ಜೀರಿಗೆಯ ಬಗ್ಗೆ ತಿಳಿಯದ ಜನರೇ ಇಲ್ಲ ಇದಿಲ್ಲದೆ ಅಡುಗೆಗೆ ರುಚಿಯು ಇರುವುದಿಲ್ಲ. ಹೌದು ಜಿರಿಗೆ ಅಡುಗೆಯ ಬಹಳ ಮುಖ್ಯವಾದ ಪದಾರ್ಥವಾಗಿದೆ ಜೀರಿಗೆಯಿಂದ ಮಾಡಿದ ಅಡುಗೆಗಳು ಹೆಚ್ಚು ರುಚಿಯನ್ನ ನೀಡುವುದರ ಜೊತೆ ಹೆಚ್ಚು ಆರೋಗ್ಯವನ್ನು ಸಹ ನೀಡುತ್ತದೆ. ಜೀರಿಗೆ ಆರೋಗ್ಯಕ್ಕೆ ಬಹಳ ಅವಶ್ಯಕ ಮತ್ತು ತುಂಬಾ ಉಪಯುಕ್ತ. ಜೀರಿಗೆ ಯಾವೆಲ್ಲ ದೈಹಿಕ ಸಮಸ್ಯೆಗಳಿಗೆ ಔಷಧಿಯಾಗಿ ಕೆಲಸ ಅಂಡುತ್ತದೆ ಹಾಗೂ ದೇಹದ ಆರೋಗ್ಯಕ್ಕೆ ಜೀರಿಗೆ ಎಷ್ಟೊಂದು ಸಹಕಾರಿ ಅನ್ನೋದನ್ನ ತಿಳಿಯೋಣ.
ಸಾಮಾನ್ಯವಾಗಿ ಕಾಡುವಂತ ಹೊಟ್ಟೆನೋವು ಅಜೀರ್ಣತೆ ಹಾಗೂ ಹೊಟ್ಟೆನೋವು ಸಂಬಂದಿಸಿದ ಸಮಸ್ಯೆಗಳಿಗೆ ಜೀರಿಗೆ ಹೇಗೆ ಕೆಲಸ ಮಾಡುತ್ತದೆ ಅನ್ನೋದನ್ನ ಹೇಳುವುದಾದರೆ, ಒಂದು ಲೋಟ ನೀರುಮಜ್ಜಿಗೆಗೆ ಒಂದು ಚಮಚ ಪುಡಿ ಮಾಡಿದ ಜೀರಿಗೆ ಪುಡಿಯನ್ನ ಹಾಗು ಅರ್ಧ ಚಮಚ ಇಂಗನ್ನ ಹಾಕಿ ಸೇವಿಸುವುದರಿಂದ ಅಸಿಡಿಟಿಯಿಂದಾಗಿ ಕಂಡುಬರುವ ಹೊಟ್ಟೆ ನೋವು ಕಡಿಮೆಯಾಗುತ್ತದೆ.
ಅಜೀರ್ಣತೆ ಹೆಚ್ಚಾಗಿ ವಾಂತಿ ಭೇದಿಯಾಗುತ್ತಿದ್ದರೆ ಹುರಿದ ಅಕ್ಕಿಯ ಪುಡಿಗೆ ಜೀರಿಗೆ ಪುಡಿ, ಸ್ವಲ್ಪ ಉಪ್ಪು, ಸ್ವಲ್ಪ ಸಕ್ಕರೆ ಬೆರೆಸಿ ಗಂಜಿ ಅಥವಾ ಪಾಯಸದಂತೆ ತಯಾರಿಸಿ ಸೇವಿಸಿದರೆ ಅಜೀರ್ಣತೆ ನಿವಾರಣೆಯಾಗುತ್ತದೆ. ಇನ್ನು ಹೊಟ್ಟೆನೋವು ಹೊಟ್ಟೆ ಉಬ್ಬರದಂತ ಸಮಸ್ಯೆಗಳಿಗೆ ಅಂಗೈಯಲ್ಲೇ ಇರುವಂತ ಮನೆಮದ್ದು ಅಂದ್ರೆ ಅದುವೇ ಈ ಜೀರಿಗೆ ಹೌದು ಮೊದಲು ನೀರನ್ನು ಕಾಯಲು ಇಡೀ ನಂತರ ಅದಕ್ಕೆ ಒಂದು ದೊಡ್ಡ ಚಮಚ ಉರಿದ ಜೀರಿಗೆಯನ್ನು ಹಾಕಿ, ಚನ್ನಾಗಿ ಕುದ್ದ ನಂತರ ಅದಕ್ಕೆ ಉಪ್ಪು ಮತ್ತು ತುಪ್ಪ ಸೇರಿಸಿ ಕುಡಿದರೆ ಹೊಟ್ಟೆನೋವು ಹಾಗೂ ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ.
ಹೊಟ್ಟೆ ನೋವು ವಾಂತಿ ಬಂದರೆ ಒಂದು ಚಮಚ ಜೀರಿಗೆ, ಒಂದು ಚಮಚ ಏಲಕ್ಕಿ ಪುಡಿಯನ್ನು ಒಂದು ದೊಡ್ಡ ಲೋಟ ನೀರಿನಲ್ಲಿ ಕುದಿಸಿ. ಅದು ಅರ್ಧದಷ್ಟಾಗಿ ತಣ್ಣಗಾದ ನಂತರ ಅದಕ್ಕೆ ಸಕ್ಕರೆ ಮತ್ತು ನಿಂಬೆ ರಸ ಸೇರಿಸಿ ಕುಡಿದರೆ ವಾಂತಿ ನಿಲ್ಲುತ್ತದೆ. ಹೆಚ್ಚು ಬಾಯಾರಿಕೆಯಾಗುತ್ತಿದ್ದರೆ ಜಿರಿಗೆ ಹಾಗೂ ಕೊತ್ತೊಂಬರಿ ಬೀಜವನ್ನು ಹುರಿದು ಪುಡಿಮಾಡಿ ಅದಕ್ಕೆ ಸಕ್ಕರೆ ಮತ್ತು ನೀರು ಸೇರಿಸಿ ಕುಡಿಯಬೇಕು, ಇದರಿಂದ ಹೆಚ್ಚು ಬಾಯಾರುವಿಕೆ ಕಡಿಮೆಯಾಗುತ್ತದೆ.