ಕುಂದಾಪುರ ಈ ಉರು ಬರೀ ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೂ ಅಲ್ಲದೆ ಇಡೀ ಪ್ರಪಂಚದಾದ್ಯಂತ ಅನೇಕ ಕಾರಣಗಳಿಂದ ಹೆಸರುವಾಸಿಯಾಗಿದೆ. ಕುಂದಾಪುರ ಉರು ಯಾವುದಕ್ಕಾಗಿ ಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ? ಇಲ್ಲಿನ ವಿಶೇಷತೆ ಏನು ಯಾವೆಲ್ಲ ಮಹಾನ್ ವ್ಯಕ್ತಿಗಳು ಇಲ್ಲಿ ಜನಿಸಿದ್ದಾರೆ ಇಲ್ಲಿನ ತಿಂಡಿ ತಿನಿಸುಗಳು ಎನು, ಯಾವೆಲ್ಲ ಪ್ರವಾಸಿ ತಾಣಗಳು ಇಡೀ ವಿಶ್ವದಾದ್ಯಂತ ಕಂದಾಪುರಕ್ಕೆ ಆಕರ್ಷಕವಾಗಿದೆ ಈ ಎಲ್ಲಾ ಮಾಹಿತಿಗಳ ಕುರಿತಾಗಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕುಂದಾಪುರ ಇದು ಜಿಲ್ಲಾ ಕೇಂದ್ರವಾದ ಉಡುಪಿ ಇಂದ ಬರೀ 36 ಕಿಲೋಮೀಟರ್ ದೂರದಲ್ಲಿ ಇರುವ ಪ್ರಮುಖ ತಾಲೂಕು ಪಟ್ಟಣವಾಗಿದೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣಗಳಲ್ಲಿ ಕುಂದಾಪುರ ಕೂಡಾ ಒಂದು. ಪಶ್ಚಿಮ ದಿಕ್ಕಿನಲ್ಲಿ ಇರುವ ಸಮುದ್ರ ತೀರವು ಕುಂದಾಪುರ ತಾಲೂಕಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಇಲ್ಲಿರುವ ಗಂಗೊಳ್ಳಿಯಲ್ಲಿ ಇರುವ ಸೇತುವೆಯು ಉಡುಪಿ ಜಿಲ್ಲೆಯಲ್ಲಿಯೇ ಅತೀ ದೊಡ್ಡದು ಎನ್ನುವ ಖ್ಯಾತಿಯನ್ನು ಪಡೆದಿದೆ. ಬುಡುಗಿತಿಟ್ಟು , ಯಕ್ಷಗಾನ ಕಲೆಯನ್ನು ಬೆಳೆಸುವುದರಲ್ಲಿ ಕುಂದಾಪುರದ ಪಾತ್ರ ಮಹತ್ವವಾಗಿದೆ. ಇದೊಂದು ಪರ್ಯಾಯ ದ್ವೀಪದ ರೂಪದಲ್ಲಿ ಇರುವುದು ಕುಂದಾಪುರದ ಮತ್ತೊಂದು ವಿಶೇಷ ಆಗಿದೆ. ಉತ್ತರ , ಪಶ್ಚಿಮ ಹಾಗೂ ಪೂರ್ವ ದಿಕ್ಕಿನಲ್ಲಿ ನೀರಿನಿಂದ ಕೂಡಿದೆ. ಅಂದರೆ, ಸಮುದ್ರ, ಗಂಗೊಳ್ಳಿ ಹೊಳೆ, ಹಾಲಾಡಿ ಹೊಳೆ ಹಾಗೂ ಕೊಣಿ ಹಿನ್ನೀರಿನ ಪ್ರದೇಶ ಈ ಪಟ್ಟಣವನ್ನು ಆವರಿಸಿದೆ ಹಾಗೂ ದಕ್ಷಿಣದಲ್ಲಿ ಮಾತ್ರ ನೆಲವಿರಿವ ಪ್ರದೇಶಗಳನ್ನು ನಾವಲ್ಲಿ ಕಾಣಬಹುದು.

ಕುಂದಾಪುರ ಊರಿನ ಹೆಸರು ಪಂಚಗಂಗಾವಳಿ ತೀರದಲ್ಲಿ ಕುಂದವರ್ಮ ಎಂಬ ರಾಜ ಕಟ್ಟಿಸಿದ ಕುಂದೇಶ್ವರ ದೇವಸ್ಥಾನದಿಂದ ಬಂದಿದೆ ಎಂಬ ಪ್ರತೀತಿ. ವಿಜಯ ನಗರ ಸಾಮ್ರಾಜ್ಯದ ಪತನದ ನಂತರ ಬಲಿಷ್ಠವಾದ ಕೆಳದಿಯ ಅರಸರು ಬಸ್ರೂರು ಅನ್ನು ತಮ್ಮ ಪ್ರಮುಖ ಬಂದರು ಆಗಿಸಿಕೊಂಡರು. ಪೋರ್ಚುಗೀಸರು 16 ನೇ ಶತಮಾನದಲ್ಲಿ ಕುಂದಾಪುರದ ಸುತ್ತಲೂ ಬಂದು ನೆಲೆಸಿದರು. ಕಾಲಕ್ರಮೇಣ ಬಸ್ರೂರು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡು, ಕುಂದಾಪುರ ಅಭಿವೃದ್ಧಿ ಹೊಂದಿತು. ಇಲ್ಲಿನ ಸುತ್ತಮುತ್ತ ಯಥೇಚ್ಚವಾಗಿ ಬೆಳೆಯುವ ಮಲ್ಲಿಗೆ ಅಂದರೆ ಕುಂದಾ. ಇದರಿಂದಾಗಿ ಕುಂದಾಪುರ ಹೆಸರು ಬರಲು ಕಾರಣ ಆಯಿತು ಎಂದು ಇನ್ನೊಂದು ಇತಿಹಾಸ ಸಾರುತ್ತದೆ. ಕುಂದಾಪುರದ ಕನ್ನಡ ಇದು ಇಡೀ ಕರ್ನಾಟಕದಲ್ಲಿಯೇ ಬಹಳ ಸುಂದರವಾದ ಭಾಷೆ ಆಗಿದೆ. ಈ ಕಾರಣಕ್ಕಾಗಿಯೇ ಕುಂದಾಪುರ ಕೂಡಾ ಹೆಸರುವಾಸಿ ಆಗಿದೆ.

ಕುಂದಾಪುರ ಹಲವಾರು ಶ್ರೇಷ್ಟ ವ್ಯಕ್ತಿಗಳಿಗೆ ಜನ್ಮ ನೀಡಿದ ತವರೂರು ಆಗಿದೆ. ಚಿತ್ರರಂಗ, ಕ್ರೀಡೆ, ಸಾಹಿತ್ಯ ಹೀಗೆ ಇನ್ನೂ ಹಲವಾರು ರೀತಿಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ತವರೂರು ಕುಂದಾಪುರ. ಅವರಲ್ಲಿ ಮುಖ್ಯವಾಗಿ ಕೆಲವು ಸಾಧಕರನ್ನು ನಾವು ನೋಡುವುದಾದರೆ ಪ್ರಕಾಶ್ ಪಡುಕೋಣೆ ಪ್ರಸಿದ್ಧ ಬ್ಯಾಡ್ಮಿಂಟನ್ ಆಟಗಾರ, ಗುರುದತ್ ಹಿಂದಿ ಚಲನಚಿತ್ರ ನಟ ನಿರ್ದೇಶಕ, ಕಾಶಿನಾಥ್ ಕನ್ನಡ ಚಲನಚಿತ್ರ ನಟ ನಿರ್ದೇಶಕ, ಗೋಪಾಲ ಕೃಷ ಅಡಿಗಾರ್, ಕನ್ನಡ ಚಲನಚಿತ್ರ ನಟ ನಿರ್ದೇಶಕ ಉಪೇಂದ್ರ, ಜ್ಞಾನ ಪೀಠ ಪ್ರಶಸ್ತಿ ವಿಜೇತರು ಕೋಟಾ ಶಿವರಾಮ ಕಾರಂತರು, ದಕ್ಷಿಣ ಭಾರತದ ಜನಪ್ರಿಯ ನಟ ಕೋಕಿಲ ಮೋಹನ್, ಕನ್ನಡ ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್, ಹನಿಗವಿ ಡುಂಡಿರಾಜ್, ದೀಪಿಕಾ ಪಡುಕೋಣೆ, ಕಬಡ್ಡಿ ಪಟು ತ್ರಿಶಾಂಕ್ ದೇವಾಡಿಗ, ಪ್ರಸಿದ್ಧ ಸಂಗೀತ ನಿರ್ದೇಶಕ ರವಿ ಬಸ್ರೂರು, ಕನ್ನಡ ಚಲನ ಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ ಹೀಗೆ ಅನೇಕರು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕುಂದಾಪುರಕ್ಕೆ ಅತೀ ಹೆಚ್ಚು ಹೆಸರು ತಂದಿದ್ದಾರೆ.

ಕುಂದಾಪುರಕ್ಕೆ ರಸ್ತೆಯ ಸೌಕರ್ಯವೂ ಬಹಳ ಚೆನ್ನಾಗಿ ಇದೆ ಇಲ್ಲಿರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು ಒಂದು ಕಡೆ ಮಂಗಳೂರು ಹಾಗೂ ಇನ್ನೊಂದು ಕಡೆ ಉಡುಪಿಗೆ ಸಂಪರ್ಕಿಸುತ್ತದೆ. ಜೊತೆಗೆ ಕರ್ನಾಟಕದ ಇತರ ನಗರಗಳಾದ ಹುಬ್ಬಳ್ಳಿ, ಧಾರವಾಡ, ಬೆಂಗಳೂರು ಮುಂತಾದ ಪ್ರಮುಖ ನಗರಗಳಿಗೆ ಸಂಪರ್ಕ ಒದಗಿಸುತ್ತದೆ. ಕುಂದಾಪುರದಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿ ರೈಲ್ವೆ ನಿಲ್ದಾಣ ಇದೆ. ಇಲ್ಲಿಂದ ಮುಂಬೈ, ಮಂಗಳೂರು, ಕೊಚ್ಚಿ ಮೊದಲಾದ ಸ್ಥಳಗಳಿಗೆ ಕೂಡಾ ಸಂಪರ್ಕ ಇದೆ. ಕುಂದಾಪುರದ ಸುತ್ತ ಮುತ್ತ ಹಲವಾರು ಪ್ರವಾಸಿ ತಾಣಗಳು ಇವೆ. ಅವುಗಳಲ್ಲಿ ಮುಖ್ಯವಾಗಿ ಮರವಂತೆ, ಬೈಂದೂರು, ಸೋಮೇಶ್ವರ ಕಡಲ ತೀರ, ಕೋಸಲ್ಲಿ ಜಲಪಾತ, ಗ್ರಾಸಿ, ಮೆಕ್ಕೆ ಕಟ್ಟು, ಹಾಲಾಡಿ, ಆನೆಗುಡ್ಡೆ ಕುಂಭಾಶಿ, ಕಮಲಶಿಲೆ, ಸಾಲಿಗ್ರಾಮ, ಹಟ್ಟಿ ಅಂಗಡಿ ಹಾಗೂ ಇನ್ನೂ ಹಲವಾರು ಪ್ರವಾಸಿ ಸ್ಥಳಗಳು ಇವೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!