ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸುವ ಡಿಟರ್ಜೆಂಟ್ ಪೌಡರ್ ಬಿಸಿನೆಸ್ ಹೇಗೆ ಮಾಡುವುದು ಹಾಗೂ ಅದರ ಖರ್ಚುವೆಚ್ಚಗಳು ಮತ್ತು ಲಾಭದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ಡಿಟರ್ಜೆಂಟ್ ಪೌಡರ್ ಬಿಸಿನೆಸ್ ಇದಕ್ಕೆ ಬಹಳ ಡಿಮ್ಯಾಂಡ್ ಇದೆ ಪ್ರತಿಯೊಂದು ಮನೆಯಲ್ಲಿ ಪ್ರತಿದಿನ ಡಿಟರ್ಜೆಂಟ್ ಬಳಸಲಾಗುತ್ತದೆ. ಆದ್ದರಿಂದ ಈ ಬಿಸಿನೆಸ್ ಮಾಡಿದರೆ ಲಾಭ ಗಳಿಸಬಹುದು. ಮಾರ್ಕೆಟ್ ನಲ್ಲಿ ಸಿಗುವ ರಿನ್, ಸರ್ಫೆಕ್ಸಲ್ ಡಿಟರ್ಜೆಂಟ್ ದುಬಾರಿ ಇರುವುದರಿಂದ ಮಧ್ಯಮ ವರ್ಗದವರು ಬಳಸುವುದಿಲ್ಲ. ಡಿಟರ್ಜೆಂಟ್ ಪೌಡರ್ ನ್ನು ಹೋಲ್ ಸೇಲ್ ದರದಲ್ಲಿ ಪರ್ಚೇಸ್ ಮಾಡಬೇಕು 1 ಕೆ.ಜಿ 20ರೂಪಾಯಿಗೆ ಸಿಗುತ್ತದೆ. ಪ್ಯಾಕಿಂಗ್ ಕವರ್ ಬೇಕಾಗುತ್ತದೆ. ಪ್ಯಾಕಿಂಗ್ ಕವರನ್ನು ಸೀಲ್ ಮಾಡಲು ಸೀಲಿಂಗ್ ಮಷೀನ್ ಬೇಕಾಗುತ್ತದೆ. ಈ ಮಷೀನ್ 500 ಅಥವಾ 1000 ರೂಪಾಯಿಗೆ ಅಮೆಜಾನ್ ಗಳಲ್ಲಿ ಸಿಗುತ್ತದೆ ಹಾಗೂ ಲೋಕಲ್ ಲ್ಲಿ ಸಿಗುತ್ತದೆ. ಪರ್ಚೇಸ್ ಮಾಡಿದ ಪೌಡರನ್ನು 5 ರೂಪಾಯಿ, 10 ರೂಪಾಯಿ, 1 ಕೆಜಿ, 2 ಕೆಜಿ 5 ಕೆ.ಜಿಯ ಪ್ಯಾಕ್ ಗಳನ್ನಾಗಿ ಮಾಡಿ ಮಾರ್ಕೆಟಿಂಗ್ ಮಾಡಬೇಕಾಗುತ್ತದೆ. ಈ ಬಿಸಿನೆಸ್ ಮಾಡಲು ಜಿಎಸ್.ಟಿ ರಿಜಿಸ್ಟ್ರೇಷನ್ ಮಾಡಿಸಬೇಕಾಗುತ್ತದೆ. ರಿನ್ ಈ ರೀತಿಯ ಡಿಟರ್ಜೆಂಟ್ ಗಳನ್ನು ಒಂದು ಕೆ.ಜಿಗೆ 200 ರೂಪಾಯಿಗಳಂತೆ ಮಾರಾಟ ಮಾಡುತ್ತಿದ್ದಾರೆ ಹಾಗಾಗಿ ನಾವು ಕಡಿಮೆ ಬೆಲೆಗೆ ಮಾರಾಟ ಮಾಡಬೇಕು. ಒಂದು ಕೆ.ಜಿಗೆ 130 ರೂಪಾಯಿಯಂತೆ ಮಾರಬೇಕು ಹೀಗೆ ಮಾಡಿದರೆ ಹೆಚ್ಚು ಸಂಪಾದನೆ ಮಾಡಬಹುದು.
ಇದರ ಖರ್ಚು ನೋಡುವುದಾದರೆ 100 ಕೆಜಿ ಪೌಡರ್ ನ್ನು ಪರ್ಚೇಸ್ ಮಾಡಿದರೆ ಒಂದು ಕೆಜಿಗೆ 20 ರೂಪಾಯಿ ಆಗಿರುವುದರಿಂದ 100 ಕೆಜಿಗೆ 2,000 ರೂ ಆಗಿರುತ್ತದೆ. ಪ್ಯಾಕಿಂಗ್ ಮಾಡಲು 500 ರೂ ಹಾಗೂ ಈ ಪೌಡರ್ ನ್ನು ಇಮ್ ಪೋರ್ಟ್ ಮಾಡಿಕೊಳ್ಳಲು ಟ್ರಾನ್ಸಫರ್ಟೇಷನ್ ಫೀಸ್ 500ರೂ ಟೋಟಲ್ 100 ಕೆಜಿಯ ಉತ್ಪಾದನೆಗೆ 3,000 ರೂ ಖರ್ಚಾಗುತ್ತದೆ. ಹೋಲ್ ಸೇಲ್ ಆಗಿ ಕೆಜಿಯನ್ನು 130 ರೂಪಾಯಿಗೆ ಸೇಲ್ ಮಾಡಿದರೆ 100 ಕೆಜಿಗೆ 13,000ರೂ ಸಿಗುತ್ತದೆ ಖರ್ಚನ್ನು ತೆಗೆದರೂ 10,000 ರೂ ಆದಾಯ ಗಳಿಸಬಹುದು ಮೊದಲು 100 ಕೆಜಿಯಿಂದ ಪ್ರಾರಂಭಿಸಿ ನಂತರ ಹೆಚ್ಚು ಪೌಡರ್ ನ್ನು ಪರ್ಚೇಸ್ ಮಾಡಿ ಮಾರಬಹುದು. ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.