ಸೌತ್ ಇಂಡಿಯಾದ ಪೇಮಸ್ ಬ್ರೇಕ್ ಪಾಸ್ಟ್ ಯಾವುದೆಂದರೆ ಅದು ಇಡ್ಲಿ, ಚಿಕ್ಕ ಅಂಗಡಿಯಿಂದ ದೊಡ್ಡ ಹೋಟೆಲ್ ವರೆಗೆ ಬ್ರೇಕ್ ಪಾಸ್ಟ್ ಇಡ್ಲಿ ಇರುತ್ತದೆ ಆದ್ದರಿಂದ ಇಡ್ಲಿ ಮಾಡಲು ಬೇಕಾಗುವ ಇಡ್ಲಿರವಾಗೆ ಬೇಡಿಕೆ ಇರುತ್ತದೆ. ಕಡಿಮೆ ಖರ್ಚಿನಲ್ಲಿ ಇಡ್ಲಿ ರವಾ ಬಿಸಿನೆಸ್ ಹೇಗೆ ಮಾಡುವುದು ಹಾಗೂ ಎಷ್ಟು ಲಾಭ ಗಳಿಸಬಹುದು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಇಡ್ಲಿ ರವಾ ಬಿಸಿನೆಸ್ ಮಾಡಲು ರವಾ ಕಟಿಂಗ್ ಮಷೀನ್ ಬೇಕಾಗುತ್ತದೆ. ಇದು 30,000ರೂ ಗೆ ಸಿಗುತ್ತದೆ. ಇಡ್ಲಿ ರವಾ ಮಾಡಲು ರೈಸ್ ಬೇಕಾಗುತ್ತದೆ, ಪ್ಯಾಕ್ ಮಾಡಲು ಕವರ್ ಹಾಗೂ ಸೀಲ್ ಮಾಡಲು ಸೀಲಿಂಗ್ ಮಷೀನ್ ಬೇಕಾಗುತ್ತದೆ. ಮೊದಲು ಅಕ್ಕಿಯನ್ನು ಡ್ರೈ ಮಾಡಿಕೊಂಡು ಮಷೀನ್ ಗೆ ಹಾಕಬೇಕು ಆಗ ಮಷೀನ್ ರೈಸನ್ನು ಸಣ್ಣದಾಗಿ ಕಟ್ ಮಾಡಿ ರವಾವನ್ನು ಔಟಪುಟ್ ಕೊಡುತ್ತದೆ. ನಂತರ ರವಾವನ್ನು ಪ್ಯಾಕ್ ಮಾಡಿ ಸೇಲ್ ಮಾಡಬಹುದು. ಇಡ್ಲಿ ರವಾವನ್ನು ಹೋಟೆಲ್ಸ್, ಕಿರಾಣಿ ಸ್ಟೋರ್ಸ್, ಸೂಪರ್ ಮಾರ್ಕೆಟ್, ಹಾಸ್ಟೆಲ್ ಹಾಗೂ ಕ್ಯಾಂಟೀನ್ ಗಳಲ್ಲಿ ಮಾರ್ಕೆಟ್ ಮಾಡಬಹುದು. ಹೋಟೆಲ್ಸ್ ಗಳಿಗೆ 10-15 ಕೆಜಿವರೆಗೆ ಸಪ್ಲೈ ಮಾಡಬಹುದು. ಕಿರಾಣಿ ಸ್ಟೋರ್ಸ್, ಸೂಪರ್ ಮಾರ್ಕೆಟ್ ಗಳಿಗೆ ಅರ್ಧ ಕೆಜಿ, ಒಂದು ಕೆಜಿ, 2-5 ಕೆಜಿ ವರೆಗೆ ಸೇಲ್ ಮಾಡಬಹುದು. ಹಾಸ್ಟೆಲ್, ಕ್ಯಾಂಟೀನ್ ಗಳಿಗೆ ಅವರು ಆರ್ಡರ್ ಕೊಟ್ಟಷ್ಟು ಸೇಲ್ ಮಾಡಬಹುದು.
ಪ್ರತಿದಿನ 500 ಕೆ.ಜಿವರೆಗೆ ಮಾರ್ಕೆಟಿಂಗ್ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು. ಮೊದಲು 10 ಕೆ.ಜಿಯಂತೆ 10-15 ಟಿಫಿನ್ ಸೆಂಟರ್ ಗಳಿಗೆ ಸೇಲ್ ಮಾಡಿದ್ರೆ 100 ಕೆ.ಜಿವರೆಗೆ ಸೇಲ್ ಮಾಡಬಹುದು. 10 ದೊಡ್ಡ ಹೋಟೆಲ್ ಗಳಿಗೆ 30 ಕೆಜಿಯಂತೆ ಸಪ್ಲೈ ಮಾಡಿದರೆ 300 ಕೆ.ಜಿ ಸೇಲ್ ಮಾಡಬಹುದು. ಹಾಸ್ಟೆಲ್, ಸೂಪರ್ ಮಾರ್ಕೆಟ್, ಕ್ಯಾಂಟೀನ್ ಗಳಿಗೆ 100 ಕೆ.ಜಿಯಂತೆ ಸಪ್ಲೈ ಮಾಡಿದರೆ ಪ್ರತಿದಿನ 500 ಕೆ.ಜಿ ಸೇಲ್ ಮಾಡಬಹುದು. ಒಂದು ಕೆ.ಜಿ ರೈಸ್ 20 ರೂಗೆ ಸಿಗುತ್ತದೆ, ಪ್ಯಾಕ್ ಮತ್ತು ಕರೆಂಟ್ ಚಾರ್ಜ್ 5ರೂ, ಒಂದು ಕೆ.ಜಿ ಇಡ್ಲಿ ರವಾ ಇನವೆಸ್ಟಮೆಂಟ್ 25ರೂ. ಒಂದು ಕೆ.ಜಿ ಇಡ್ಲಿ ರವಾ ನಮಗೆ ರಿಟೇಲ್ ಆಗಿ 40-45ರೂ ಗೆ ಸಿಗುತ್ತದೆ. ಇದನ್ನು ಹೋಲ್ ಸೇಲ್ ಆಗಿ 35ರೂ ಗೆ ಸೇಲ್ ಮಾಡಿದರೆ ಒಂದು ಕೆ.ಜಿಗೆ 10ರೂ ಲಾಭ ಸಿಗುತ್ತದೆ. ದಿನಕ್ಕೆ 500 ಕೆ.ಜಿ ಸೇಲ್ ಮಾಡಿದರೆ 5,000ರೂ ಲಾಭ ದೊರೆಯುತ್ತದೆ. ತಿಂಗಳಿಗೆ ಒಂದು ವರೆ ಲಕ್ಷ ಹಣವನ್ನು ಸಂಪಾದನೆ ಮಾಡಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.