ಇಡೀ ದೇಶವೇ ದುಃಖ ಪಡುವಂತಹ ಭಾರತದ ಅತ್ಯಂತ ಸುಪ್ರಸಿದ್ಧ ಗಾಯಕ ಡಾಕ್ಟರ್ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ನಿಧನರಾಗಿದ್ದಾರೆ. ಇದು ಇಡೀ ದೇಶಕ್ಕೆ ಒಂದು ದೊಡ್ಡ ಆಘಾತಕಾರಿ ವಿಷಯವಾಗಿದೆ. ಕೇಳುವುದಕ್ಕೆ ಸ್ವಲ್ಪ ಕಷ್ಟ ಎನಿಸಿದರೂ ಸತ್ಯ. ಗಾನಗಂಧರ್ವ ಡಾಕ್ಟರ್ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ತಮ್ಮ ಹಾಡುಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸಿದ್ದಾರೆ. ಇನ್ನು ಡಾಕ್ಟರ್ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಾರೆ ಎನ್ನುವ ಸುದ್ದಿ ಹರಡಿತ್ತು ಆದರೆ ಅಷ್ಟರಲ್ಲಾಗಲೇ ಏನಾಯಿತು ತಿಳಿಯದು.
ಇತ್ತೀಚೆಗಷ್ಟೇ ಸ್ಪಿಬಾಲಸುಬ್ರಮಣ್ಯಂ ಅವರು ತನಗೆ ಕೋರೋನ ಬಂದಿದೆ ಎಂದು ಫೇಸ್ಬುಕ್ ಗೆ ಬಂದು ತನ್ನ ಅಭಿಮಾನಿಗಳಿಗೆ ತಿಳಿಸಿದ್ದರು ಹಾಗೆ ಆಸ್ಪತ್ರೆಗೆ ದಾಖಲಾಗಿ ಹಲವಾರು ದಿನಗಳೇ ಕಳೆಯಿತು ಆಸ್ಪತ್ರೆಗೆ ದಾಖಲಾದಾಗಿನಿಂದ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗುವುದು ನಾವೆಲ್ಲರೂ ಟಿವಿ ಮಾಧ್ಯಮಗಳ ಮೂಲಕ ಗಮನಿಸಿರುತ್ತೇವೆ. ನಂತರದ ಕೆಲವು ದಿನಗಳಲ್ಲಿ ಎಸ್ಪಿಬಿ ಅವರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡಿತು ಇದರ ಕುರಿತಾಗಿ ಅವರ ಮಗನಾದ ಎಸ್ಪಿ ಚರಣ್ ಅವರು ಪ್ರತಿನಿತ್ಯ ಅಪ್ಡೇಟ್ ಮಾಡುತ್ತಲೇ ಇದ್ದರು. ಆದರೆ ಅವರು ಸಾಯುವ ಹಿಂದಿನ ದಿನವಷ್ಟೇ ಡಾಕ್ಟರ್ಗಳು ಅವರ ಆರೋಗ್ಯದ ಬಗ್ಗೆ ಎಸ್ಪಿಬಿ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಹೇಳಿದ್ದರು. ಮೊನ್ನೆಯಷ್ಟೇ ಅಂದರೆ ಸೆಪ್ಟೆಂಬರ್ 25ರಂದು ಡಾಕ್ಟರ್ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ತಮ್ಮ ೭೪ನೇ ವರ್ಷದಲ್ಲಿ ಅವರ ಅಪಾರ ಅಭಿಮಾನಿ ಬಳಗವನ್ನು ಹಾಗೂ ಅವರ ಪತ್ನಿ ಹಾಗೂ ಮಗ ಹಾಗೂ ಕುಟುಂಬವನ್ನು ತೊರೆದು ವಿಧಿವಶರಾಗಿದ್ದಾರೆ.
ಎಸ್ಪಿಬಿ ಅವರು ಬರೀ ಗಾಯಕ ಮಾತ್ರವಲ್ಲದೆ ಒಬ್ಬ ಚಿತ್ರನಟರು ಕೂಡ ಹೌದು ನಿರ್ದೇಶಕ ಕೂಡ ಆಗಿದ್ದರು. ಎಸ್ಪಿಬಿ ಅವರು ಇದುವರೆಗೂ ಎಲ್ಲಾ ಭಾಷೆಗಳಲ್ಲಿಯೂ 40,000 ಹಾಡುಗಳನ್ನು ಹಾಡಿ ಭಾರತಕ್ಕೆ ಕಿರೀಟ ವಾಗಿದ್ದರು ಎಂದರೆ ತಪ್ಪಾಗಲಾರದು. ಎಸ್ಪಿಬಿ ಅವರ ಪತ್ನಿ ಕೂಡ ಕರೊನಾದಿಂದ ಗುಣಮುಖರಾಗಿ ಮನೆ ಸೇರಿದ್ದರು ಆದರೆ ವಿಧಿ ಆಟವೇ ಬೇರೆಯಾಗಿತ್ತು ಇಲ್ಲಿ. ಎಸ್ಪಿಬಿ ಅವರಿಗೆ ತಗುಲಿದ ಕರೋನಾ ಅವರ ಗಾಯನವನ್ನು ಇಲ್ಲಿಗೆ ಸಂಪೂರ್ಣವಾಗಿ ನಿಲ್ಲಿಸಿ ಬಲಿತೆಗೆದುಕೊಂಡಿತ್ತು. ಆದರೂ ಕೂಡ ಎಸ್ಪಿಬಿ ಅವರು ದೈಹಿಕವಾಗಿ ನಮ್ಮೆಲ್ಲರನ್ನು ಅಗಲಿದ್ದಾರೆ ಹೊರತು ಮಾನಸಿಕವಾಗಿ ಅಲ್ಲ. ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಎಂದಿಗೂ ಎಸ್ಪಿಬಿ ಅವರು ಚಿರಾಯು. ಅವರ ಪ್ರತಿಯೊಂದು ಹಾಡುಗಳಲ್ಲಿ ಪ್ರತಿಯೊಂದು ನಟನೆಯಲ್ಲಿ ನಾವು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರನ್ನು ಕಾಣುತ್ತೇವೆ. ಎಸ್ಪಿಬಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.