ನಾವು ನಮ್ಮ ಜೀವನದಲ್ಲಿ ಬರುವಂತಹ ಕಷ್ಟಗಳಿಂದ ಮುಕ್ತಿ ಆಗಲು ಆಚಾರ್ಯ ಚಾಣಕ್ಯ ತಿಳಿಸಿರುವ ಈ ಮಾತುಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಪುಣ್ಯದ ಕೆಲಸ ಮಾಡದೇ ಎಲ್ಲರೂ ಪುಣ್ಯದ ಫಲವನ್ನು ಬಯಸುತ್ತಾರೆ ಆದರೆ ಪಾಪದ ಕೆಲಸವನ್ನೂ ಮಾಡಿ ಪಾಪದ ಕೆಲಸಕ್ಕೆ ತಕ್ಕ ಫಲವನ್ನು ಎಂದಿಗೂ ಕೂಡಾ ಬಯಸುವುದಿಲ್ಲ. ಪಾಪದ ಕೆಲಸಗಳನ್ನು ಮಾಡಿ ಎಂದಿಗೂ ಕೂಡಾ ಸಂಪಾದನೆ ಮಾಡಬೇಡಿ. ಸಾಲ ಆಗುವ ರೀತಿಯಲ್ಲಿ ಖರ್ಚು ಮಾಡಬಾರದು. ಬೇರೆಯವರಿಗೆ ನೋವಾಗುವಂತೆ ಎಂದಿಗೂ ಮಾತನಾಡಬಾರದು. ಚಿಂತೆ ಆಗುವ ರೀತಿಯಲ್ಲಿ ಎಂದಿಗೂ ಯೋಚನೆ ಮಾಡಬಾರದು. ಸುಳ್ಳು ಹೇಳಿ ಸಂಬಂಧಗಳನ್ನು ಕೆಡಿಸುವ ಬದಲು ನಿಜ ಹೇಳಿ ತಿಳಿಸಿ ಹೇಳಬೇಕು. ನಾವು ಇನ್ನೊಬ್ಬರಿಗೆ ಸಹಾಯ ಮಾಡುವುದಾದರೆ ಆ ಸಹಾಯದಿಂದ ನಮಗೆ ಬೇರೆ ಯಾವುದೇ ರೀತಿಯ ಲಾಭವನ್ನು ನಾವು ಅವರಿಂದ ಅಪೇಕ್ಷಿಸಬಾರದು. ನಾವು ಅಹಂಕಾರ ಇಲ್ಲದೆ ಜೀವನ ನಡೆಸುವುದು ಕಲಿಯಬೇಕು. ಯಾವುದೇ ಒಬ್ಬ ಒಳ್ಳೆಯ ವ್ಯಕ್ತಿಯ ಕಡೆಯಿಂದ ತಪ್ಪು ನಡೆದರೆ ಸಹನೆಯಿಂದ ಇರಬೇಕು. ಕೋಪಬರುವಾಗ ಒಂಟಿಯಾಗಿ ಬಂದು ಹೋಗುವಾಗ ಮಾತ್ರ ಜೊತೆಯಲ್ಲಿ ನಮ್ಮಲ್ಲಿರುವ ಎಲ್ಲಾ ಒಳ್ಳೆಯತನವನ್ನು ಕರೆದುಕೊಂಡು ಹೋಗುವುದು. ಕೋಪದ ಹಾಗೆ ತಾಳ್ಮೆ ಕೂಡ ಒಂಟಿಯಾಗಿರುತ್ತದೆ ಆದರೆ ನಮಗೆ ಸಾಕಷ್ಟು ಒಳ್ಳೆಯತನವನ್ನು ಕೊಟ್ಟು ಹೋಗುತ್ತದೆ.
ನಮ್ಮ ಸಮಾಜದಲ್ಲಿ ಬದಲಾವಣೆ ಆಗುವುದಿಲ್ಲ ಯಾತಕ್ಕಾಗಿ? ಇದಕ್ಕೆ ಕಾರಣ ನೋಡುವುದಾದರೆ ಬಡವರಲ್ಲಿ ಧೈರ್ಯ ಇರುವುದಿಲ್ಲ , ಮಧ್ಯಮ ವರ್ಗದ ಜನರಲ್ಲಿ ಸಮಯ ಇರುವುದಿಲ್ಲ ಹಾಗೂ ಶ್ರೀಮಂತ ವರ್ಗದ ಜನರಿಗೆ ಅವಶ್ಯಕತೆಯಿರುವುದಿಲ್ಲ. ಯಾರದ್ದಾದರೂ ಅಂತ್ಯಸಂಸ್ಕಾರಕ್ಕೆ ಹೋದರೆ ನಾವು ಅದು ಅವರ ಅಂತ್ಯದ ಸ್ಥಳಕ್ಕೆ ಕರೆದುಕೊಂಡು ಹೋಗುವುದು ಎಂದು ಎಂದಿಗೂ ತಿಳಿಯಬಾರದು. ಇದರ ಬದಲಿಗೆ ನಾವು ಸತ್ತ ವ್ಯಕ್ತಿಯು ನಮಗೂ ಕೂಡ ನಮ್ಮ ಅಂತ್ಯದ ಸ್ಥಳವನ್ನು ತೋರಿಸಲು ಕರೆದುಕೊಂಡು ಹೋಗುತ್ತಿರುತ್ತಾನೆ ಎನ್ನುವುದನ್ನು ತಿಳಿಯಬೇಕು. ಯಾವುದೇ ವ್ಯಕ್ತಿ ಇನ್ನೊಬ್ಬರ ಸಂತೋಷಕ್ಕಾಗಿ ಸೋಲನ್ನು ಒಪ್ಪಿಕೊಳ್ಳುಲು ಸಿದ್ಧನಾಗಿರುತ್ತಾನೆ ಅಂತಹ ವ್ಯಕ್ತಿಯಿಂದ ಎಂದಿಗೂ ನೀವು ಗೆಲ್ಲಲು ಸಾಧ್ಯವಿಲ್ಲ. ನಮ್ಮ ಜೀವನವನ್ನು ಎಂದಿಗೂ ಇನ್ನೊಬ್ಬರ ಜೀವನದ ಜೊತೆ ಹೋಲಿಕೆ ಮಾಡಿಕೊಳ್ಳಬಾರದು. ಸೂರ್ಯಚಂದ್ರರಿಬ್ಬರೂ ಹೊಳೆಯುತ್ತಾರೆ ಆದರೆ ಅವರವರ ಸಮಯ ಬಂದಾಗ ಮಾತ್ರ ಹಾಗೆಯೇ ಜೀವನದಲ್ಲಿ ಕೂಡ. ತೆಲುಗು ಬಾರಿ ಕೆಲವು ಸಮಯ ಸಂದರ್ಭಗಳಲ್ಲಿ ನಾವು ಸುಮ್ಮನೆ ಇರುತವುದು ತಪ್ಪೇನೂ ಅಲ್ಲ ಇದು ನಮ್ಮ ತಿಳುವಳಿಕೆ ಆಗಿರುತ್ತದೆ. ಜ್ಞಾನಿಗೆ ತಿಳಿ ಹೇಳಬಹುದು ಅಜ್ಞಾನಿಗು ತಿಳಿ ಹೇಳಬಹುದು ಆದರೆ ಅಭಿಮಾನಿಗೆ ಯಾರು ಎಂದಿಗೂ ತಿಳಿ ಹೇಳಲು ಸಾಧ್ಯವಿಲ್ಲ. ಆತನಿಗೆ ಕಾಲವೇ ತಿಳಿಸುತ್ತದೆ. ಸಂಸಾರವು ಅವಶ್ಯಕತೆಗಳಿಂದ ನಡೆಯುತ್ತದೆ. ನಿಮ್ಮ ಅವಶ್ಯಕತೆ ನಿಮಗೆ ಬೆಲೆ ಇದ್ದಾಗ ಮಾತ್ರ.
ನಿಮ್ಮ ರಹಸ್ಯವನ್ನು ಯಾರಿಗೂ ಹೇಳಬೇಡಿ. ನಿಮ್ಮ ರಹಸ್ಯ ತಿಳಿದುಕೊಂಡ ಬೇರೆ ಇನ್ಯಾರೋ ನಿಮ್ಮ ನಾಶಮಾಡುವುದು ಅಂತೂ ಕಂಡಿತ. ಮನುಷ್ಯನ ಒಳ್ಳೆತನವನ್ನು ನೋಡಿ ಎಲ್ಲರೂ ಸುಮ್ಮನಿರುತ್ತಾರೆ ಆದರೆ ಅದೇ ವ್ಯಕ್ತಿಯ ಒಂದು ತಪ್ಪನ್ನು ನೋಡಿ ಬಾಯಿ ಬರದ ಮೂಕ ಸಹ ಮಾತನಾಡುತ್ತಾನೆ. ನಮ್ಮನ್ನು ಎಷ್ಟು ಚೆನ್ನಾಗಿ ಗುರುತಿಸುತ್ತಾರೆ ಎನ್ನುವುದು ಮುಖ್ಯವಲ್ಲ ಯಾವ ಕಾರಣಕ್ಕಾಗಿ ನಮ್ಮನ್ನು ಗುರುತಿಸುತ್ತಾರೆ ಎನ್ನುವುದು ಮುಖ್ಯವಾಗಿರುವುದು.