ಹೂವಿನ ಮಾಲೆ ಕಟ್ಟಲು ಜನ ಸಿಗದೆ ಹೂ ಬೆಳೆಗಾರರು ಕಂಗಾಲಾಗಿದ್ದಾರೆ ಆದರೆ ಹೂವು ಕಟ್ಟುವ ಮಷೀನ್ ಬಂದಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕರ್ನಾಟಕದ ಬಾಗಲಕೋಟೆಯಲ್ಲಿ ರೈತರು ಹೂವು ಬೆಳೆದರೆ ಅದರ ಮಾಲೆ ಕಟ್ಟುವುದೆ ಒಂದು ಸವಾಲಾಗಿತ್ತು. ಮಾಲೆ ಕಟ್ಟಲು ಜನರು ಸಿಗದೆ ಹೂವಿನ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಅದನ್ನು ತಪ್ಪಿಸಲು ರಾಯಚೂರು ಕೃಷಿ ವಿಶ್ವವಿದ್ಯಾನಿಲಯದ ಸಂಸ್ಕರಣೆ ಹಾಗೂ ಆಹಾರ ತಂತ್ರಜ್ಞಾನ ವಿಭಾಗ ನೆರವಿಗೆ ಧಾವಿಸಿದೆ.

ವಿಶ್ವವಿದ್ಯಾನಿಲಯದ ಕೊಯ್ಲೋತ್ತರ ತಂತ್ರಜ್ಞಾನ ವಿಷಯದ ಸ್ನಾತ್ತಕೋತ್ತರ ವಿಧ್ಯಾರ್ಥಿ ಪ್ರವೀಣ ರೆಡ್ಡಿ ವಿದ್ಯುತ್ ಚಾಲಿತ ಹೂವು ಕಟ್ಟುವ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಯಂತ್ರವನ್ನು ಪರಿಚಯಿಸಲು ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದ ತೋಟಗಾರಿಕಾ ಮೇಳವನ್ನು ವೇದಿಕೆಯಾಗಿ ಬಳಸಿಕೊಂಡರು. ಈ ಯಂತ್ರ ಜನರ ಮೆಚ್ಚುಗೆ ಗಳಿಸಿತು.

ಹಳೆಯ ಹೊಲಿಗೆ ಯಂತ್ರ ಹಾಗೂ 2 ಬ್ಯಾಟರಿ ಬಳಸಿ ಈ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಯಂತ್ರ ಗಂಟೆಗೆ 900 ಗ್ರಾಂ ನಿಂದ 1 ಕೆ.ಜಿಯವರೆಗೆ ಹೂವುಗಳನ್ನು ಮಾಲೆಯಾಗಿ ಕಟ್ಟಬಹುದು. ದಿನಕ್ಕೆ 10-12 ಕೆ.ಜಿ ಹೂವಿನ ಮಾಲೆ ಸಿದ್ಧವಾಗುತ್ತದೆ. ಈ ಯಂತ್ರಕ್ಕೆ 28,000 ರೂ ಖರ್ಚಾಗಿದೆ. ಈ ಯಂತ್ರದಲ್ಲಿ ಮಲ್ಲಿಗೆ, ಸೇವಂತಿಗೆ, ಚಂಡು ಹೂವುಗಳ ಮಾಲೆಯನ್ನು ಮಾತ್ರ ಕಟ್ಟಬಹುದು.

ಸ್ನಾತಕೋತ್ತರ ಅಧ್ಯಯನದ ವಿಷಯದ ಪ್ರಾಜೆಕ್ಟ್ ವರ್ಕ್ ವಿಷಯದ ಹುಡುಕಾಟದಲ್ಲಿದ್ದಾಗ ಉಪನ್ಯಾಸಕರೊಬ್ಬರು ನೀಡಿದ ಸಲಹೆ ಈ ರೀತಿ ಸಾಕಾರಗೊಂಡಿದೆ ಹಾಗೂ ಅವರ ಮಾರ್ಗದರ್ಶನದಲ್ಲಿ ಈ ಯಂತ್ರ ಅಭಿವೃದ್ಧಿಯಾಗಿದೆ. ಒಟ್ಟಾರೆಯಾಗಿ ಈ ಯಂತ್ರ ರೈತರಿಗೆ ಉಪಯೋಗವಾಗಲಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!