್ಚು ಉಪಯೋಗ ಪ್ರಾಣಾಯಾಮ ನೀಡುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ಇದು ನಿಜವೇ? ಪ್ರಾಣಾಯಾಮ ಸಿದ್ದಿಸಿಕೊಳ್ಳುವ ಪದ್ದತಿ ಏನು ಮತ್ತು ಹೇಗೆ ಎಂಬುದನ್ನು ಪ್ರಾಣಾಯಾಮದ ಬಗ್ಗೆ ಯೋಗ ತಜ್ಞರಾದ ಅನಂತ ಜೀ ಅವರು ತಿಳಿಸಿದ್ದಾರೆ. ಪ್ರಾಣಾಯಾಮ ಸಿದ್ದಿಸಿಕೊಳ್ಳುವುದು ಹೇಗೆಂದು ಇಲ್ಲಿ ನೀಡಿರುವ ಮಾಹಿತಿಯ ಪ್ರಕಾರ ತಿಳಿಯೋಣ.

ಪ್ರಾಣಾಯಾಮ ಸಿದ್ದಿಯಾಗಲೂ ಏಳು ವರ್ಷಗಳ ನಿರಂತರ ಅಭ್ಯಾಸ ಬೇಕು. ಹೀಗೆ ಮಾಡುತ್ತಿದ್ದಲ್ಲಿ ಮಾತ್ರ ಯೋಗಾಸನ ಮಾಡದೆಯೂ ಪ್ರಾಣಾಯಾಮ ಮಾಡಿದಾಗ ಅದರ ಉಪಯೋಗ ಸಿಗುತ್ತದೆ. ಎಷ್ಟೋ ಜನರು ಅಂದುಕೊಳ್ಳುತ್ತಾರೆ ಯೋಗಾಸನ ಕಷ್ಟ ಹಾಗಾಗಿ ಪ್ರಾಣಾಯಾಮ ಸುಲಭ ಅದನ್ನೆ ಮಾಡುತ್ತೆವೆ ಎಂದು. ಆದರೆ ಯೋಗಾಸನ ಮಾಡಿದ ಮೇಲೆ ಪ್ರಾಣಾಯಾಮ ಮಾಡಬೇಕು. ಮನೆಯ ಮೇಲ್ಬಾಗ ತಲುಪಲು ಮೆಟ್ಟಿಲುಗಳ ಅವಶ್ಯಕತೆ ಹೇಗೆ ಇರುವುದೋ ಪ್ರಾಣಾಯಾಮ ಮಾಡಲು ಯೋಗಾಸನ ಅಷ್ಟು ಅವಶ್ಯಕ. ಯೋಗಾಸನದ ಸಾವಿರ ಪಟ್ಟು ಲಾಭ ಪ್ರಾಣಾಯಾಮ ನೀಡುತ್ತದೆ‌. ಅಂತಹ ಅದ್ಭುತ ಕ್ರಿಯೆ ಪ್ರಾಣಾಯಾಮ. ದೇಹ ಸದೃಢವಾಗಿ, ಉಸಿರಾಟ ಕ್ರಿಯೆ ಮುಗಿದು, ಶ್ವಾಸಕೋಶದಲ್ಲಿ ಮರ್ಧನ ಏರ್ಪಟ್ಟು, ದೇಹದ ಯಾವುದೇ ಭಾಗದಲ್ಲಿ ನೋವಿರದೆ ಸದೃಢವಾದಾಗ ಪ್ರಾಣಾಯಾಮ ಮಾಡುವುದು ಸರಿಯಾದ ರೀತಿ. ಪ್ರಾಣಾಯಾಮ ಏನು ಎಂದು ಗೊತ್ತಿಲ್ಲದೆ ಕಾಟಾಚಾರಕ್ಕೆ ಮಾಡುವುದು ಸರಿಯಲ್ಲ. ಸರಿಯಾದ ವಿಧಾನ ಅನುಸರಿಸಬೇಕು. ಉಷಾಪಾನ, ವಾರ್ಮಿಂಗ್- ಲೂಸ್ನಿಂಗ್, ನಿಂತು ಮಾಡುವ ಅಸನಗಳು ಇವು ಆದ ಮೇಲೆ ಪ್ರಾಣಾಯಾಮ ಮಾಡಬೇಕು. ಅತ್ಯುನ್ನತ ಸ್ಥಾನ ತಲುಪಲು ಹಾಗೂ ಅಧೊಗತಿ ತಲುಪಲು ಕಾರಣ ಮನಸ್ಸು. ಮನಸ್ಸಿಗೆ ಅತಿ ಫ್ರಬಲವಾದ ಶಕ್ತಿ ಇದೆ. ಮನಸ್ಸನ್ನು ಏಕಾಗ್ರತೆ, ನಿಯಂತ್ರಣದಲ್ಲಿ ಇಟ್ಟಾಗ ಯಶಸ್ಸು ಸಾಧ್ಯ. ಮನಸ್ಸನ್ನು ಏಕಾಗ್ರತೆಗೊಳಿಸಲು ಋಷಿ- ಮಹರ್ಷಿಗಳಿಗೆ ಸಿಕ್ಕಿದ ದಾರಿ ಪ್ರಾಣಾಯಾಮ. ಅನೇಕ ಬಗೆಯ ಉಸಿರಾಟದ ಕ್ರಿಯೆ ಈ ಪ್ರಾಣಾಯಾಮ.

ಮನಸ್ಸಿನ ಭಾವನೆಗಳು ಬದಲಾದಂತೆ ಉಸಿರಾಟದ ಕ್ರಿಯೆ ಬದಲಾಗುತ್ತದೆ. ಅದಕ್ಕಾಗಿ ಪ್ರಾಣಾಯಾಮದಿಂದ ಮನಸ್ಸು ಏಕಾಗ್ರತೆಗೆ ತರಬಹುದು. ಉದಾಹರಣೆಗೆ ಕೋಪ ಬಂದಾಗ ಉಸಿರಾಟ ವೇಗವಾಗಿರುತ್ತದೆ, ಅಳುವಾಗ ನಿಧಾನವಾಗಿರುತ್ತದೆ, ಹತಾಶೆಯಲ್ಲಿ ನಿಟ್ಟುಸಿರು ಬಿಡುತ್ತೇವೆ ಹೀಗೆ ವಿವಿಧ ರೀತಿಯ ಉಸಿರಾಟ ಬದಲಾಗುತ್ತದೆ. ಮನಸ್ಸಿನ ನಿಯಂತ್ರಣಕ್ಕೆ ಕೀಲಿ ಕೈ ಪ್ರಾಣಾಯಾಮ. ಓಂಕಾರ, ಕಪಾಲಭಾತಿ, ಮಂತ್ರ, ಭಸ್ತ್ರಿಕಾ, ನಾಡಿಶೋಧನ, ಭ್ರಾಹ್ಮರಿ, ಉಜ್ಜಾಯಿ, ವಿಭಾಗ ಪ್ರಾಣಾಯಾಮ ಇವೆಲ್ಲ ರೀತಿಯ ಪ್ರಾಣಾಯಾಮ ಇದೆ. ಇವೆಲ್ಲವುಗಳು ನಿರ್ದಿಷ್ಟವಾದ ರೀತಿಯಲ್ಲಿ ಪ್ರಾಣಾಯಾಮ ಮಾಡಬೇಕು ಎಂಬ ನಿಯಮವಿದೆ. ಅದೆ ರೀತಿಯಲ್ಲಿ ಪ್ರಾಣಾಯಾಮ ಮಾಡಿದಾಗ ದೇಹದ ಚೇತನ ಶಕ್ತಿಯಲ್ಲಿ ಬದಲಾವಣೆಯಾಗುತ್ತದೆ ಎಂದು ಋಷಿಗಳು ಕಂಡುಕೊಂಡು ಪ್ರಾಣಾಯಾಮವನ್ನು ಜೋಡಿಸಿದರು. ಎಲ್ಲ ಕಡೆ ಹುಡುಕಿ ತಂದು, ಅಭ್ಯಯಿಸಿ, ಪ್ರಯೋಗಿಸಿ ನೋಡಿ ಎಂಬತ್ನಾಲ್ಕು ಲಕ್ಷ ಅಭ್ಯಾಸಗಳನ್ನು ಒಟ್ಟುಗೂಡಿಸಿದ ಹೆಗ್ಗಳಿಕೆ ಪತಂಜಲಿ ಮಹರ್ಷಿಗಳದ್ದು. ಅವರು ಖಾಯಲೆಗಳಿಗೆ, ಸಿದ್ದಿಗಳಿಗೆ, ಸಾಧನೆಗೆ, ಹೀಗೆ ಅನೇಕ ವಿಧದಲ್ಲಿ ವಿಂಗಡಿಸಿದ್ದರು. ಐದು ಸಾವಿರ ವರ್ಷಗಳ ಕಾಲ ಬದುಕಿದ್ದರು. ಇಚ್ಛಾಮರಣಿ ಆಗಿದ್ದರು. ಪ್ರಾಣಾಯಾಮಕ್ಕೆ ಹೊಸ ಅರ್ಥ ಕಲ್ಪಿಸಿಕೊಟ್ಟರು.

ಪ್ರಾಣಾಯಾಮ ಮಾಡುವ ಮೊದಲು ನಿಂತುಮಾಡುವ ಆಸನಗಳು, ಉಷಾಪಾನ ಎಲ್ಲವನ್ನು ಮಾಡುವುದನ್ನು ನೆನಪಿನಲ್ಲಿಡಿ. ಪ್ರಾಣಾಯಾಮದ ಲಾಭ ಸಿಗಲು ವಜ್ರಾಸನ ಅಥವಾ ಪದ್ಮಾಸನ ಇಲ್ಲವೇ ಸುಖಾಸನದಲ್ಲಿ ಕುಳಿತು ಮಾಡಬೇಕು. ಚಕ್ಕಂಬಕ್ಕಳ ಹಾಕಿ ಪ್ರಾಣಾಯಾಮ ಮಾಡಬಾರದು. ಸುಖಾಸನ ಹಾಕುವ ರೀತಿ ಎಂದರೆ ಎರಡು ಹಿಮ್ಮಡಿಗಳು ದೇಹದ ಮಧ್ಯ ಭಾಗದ ನೇರ ಬರಬೇಕು. ಒಂದು ಹಿಮ್ಮಡಿಯ ಮೇಲೆ ಒಂದು ಹಿಮ್ಮಡಿ ಬರಬಾರದು. ಮೊದಲ ಪ್ರಾಣಾಯಾಮ ಭಸ್ರ್ತಿಕಾ ಪ್ರಾಣಾಯಾಮ. ಬೆನ್ನು ನೇರವಾಗಿ ಇಟ್ಟು ಕುಳಿತುಕೊಂಡಿರಬೇಕು. ಮಾಡುವ ವಿಧಾನ ಕೈ ಮೇಲೆತ್ತುತ್ತಾ ಗಾಳಿಯನ್ನು ಒಳಗೆ ತೆಗೆದುಕೊಳ್ಳಬೇಕು, ಕೈ ಕೆಳಗೆ ಇಳಿಸುತ್ತಾ ಜೋರಾಗಿ ಉಸಿರನ್ನು ಹೊರಗೆ ಬಿಡಬೇಕು. ಕೈ ಮೇಲೆ ಬಂದಾಗ ಹಸ್ತ ಬಿಚ್ಚಿರಬೇಕು, ಕೈ ಕೆಳಗೆ ಬಂದಾಗ ಮುಷ್ಟಿ ಕಟ್ಟಬೇಕು. ಕೈ ಮೇಲೆತ್ತಿದಾಗ ಕೈ ನೇರವಾಗಿರಬೇಕು ಇದು ಭಸ್ರ್ತಿಕಾ ಪ್ರಾಣಾಯಾಮ. ಇದರಲ್ಲಿ ಮೂರು ವಿಧ ನಿಧಾನಗತಿ, ಮಧ್ಯಮಗತಿ, ವೇಗದಗತಿ. ಎಲ್ಲರೂ ಮಾಡಬಹುದಾದ ವಿಧಾನ ನಿಧಾನಗತಿ ಭಸ್ತ್ರಿಕಾ ಪ್ರಾಣಾಯಾಮ. ನಿಧಾನಗತಿಯಲ್ಲಿ ಬಿಪಿ ಇದ್ದವರು, ವೃದ್ದರು, ಮಕ್ಕಳು, ರೋಗಿಗಳು ಕೂಡ ಅಭ್ಯಾಸ ಮಾಡಬಹುದು. ಮಧ್ಯಮ ಹಾಗೂ ವೇಗಗತಿಯಲ್ಲಿ ಬಿಪಿ ಇರುವವರು ಅಭ್ಯಾಸ ಮಾಡಬಾರದು. ಪತಂಜಲಿ ಮಹರ್ಷಿಗಳು ಹೇಳುತ್ತಾರೆ ಶ್ರದ್ದೆಯಿಂದ ಮಾಡಿದರೆ ಉದ್ದಾರಕ್ಕೆ, ಅಸಡ್ಡೆಯಿಂದ ಮಾಡಿದರೆ ಸರ್ವನಾಶಕ್ಕೆ ಕಾರಣವಾಗುತ್ತದೆ ಪ್ರಾಣಾಯಾಮ ಎಂದು. ಪ್ರಾಣಾಯಾಮವನ್ನು ಸರಿಯಾಗಿ ಮಾಡದೆ ತಪ್ಪು ಮಾಡಿದರೆ ಎಲ್ಲವೂ ಬದಲಾಗಿಬಿಡುತ್ತದೆ. ಜೀವನ ಮಾಡುವುದು ಕಷ್ಟಕರವಾಗಿ ಬಿಡುತ್ತದೆ. ಆದ್ದರಿಂದ ತಪ್ಪಾಗಿ ಪ್ರಾಣಾಯಾಮ ಮಾಡದೆ ಇರುವುದು ಉತ್ತಮ. ಭಸ್ರ್ತಿಕಾ ಪ್ರಾಣಾಯಾಮ ಮುಗಿದಾಗ ಚಿನ್ ಮುದ್ರೆ ಇಟ್ಟುಕೊಂಡು ಧ್ಯಾನ ಮಾಡಿ. ತೋರು ಬೆರಳಿನ ಉಗುರಿನ ಕೆಳಭಾಗ ಹೆಬ್ಬೆರಳಿನ ಉಗುರಿನ ಕೆಳಭಾಗ ವತ್ತಿ ಹಿಡಿದು ಕೈ ನೇರವಾಗಿ ಇಟ್ಟು ಕುಳಿತು, ಹಸನ್ಮುಖ ಇದ್ದು, ಧೀರ್ಘ ಉಸಿರಾಟದ ಇರಬೇಕು. ನಂತರ ಒಂದು ಗುಟುಕು ನೀರು ಸೇವಿಸಿ ಮತ್ತೆ ಪ್ರಾಣಾಯಾಮ ಪ್ರಾರಂಭಿಸಿ. ಭಸ್ರ್ತಿಕಾ ಪ್ರಾಣಾಯಾಮ ರಕ್ತ ಶುದ್ದಿ ಮಾಡುತ್ತದೆ. ದೇಹದ ಉಷ್ಣತೆ ಸಮಸ್ಥಿತಿಯಲ್ಲಿ ಇಡುತ್ತದೆ ಇವು ಉಪಯೋಗಗಳಾಗಿವೆ.

ಪ್ರಾಣಾಯಾಮ ಉಪಯುಕ್ತವಾಗಿದೆ ಎನ್ನುವುದು ಎಷ್ಟು ಸತ್ಯವೋ ಅದನ್ನು ಸರಿಯಾಗಿ ತಿಳಿಯದೆ, ಸರಿಯಾದ ವಿಧಾನದಲ್ಲಿ ಮಾಡಿದಲ್ಲಿ ಅದರಿಂದ ಕೆಟ್ಟ ಪರಿಣಾಮಗಳು ಆಗುತ್ತವೆ. ಆದ್ದರಿಂದ ಅನಂತ ಜೀ ಹೇಳಿದ ರೀತಿಯಲ್ಲಿ ನಿಯಮಗಳನ್ನು ಅನುಸರಿಸಿದರೆ ಪ್ರಾಣಾಯಾಮ ಸಿದ್ದಿಸಿಕೊಳ್ಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!