ಜೀವನದಲ್ಲಿ ಖುಷಿಯಾಗಿರಲು ಈ ನಾಲ್ಕು ವ್ಯಕ್ತಿಗಳಿಂದ ಆದಷ್ಟು ದೂರವಿರಿ

0 8

ನಾವು ಜೀವನದಲ್ಲಿ ಖುಷಿಯಾಗಿರಲು ಯಾವ ರೀತಿಯ ಜನರಿಂದ ದೂರವಿರಬೇಕು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಕೆಲವು ವ್ಯಕ್ತಿಗಳು ನಿಮ್ಮೊಡನೆ ಮಾತನಾಡುತ್ತಿರುವಾಗ ನೀವು ಯಾವಾಗ ಮುಖ್ಯವಾದ ವಿಷಯ ಮಾತನಾಡುವಿರೋ ಅಥವಾ ನಿಮ್ಮ ಹೃದಯಕ್ಕೆ ಸಮೀಪವಾದ ಮಾತುಗಳನ್ನಾಡುತ್ತೀರೊ ಆಗ ಅವರು ಮಾತುಗಳನ್ನು ಕೇಳದೆ ಅಲ್ಲಿ ಇಲ್ಲಿ ಕಣ್ಣು ಹಾಯಿಸುತ್ತಾರೆ ನಿಮ್ಮನ್ನು ಸರಿಯಾಗಿ ನೋಡುವುದೇ ಇಲ್ಲ ಆಗ ತಿಳಿಯಬೇಕು ಈ ವ್ಯಕ್ತಿ ಮುಂದೊಂದು ದಿನ ನಿಮಗೆ ಮೊಸಮಾಡುತ್ತಾನೆ ಎಂದು ಇಂತವರಿಂದ ದೂರ ಇರಬೇಕು. ನಿಮ್ಮ ವೈಯಕ್ತಿಕ ವಿಷಯವನ್ನು ಇವರೊಂದಿಗೆ ಶೇರ್ ಮಾಡಬೇಡಿ ಏಕೆಂದರೆ ನೀವು ಹೇಳಿದ ಮಾತುಗಳನ್ನು ಅವರು ಬೇರೆಯವರಿಗೆ ಹರಡುತ್ತಾರೆ. ಯಾವಾಗಲೂ ನಿಮ್ಮ ಬಳಿ ಹೆಲ್ಪ್ ಕೇಳುವವರ ಬಳಿ ಇರಬೇಡಿ ಇಂತಹ ಜನರು ನಿಮ್ಮ ಸಹಾಯಕ್ಕೆ ಬರುವುದಿಲ್ಲ. ಇಂತವರು ನೀವು ಎಲ್ಲಿಯವರೆಗೆ ಸಹಾಯ ಮಾಡುತ್ತೀರೊ ಅಲ್ಲಿವರೆಗೆ ನಿಮ್ಮ ಜೊತೆ ಇರುತ್ತಾರೆ. ಯಾರು ನಿಮ್ಮವರೊ ಅವರು ಕಷ್ಟದಲ್ಲಿದ್ದಾಗ ಸಹಾಯ ಕೇಳುವ ಜೊತೆಗೆ ನಿಮಗೂ ಸಹಾಯ ಮಾಡುತ್ತಾರೆ.

ದುಡ್ಡಿನ ಮಾತುಗಳನ್ನಾಡುವವರಿಂದ ದೂರವಿರಿ ಎಲ್ಲ ವಿಷಯದಲ್ಲಿ ನಾನು ನನ್ನದೇ ಅನ್ನುತ್ತಾ ಪದೇ ಪದೇ ನನ್ನ ಬಳಿ ಅಷ್ಟು ಹಣ ಇದೆ ಇಷ್ಟು ಹಣ ಇದೆ ಎನ್ನುತ್ತಾರೆ ಇವರಿಂದ ದೂರವಿರಬೇಕು ಕಾರಣ ಇವರು ಯಾರಿಗೂ ಗೌರವ ಕೊಡುವುದಿಲ್ಲ ಹಾಗೂ ಬೇರೆಯವರನ್ನು ಕೀಳಾಗಿ ಕಾಣುತ್ತಾರೆ. ನಿಮ್ಮನ್ನು ಯಾವಾಗಲೂ ಹಾಸ್ಯ ಮಾಡುವವರಿಂದ ದೂರ ಇರಿ ಸ್ನೇಹಿತರ ಜೊತೆ ಇರುವಾಗ ಹಾಸ್ಯ ಇರಲಿ ಆದರೆ ಹೊಸದಾದ ಸ್ಥಳದಲ್ಲಿ ಬೇರೆ ವ್ಯಕ್ತಿಯ ಮುಂದೆ ಹಾಸ್ಯ ಮಾಡಿದರೆ ಇನಸಲ್ಟ್ ಆಗುತ್ತದೆ ಅಂತವರಿಂದ ದೂರ ಇರಿ ಅವರು ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತಾರೆ. ಅವರ ಮಾತುಗಳಿಂದ ನೀವು ಕುಗ್ಗಿಹೋಗುವಿರಿ. ಇದು ನೀವು ಲೂಸರ್ ಎಂದು ಅನಿಸುತ್ತದೆ ಜಗತ್ತಿನಲ್ಲಿ ಯಾರೂ ಲೂಸರ್ ಅಲ್ಲ ಅದು ನಮ್ಮ ಯೋಚನೆಯಾಗಿದೆ ಇಂತವರು ನಿಮ್ಮ ಸ್ನೇಹಿತರಾಗಿದ್ದರೆ ಅವರಿಗೆ ಎಲ್ಲಿ ಹೇಗೆ ಮಾತನಾಡಬೇಕು ಎಂಬ ತಿಳುವಳಿಕೆ ಇರುವುದಿಲ್ಲ ಆದ್ದರಿಂದ ಇಂತವರನ್ನು ಮುಖ್ಯವಾದ ಸ್ಥಳಕ್ಕೆ ಕರೆದುಕೊಂಡು ಹೋಗಬೇಡಿ ಅವರಿಂದ ನಿಮ್ಮ ಮರ್ಯಾದೆ ಹೋಗಬಹುದು. ಈ ಮಾಹಿತಿಯನ್ನು ಪ್ರತಿಯೊಬ್ಬರೂ ತಿಳಿಯಲೆಬೇಕು ಆದ್ದರಿಂದ ಇದನ್ನು ತಪ್ಪದೇ ಎಲ್ಲರಿಗೂ ತಿಳಿಸಿ.

Leave A Reply

Your email address will not be published.