ಗಾತ್ರದಲ್ಲಿ ನೋಡಲು ಚಿಕ್ಕದಾದರೂ ಬೆಳ್ಳುಳ್ಳಿಯ ಕೆಲಸ ಮಾತ್ರ ಅತಿ ಉಪಯುಕ್ತವಾದದ್ದು, ಹಲವು ಬಗೆಯ ಅಡುಗೆಯ ಬಳಕೆಯಲ್ಲಿ ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಒಂದು ಚಿಕ್ಕ ತುಂಡು ಬೆಳ್ಳುಳ್ಳಿಯನ್ನು ಹಸುವಿನ ಹಾಲಿನಲ್ಲಿ ಕುದಿಸಿ ಕುಡಿಯೋದ್ರಿಂದ ದೇಹಕ್ಕೆ ಎಷ್ಟೆಲ್ಲ ಲಾಭವಿದೆ ಹಾಗೂ ಇದರಿಂದ ಯಾವ ರೀತಿಯ ಅರೋಗ್ಯ ವೃದ್ಧಿಯಾಗುತ್ತದೆ ಅನ್ನೋದನ್ನ ತಿಳಿಯಿರಿ. ದೇಹಕ್ಕೆ ಪುಷ್ಟಿ ನೀಡುವಂತ ಹಾಲು ಬೆಳ್ಳಿಯ ಮಿಶ್ರಣ ಯಾವೆಲ್ಲ ಸಮಸ್ಯೆಗೆ ಪರಿಹಾರವನ್ನು ಒದಗಿಸುತ್ತದೆ ಅನ್ನೋದನ್ನ ನೀವು ತಿಳಿದು ನಿಮ್ಮ ಆತ್ಮೀಯರಿಗೂ ತಿಳಿಸುವ ಪ್ರಯತ್ನ ಮಾಡಿ.
ಹಾಲಿನಲ್ಲಿ ಬೆಳ್ಳುಳ್ಳಿಯನ್ನು ಹಾಕಿ ಕುದಿಸಿ ಕುಡಿಯೋದ್ರಿಂದ ಎಷ್ಟೆಲ್ಲ ಲಾಭವಿದೆ ಅನ್ನೋದನ್ನ ನೋಡುವುದಾದರೆ ಮೊದಲನೆಯದಾಗಿ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿದ್ದರೆ ಕಡಿಮೆ ಮಾಡುತ್ತದೆ, ಹಾಗೂ ದೇಹಕ್ಕೆ ಉತ್ತಮ ಅರೋಗ್ಯ ವೃದ್ಧಿಸುತ್ತದೆ. ಇನ್ನು ತಲೆಸುತ್ತು ಸಮಸ್ಯೆ ಬಂದ್ರೆ ಬೆಳ್ಳುಳ್ಳಿ ಪರಿಹಾರ ನೀಡುತ್ತದೆ, ಹೌದು ಹಾಲಿನಲ್ಲಿ ಬೆಳ್ಳುಳ್ಳಿಯನ್ನು ಹಾಕಿ ಕುಡಿಯೋದ್ರಿಂದ ತಲೆ ಸುತ್ತು ನಿವಾರಣೆಯಾಗುವುದು. ಗರ್ಭಿಣಿ ಮಹಿಳೆಯರಿಗೆ ಕಾಡುವಂತ ಪಿತ್ತ ವಾಂತಿ ಸಮಸ್ಯೆಗೆ ಅಡುಗೆ ಮನೆಯಲ್ಲಿಯೇ ಇದೆ ಇನ್ನೊಂದು ಮನೆಮದ್ದು ಅದು ಯಾವುದು ಅನ್ನೋದನ್ನ ಹೇಳುವುದಾದರೆ ಜೀರಿಗೆ ಹೌದು ಅಡುಗೆಗೆ ಬಳಸುವಂತ ಜೀರಿಗೆಯನ್ನು ನಿಂಬೆ ಹಣ್ಣಿನ ರಸದೊಂದಿಗೆ ಮಿಶ್ರಣ ಮಾಡಿ ಸೇವನೆ ಮಾಡುತ್ತ ಬಂದರೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
ದೇಹಕ್ಕೆ ಪುಷ್ಟಿ ನೀಡುವಂತ ಹಾಲು ಯಾವುದೇ ಅಡ್ಡ ಪರಿಣಾಮವಿಲ್ಲದೆ ದೈಹಿಕವಾಗಿ ಕಾಡುವಂತ ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವಂತ ಕೆಲಸ ಮಾಡುತ್ತದೆ. ಈ ಮನೆಮದ್ದು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.