ಹೆಜ್ಜೆ ಗುರುತಿನ ಮೇಲೆ ಅವರ ವ್ಯಕ್ತಿತ್ವ ಹಾಗೂ ಲಕ್ಷಣಗಳ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಮೊದಲನೇಯದಾಗಿ ಹೆಜ್ಜೆ ಗುರುತು ಸರಿಯಾಗಿ ಅಚ್ಚಾಗಿದ್ದು ಗ್ಯಾಪ್ ಇಲ್ಲದೆ ಇದ್ದರೆ ಅವರ ಮನಸ್ಸು ಸ್ವಚ್ಛವಾಗಿರುತ್ತದೆ. ಯೋಚನೆ ಮಾಡುವ ರೀತಿ ವಿಭಿನ್ನವಾಗಿರುತ್ತದೆ, ಓದುವುದರಲ್ಲಿ ಮುಂದೆ ಇರುತ್ತಾರೆ. ಇವರ ವೀಕ್ನೆಸ್ ಅಂದರೆ ಇವರು ಬಹಳ ಸೋಮಾರಿಯಾಗುತ್ತಾರೆ, ಇದರಿಂದ ಕೆಲವು ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಇವರು ಬೇರೆಯವರು ಹೇಳುವುದನ್ನು ಕೇಳುವುದಿಲ್ಲ ತಮಗೇನು ಇಷ್ಟವೋ ಹಾಗೆ ಮಾಡುತ್ತಾರೆ. ಇವರು ಮದುವೆ ಆದ ನಂತರ ಸೋಮಾರಿತನವನ್ನು ಬಿಡುತ್ತಾರೆ.
ಎರಡನೇಯದಾಗಿ ಹೆಜ್ಜೆ ಗುರುತು ಜಾಸ್ತಿ ಗ್ಯಾಪ್ ಇದ್ದರೆ ಇವರಿಗೆ ಟೈಮ್ ಸೆನ್ಸ್ ಕಡಿಮೆ, ಇವರು ಸಮಯಕ್ಕೆ ಹೆಚ್ಚು ಬೆಲೆ ಕೊಡುವುದಿಲ್ಲ. ಇವರು ಕರ್ಮಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ, ತಪ್ಪು ಮಾಡಿದರೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾರೆ. ಇವರ ಯಶಸ್ಸು ಇವರ ಹಾರ್ಡವರ್ಕ್ ಮೇಲೆ ಅವಲಂಬನೆಯಾಗಿದೆ. ಇವರಿಗೆ 28 ವರ್ಷದ ನಂತರ ಗೆಲವು ಸಿಗುತ್ತದೆ.
ಮೂರನೇಯದಾಗಿ ಹೆಜ್ಜೆ ಗುರುತು ಮಧ್ಯಭಾಗದಲ್ಲಿ ಸಣ್ಣದಿದ್ದರೆ ಇವರು ಭಾಗ್ಯಶಾಲಿಗಳಾಗಿರುತ್ತಾರೆ, ಅದೃಷ್ಟ ಇದ್ದು ಬೇಗ ಯಶಸ್ಸನ್ನು ಪಡೆಯುತ್ತಾರೆ. ಹಾರ್ಡವರ್ಕ್ ಮಾಡಿದರೆ ಇವರು ಹೆಚ್ಚು ಮುಂದೆ ಹೋಗುತ್ತಾರೆ. ಇವರ ಮಾತಿಗೆ ಬಹಳಷ್ಟು ಜನರು ಆಕರ್ಷಿತರಾಗುತ್ತಾರೆ, ಇವರು ಬುದ್ದಿವಂತರು ಆಗಿರುತ್ತಾರೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ಕಾಲಿನ ಹೆಜ್ಜೆಯಿಂದ ನಿಮ್ಮ ವ್ಯಕ್ತಿತ್ವ ತಿಳಿದುಕೊಳ್ಳಿ.